ಪ್ರಜಾತಾಂತ್ರಿಕ ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ.
Protest condemning democratic baton charges and tear gas shell attacks
ಕೊಪ್ಪಳ: ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಮತ್ತು ಪ್ರಗತಿಪರ ಸಂಘಟನೆ ಕೊಪ್ಪಳ ನೇತೃತ್ವದಲ್ಲಿ ನಿನ್ನೆ (ಸೋಮವಾರ ) ನಡೆದ ಸಂಸತ್ ಮಾರ್ಗದತ್ತ ನಡೆಯಬೇಕಿದ್ದ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಅಪ್ರಜಾತಾಂತ್ರಿಕ ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್ ದಾಳಿಯನ್ನು ತೀವ್ರವಾಗಿ ಖಂಡಿಸಿ
ಇಂದು ಅಶೋಕ್ ವೃತ್ತ ದಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಶರಣು ಪಾಟೀಲ್ ಜಿಲ್ಲಾ ಕಾರ್ಯದರ್ಶಿ ಮಾತನಾಡಿ “ಘೋಷಿಸಲ್ಪಟ್ಟಿದ್ದ ಸಂಸತ್ ಮೆರವಣಿಗೆ ಆರಂಭವಾಗುವ ಮುನ್ನವೇ, ಪ್ರತಿಭಟನಾಕಾರರು ಸಂಸತ್ ಮಾರ್ಗದತ್ತ ಹೆಜ್ಜೆಯಿಡುವ ಮೊದಲೇ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೊಲೀಸರನ್ನು ಬಳಸಿಕೊಂಡು ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವ ಉದ್ದೇಶದಿಂದ ಈ ದಮನಕಾರಿ ಕ್ರಮ ಕೈಗೊಂಡಿದೆ. ನಂತರ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿರುವುದು ಸರ್ಕಾರದ ಅಪ್ರಜಾತಾಂತ್ರಿಕ ಧೋರಣೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.” ಎಂದು ಖಂಡಿಸಿದರು
ಪ್ರಗತಿಪರ ಸಂಘಟನೆಗಳ ಜಿಲ್ಲಾ ಮುಖಂಡರಾದ ಬಸವರಾಜ್ ಶೀಲವಂತರ ಮಾತನಾಡಿ “ದೇಶದ ಯುವಜನತೆಗೆ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಭ್ರಷ್ಟಾಚಾರಮುಕ್ತ ಪರೀಕ್ಷಾ ವ್ಯವಸ್ಥೆಯನ್ನು ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದೇ ರೀತಿ, ದೇಶದ ಲಕ್ಷಾಂತರ ವಿದ್ಯಾವಂತ ಯುವಜನತೆಗೆ ಉದ್ಯೋಗ ಒದಗಿಸುವಲ್ಲಿಯೂ ಸರ್ಕಾರ ವಿಫಲವಾಗಿದ್ದು, ಅವರ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಈ ವೈಫಲ್ಯಗಳನ್ನು ಮರೆಮಾಚಲು ಸರ್ಕಾರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸುವ ಮಾರ್ಗವನ್ನು ಅನುಸರಿಸುತ್ತಿದೆ. ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಹಾಗೂ ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವ ಕ್ರಮವೂ ಸರ್ಕಾರದ ದಮನಕಾರಿ ಮನೋಭಾವಕ್ಕೆ ಸಾಕ್ಷಿಯಾಗಿದೆ.”ಎಂದು ಹೇಳಿದರು.
ಪ್ರತಿಭಟನೆ ಸಂದರ್ಭದಲ್ಲಿ ಎ ಶರಣು ಗಡ್ಡಿ, ಜಿಲ್ಲಾ ಸಮತಿ ಸದಸ್ಯ ಸುಭಾನ್ ನೀರಲಗಿ ಕಾರ್ಯಕರ್ತರು ಅದ ಶಿವುಕುಮಾರ್, ಮಂಗಳೆಶ ರಾತೋಡ್, ಹೊನ್ನೂರ್, ಪ್ರಗತಿಪರ ಸಂಘಟನೆ ಗಳ ಮುಖಾಂಡರಾದ ಬಸವರಾಜ್ ಶೀಲವಂತರ, ಮಹಾಂತೇಶ್ ಕೊತಬಾಳ, ಎಸ್ ಎ ಗಫಾರ್, ಚನ್ನಬಸಪ್ಪ ಪಾಸ್ಟರ್, ಮಕ್ಬಲ್ ಸಾಬ್, ಧರ್ಮರಾಜ್ ಗೋನಾಳ್, ಮುಂತಾದವರು ಭಾಗವಹಿಸಿದ್ದರು..
Total Views:
0
