A request has been made to insist on conducting the RPC and Kalyana Karnataka exams at the same center in the Civil Police recruitment exam happening on August 2.
ಆಗಸ್ಟ್ 2 ರಂದು ನಡೆಯುವ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆರ್.ಪಿ.ಸಿ. ಹಾಗೂ ಕಲ್ಯಾಣ ಕರ್ನಾಟಕ ಪರೀಕ್ಷೆಗಳನ್ನು ಒಂದೇ ಕೆಂದ್ರದಲ್ಲಿ ನಡೆಸಲು ಆಗ್ರಹಿಸಿ ಮನವಿ.
ಕೊಪ್ಪಳ.: ಆಗಸ್ಟ್ 2 ರಂದು ನಡೆಯುವ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆರ್.ಪಿ.ಸಿ. ಹಾಗೂ ಕಲ್ಯಾಣ ಕರ್ನಾಟಕ ಪರೀಕ್ಷೆಗಳನ್ನು ಒಂದೇ ಕೆಂದ್ರದಲ್ಲಿ ನಡೆಸಲು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಆಗಸ್ಟ್ ಎರಡರಂದು ನಡೆಯುವ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆರ್.ಪಿ.ಸಿ. ಹಾಗೂ ಕಲ್ಯಾಣ ಕರ್ನಾಟಕ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಬೇರೆ ಬೇರೆ ಊರುಗಳಲ್ಲಿ ಪರೀಕ್ಷಾ ಕೇಂದ್ರ ನೀಡಲಾಗಿದೆ. ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಹೋಗಲು ಹಲವು ಕಡೆ ಎರಡು ಗಂಟೆಗಿಂತ ಹೆಚ್ಚು ಸಮಯ ಬೇಕು ಹಾಗೂ ಬೆಂಗಳೂರಿನಂತ ಟ್ರಾಫಿಕ್ ನಗರದಲ್ಲಿ ಬಹಳ ಅಂತರದಲ್ಲಿ ಎರಡು ಕೇಂದ್ರ ನೀಡಿದ್ದು ಅಭ್ಯರ್ಥಿಗಳು ಪ್ರಯಾಣಿಸಲು ಸಮಯ ಸಿಗುವುದಿಲ್ಲ. ಆದರೆ ಸೂಚನೆಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿ ಎರಡು ಗಂಟೆ ಮೊದಲು ಇರಲು ತಿಳಿಸಲಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಿ 2 ಗಂಟೆ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವುದು ಅಸಾಧ್ಯವಾದದ್ದು ಹಾಗೂ ಅತ್ಯಂತ ಅವೈಜ್ಞಾನಿಕವಾದದ್ದು. ಇದು ಅಭ್ಯರ್ಥಿಗಳಲ್ಲಿ ಆತಂಕ, ಒತ್ತಡವನ್ನು ಉಂಟುಮಾಡಿದೆ.
ಆದ್ದರಿಂದ ಈ ಕೂಡಲೇ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದನ್ನು ಸರಿಪಡಿಸಿ ಅಭ್ಯರ್ಥಿಗಳಿಗೆ ಬೆಳಿಗ್ಗೆ ಪರೀಕ್ಷೆ ಬರೆದ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಪರೀಕ್ಷೆಗೂ ಅವಕಾಶ ನೀಡಬೇಕು. ಪರೀಕ್ಷೆಗೆ ಕೇವಲ ನಾಲ್ಕು ದಿನ ಇರುವುದರಿಂದ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಮನವಿ ಪತ್ರದ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಗ್ರಹಿಸಲಾಯಿತು.
ನಿಯೋಗದಲ್ಲಿ ಉದ್ಯೋಗ ಅಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಶರಣು ಪಾಟೀಲ್ ಉದ್ಯೋಗಾಕಾಂಕ್ಷಿಗಳಾದ ಮಾರುತಿ, ಸೋಮನಾಥ್, ಮಲ್ಲಿಕಾರ್ಜುನ್,ಆಕಾಶ್, ಅಣ್ಣಪ್ಪ, ಸಿದ್ರಾಮೇಶ್, ಶರಣು ಕನಕಗಿರಿ, ರವಿ ಹೂವಿನಳ್ ಮುಂತಾದವರು ಭಾಗವಹಿಸಿದ್ದರು.
Total Views:
1


