ನಾಡು ಕಂಡ ಮುಖ್ಯಮಂತ್ರಿಯೊಬ್ಬರ ದಿನಚರಿ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
The daily routine of a chief minister who has seen the country.




ನಾಡು ಕಂಡ ಮುಖ್ಯಮಂತ್ರಿಯೊಬ್ಬರ ದಿನಚರಿ.

ಜಾಹೀರಾತು

ರಾಮಕೃಷ್ಣ ಹೆಗಡೆ ( 1926–2004) 1983–88 ರ ಅವಧಿಯಲ್ಲಿ ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು. ಆಡಳಿತ,ಅಭಿವೃದ್ಧಿಯಲ್ಲಿ ಹೊಸ ದಿಕ್ಕುಗಳತ್ತ ಯೋಚಿಸಿದವರು. ಅವರ ಆಡಳಿತದ ಅವಧಿಯಲ್ಲಿ ಕಂಡ ಯೋಜನೆಗಳು ಹಲವು ಅವುಗಳಲ್ಲಿ ಒಂದು, ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಯೋಜನೆ. 8/6/1985 ರಲ್ಲಿ ಆರಂಭಗೊಂಡಿದ್ದ ಈ ಯೋಜನೆ ಈಗಲೂ ಮುಂದುವರಿದಿದೆ.ಆ ಕಾಲದಲ್ಲಿ 48 ಲಕ್ಷ ಶಾಲಾ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು.

ಅವುಗಳ ಹೊರತಾಗಿಯೂ ಇಲ್ಲಿರುವ ಚಿತ್ರಗಳು ಬೇರೊಂದು ಚಿತ್ರಣವನ್ನೇ ನೀಡುತ್ತಿವೆ.

ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮುಂಜಾನೆಯ ವಾಯು ವಿಹಾರ. ಪತ್ನಿ ಶಕುಂತಲಾ ಹೆಗಡೆ ಅವರೊಂದಿಗೆ.

ಇದು ನಿತ್ಯ ಧರ್ಮದರ್ಶನ ಕಾರ್ಯ ಕ್ರಮ. ಮನವಿಗಳ ಸ್ವೀಕಾರ ಸ್ವತಃ ಮುಖ್ಯ ಮಂತ್ರಿಗಳಿಂದಲೇ.

ಅವರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಲಾಗಿದ್ದ ಪತ್ರಿಕಾ ಸಂದರ್ಶನ ಒಂದನ್ನು ಓಡುವಾಗ ಸಿಕ್ಕ ಮಾಹಿತಿ ಇದು. ಇನ್ನೇನು ಬರಲು ಸಜ್ಜಾಗಿರುವ ಹೊಸ ವರ್ಷ ಅವರ ಜನ್ಮ ಶತಮಾನೋತ್ಸವ ವರ್ಷವೂ ಹೌದು!

Total Views: 0
Share This Article