ಕರ್ಕಿಹಳ್ಳಿಯಲ್ಲಿ ಮಹಾರಥೋತ್ಸವ ಜು. ೨೯ರಂದು
Maharathotsava in Karkihalli on June 29

ಕೊಪ್ಪಳ: ತಾಲ್ಲೂಕಿನ ಕರ್ಕಿಹಳ್ಳಿಹಳ್ಳಿಯಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಸನ್ನಿಧಾನದಲ್ಲಿ ಬುಧವಾರ ಮಧ್ಯಾಹ್ನ ೧ ಗಂಟೆಗೆ ೨೨ನೇ ವರ್ಷದ ಮಹಾರಥೋತ್ಸವ ಜರುಗಲಿದೆ.
ಮಹಾರಥೋತ್ಸವದ ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಸೋಮವಾರ ಮಹಾಮೃತ್ಯುಂಜಯ ಹೋಮ, ದುರ್ಗಾದೇವಿಗೆ ದೀಪ ನಮಸ್ಕಾರ ನಡೆದವು.
ಮಂಗಳವಾರ ಬಾಲಗಣಪತಿ ಹೋಮ, ಬೆಳಿಗ್ಗೆ ೧೧ ಗಂಟೆಗೆ ಉಛ್ರಾಯ ಕಾರ್ಯಕ್ರಮ, ಚಿದಂಬರ ದೇವಸ್ಥಾನದಿಂದ ಚೌಡೇಶ್ವರಿ, ಮಾರುತೇಶ್ವರ ಮತ್ತು ಪತ್ರೀಶ್ವರ ದೇವಸ್ಥಾನದ ಮಾರ್ಗವಾಗಿ ಮಠಕ್ಕೆ ತಲುಪಲಿದೆ. ಸಪ್ತಶತಿ ಪಾರಾಯಣ ಹಾಗೂ ನವಚಂಡಿ ಹೋಮ ಜರುಗಲಿವೆ.
ಜುಲೈ ೨೯ರಂದು ಅಖಂಡವೀಣಾ ಮಂಗಳ, ಮಹಾರಥೋತ್ಸವದ ರಥಾಂಗ ಹೋಮ, ರಥೋತ್ಸವ, ಆರತಿ, ನೈವೇದ್ಯ, ಅನ್ನಸಂತರ್ಪಣೆ ಮತ್ತು ಸಂಜೆ ಸಿಡಿಮದ್ದಿನ ಸಂಭ್ರಮ ಇರಲಿದೆ. ೩೦ರಂದು ಮೃತ್ಯುಂಜಯೇಶ್ವರನಿಗೆ ಅಭಿಷೇಕ, ಬುತ್ತಿಪೂಜೆ, ಅವಭೃತ ಸ್ನಾನ, ಮಹಾನೈವೇದ್ಯ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಜಿಲ್ಲೆ ಮತ್ತು ಹೊರಜಿಲ್ಲೆಗಳ ಸ್ವಾಮೀಜಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

