ರಾಯರ ಆರಾಧನಾ ಮಹೋತ್ಸವ ಇಂದಿನಿಂದ

H.Mallikarjun
H.Mallikarjun - Kalyanasiri
1 Min Read

King’s worship festival starts from today

 

ರಾಯರ ಆರಾಧನಾ ಮಹೋತ್ಸವ ಇಂದಿನಿಂದ

ಜಾಹೀರಾತು

ಕೊಪ್ಪಳ: ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ
ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. ೨೯ರಿಂದ ೩೧ರ
ತನಕ ಮೂರು ದಿನಗಳ ಕಾಲ ರಾಘವೇಂದ್ರ
ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವ
ನಡೆಯಲಿದ್ದು ಇದರ ಅಂಗವಾಗಿ ವಿವಿಧ
ಕಾರ್ಯಕ್ರಮಗಳನ್ನು ಮಠದ ಆವರಣದಲ್ಲಿ
ಹಮ್ಮಿಕೊಳ್ಳಲಾಗಿದೆ.

ರಾಯರ ಮಠದ ಪ್ರಧಾನ ಅರ್ಚಕ ಪಂಡಿತ್ ರಘು
ಪ್ರೇಮಾಚಾರ್ಯ ಮುಳಗುಂದ ಅವರಿಂದ ಆ. ೨೫ರಂದು
ಆರAಭವಾಗಿರುವ ರಾಘವೇಂದ್ರವಿಜಯ ಪ್ರವಚನ ಆ.
೩೦ರ ತನಕ ಸಂಜೆ ೬.೧೫ರಿಂದ ೭.೧೫ರ ತನಕ ಜರುಗಲಿದೆ.

ಪೂರ್ವಾರಾಧನೆ ಜರುಗುವ ಶನಿವಾರ ಬೆಳಿಗ್ಗೆ ಐದು
ಗಂಟೆಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ
ಅಭಿಷೇಕ, ಮದ್ಘಾಗವತ ಪ್ರವಚನ, ನೈವೇದ್ಯ,
ಹಸ್ತೋದಕ, ಅಲಂಕಾರ, ತೀರ್ಥ ಪ್ರಸಾದ
ಕಾರ್ಯಕ್ರಮ ನಡೆಯಲಿವೆ. ಸಂಜೆ ೬ ಗಂಟೆಗೆ
ಅರ್ನವಬುವಾ ಕೊಲ್ಲಾಪುರ ಅವರಿಂದ ಭಕ್ತಿ ಸಂಗೀತ, ೮
ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ೯.೩೦ಕ್ಕೆ
ರಥೋತ್ಸವ, ಸ್ವಸ್ತಿವಾಚನ ತೊಟ್ಟಿಲು ಪೂಜೆ, ಫಲ
ಮಂತ್ರಾಕ್ಷತೆ ಇರಲಿದೆ.

ಮಧ್ಯಾರಾಧನೆ ನಡೆಯುವ ಆ. ೩೦ರಂದು ಬೆಳಿಗ್ಗೆ
ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ೬ ಗಂಟೆಗೆ
ಬೆAಗಳೂರಿನ ಆದಿತ್ಯ ಪಲ್ಲಕ್ಕಿ ಅವರಿಂದ ಭಕ್ತಿ ಸಂಗೀತ,
ಪAಡಿತ ಪುರಸ್ಕಾರ, ೮.೩೦ಕ್ಕೆ ರಾಘವೇಂದ್ರ ವಿಜಯ
ಪ್ರವಚನ ಮಂಗಲ ಮಹೋತ್ಸವ ಹಾಗೂ ೯.೩೦ಕ್ಕೆ
ರಥೋತ್ಸವ ನಡೆಯಲಿದೆ. ಉತ್ತರಾರಧನೆ ಜರುಗುವ
ಆ. ೩೧ರಂದು ಮಧ್ಯಾಹ್ನ ೧೨.೧೫ಕ್ಕೆ ರಥೋತ್ಸವ
ಹಮ್ಮಿಕೊಳ್ಳಲಾಗಿದೆ. ಸಂಜೆ ೬ ಗಂಟೆಗೆ ಪುತ್ತೂರು
ನರಸಿಂಹ ನಾಯಕ ಅವರಿಂದ ಭಕ್ತಿ ಸಂಗೀತ, ರಾತ್ರಿ ೮
ಗಂಟೆಗೆ ಸೇವಾ ಪುರಸ್ಕಾರ, ೮.೧೫ಕ್ಕೆ ಗುಡೆಬೆಲ್ಲೂರಿನ
ಪಂಡಿತ್ ವೆಂಕಟನರಸಿAಹಾಚಾರ್ಯ ಅವರಿಂದ ಪ್ರವಚನ
ನಡೆಯಲಿದೆ ಎಂದು ಮಠದ ಅಧ್ಯಕ್ಷ ಅನಂತ
ಆಚಾರ್ಯ ಹುಲಗಿ ಹಾಗೂ ವ್ಯವಸ್ಥಾಪಕ ಜಗನ್ನಾಥ
ಹುನಗುಂದ ತಿಳಿಸಿದ್ದಾರೆ.

Total Views: 0
ಜಾಹೀರಾತು
Share This Article