
Content creators and influencers from European countries visit various tourist spots in Anjanadri and Anegundi.
ಅಂಜನಾದ್ರಿ, ಆನೆಗುಂದಿಯ ವಿವಿಧ ಪ್ರವಾಸಿ ತಾಣಗಳಿಗೆ
ಯುರೋಪ್ ದೇಶಗಳ ಕಂಟೆಂಟ್ ಕ್ರಿಯೇಟರ್ಸ್ & ಇನ್ ಫ್ಲೂಯನ್ಸರ್ಸ್ ಭೇಟಿ

—-
ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವತಿಯಿಂದ ಯುರೋಪ್ ದೇಶಗಳ ಕಂಟೆಂಟ್ ಕ್ರಿಯೇಟರ್ಸ್ & ಇನ್ ಫ್ಲೂಯನ್ಸರ್ಸ್ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಮತ್ತು ಆನೆಗುಂದಿಯ ವಿವಿಧ ಪ್ರವಾಸಿ ತಾಣಗಳಿಗೆ ಗುರುವಾರ (ಜು. 2ರಂದು) ಭೇಟಿ ನೀಡಿದರು.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಮತ್ತು ಆನೆಗುಂದಿಗೆ ಆಗಮಿಸಿದ ಯುರೋಪ್‌ನ ವಿವಿಧ ದೇಶಗಳ ಒಟ್ಟು 22 ಜನ ಕಂಟೆಂಟ್ ಕ್ರಿಯೇಟರ್ಸ್ & ಇನ್ ಫ್ಲೂಯನ್ಸರ್ಸ್ (Content creators and Influencers) ರವರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಮತ್ತು ಆನೆಗುಂದಿಯ ವಿವಿಧ ಪ್ರವಾಸಿ ತಾಣಗಳ ಸಂದರ್ಶನ ಮಾಡಿಸಲಾಯಿತು. ನಂತರ ಪ್ರತಿ ಸದಸ್ಯರಿಗೆ ಇಲಾಖೆಯ ವತಿಯಿಂದ ಕೊಪ್ಪಳ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಕುರಿತು ಬ್ರೋಚರ್ಸಗಳನ್ನು ನೀಡಿ ಪ್ರವಾಸೋದ್ಯಮ ಇಲಾಖೆಯ ಪರವಾಗಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್. ತಳಕೇರಿ, ಹೊಸಪೇಟೆಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಶೆಜೇಶ್ವರ, ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


