
AICCTU condemns irresponsible actions of Gangavati labour officials

ಗಂಗಾವತಿ ಕಾರ್ಮಿಕ ಅಧಿಕಾರಿಗಳ ಬೇಜವಾಬ್ದಾರಿ ನಡೆ ಖಂಡನಿಯ: AICCTU

ಗಂಗಾವತಿ: ಕಾರ್ಮಿಕ ನಿರೀಕ್ಷಕರು ಗಂಗಾವತಿ ಅವರು ಕಾರ್ಮಿಕರ ವಿಷಯದಲ್ಲಿ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ವೆಂಕಟಗಿರಿ ರಸ್ತೆಯಲ್ಲಿರುವ ಸೂಪರ್ ಮೆಟಲ್ ಫ್ಯಾಕ್ಟರಿಯಲ್ಲಿ 20 ಜನ ಕಾರ್ಮಿಕರು ಸುಮಾರು 13 ವರ್ಷಗಳಿಂದ ದುಡಿಯುತ್ತಿದ್ದು ಅವರಿಗೆ ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಾವತಿಸುತ್ತಿಲ್ಲ ಹಾಗೂ ಬೋನಸ್, EPF, ESI ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ, ಆರೋಗ್ಯ ತಪಾಸಣೆ ಮಾಡಿಸದೇ ಕಾರ್ಮಿಕ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿರುವ ಮಾಲಿಕರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಮಿಕ ನೀರಿಕ್ಷಕರಿಗೆ ದೂರು ಅರ್ಜಿ ಸಲ್ಲಿಸಲು ಆಗಮಿಸಿದ್ದೇವೆ. ಆದರೆ ಕಾರ್ಮಿಕ ನೀರಿಕ್ಷಕರು ಆಫೀಸ್ ನಲ್ಲಿ ಲಭ್ಯ ಇರುವುದಿಲ್ಲ, ಇದೇ ರೀತಿಯಲ್ಲಿ ಮಾಲಿಕರು ಹಾಗೂ ಗುತ್ತಿಗೆದಾರರಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ಸಂಘಟನೆಯಿಂದ ಹಲವಾರು ದೂರು ಅರ್ಜಿಗಳನ್ನು ಸಲ್ಲಿಸಿದ್ದೇವೆ, ಆದರೆ ಕಾರ್ಮಿಕ ನೀರಿಕ್ಷಕರು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳುದೇ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ. ಇದರಿಂದ ಕಾರ್ಮಿಕ ವರ್ಗದವರಿಗೆ ತುಂಬಾ ಅನ್ಯಾಯ ಆಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬಾಬರ್ ಮಾತನಾಡಿ ಗಂಗಾವತಿ ನಗರಸಭೆಯ ಹಾಗೂ ಕಾರಟಗಿ ಪುರಸಭೆಗಳಲ್ಲಿ ಕೆಲಸ ಮಾಡುವ ಘನ ತ್ಯಾಜ್ಯ ಸಾಗಿಸುವ ವಾಹನ ಚಾಲಕರಿಗೆ ಗುತ್ತಿಗೆದಾರರಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕಾರ್ಮಿಕ ನೀರಿಕ್ಷಕರಿಗೆ ದೂರು ಸಲ್ಲಿಸಿ ಸುಮಾರು ತಿಂಗಳಗಳೇ ಕಳೆದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೋಳ್ಳುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಅನ್ಯಾಯಕ್ಕೆ ಒಳಗಾಗಿದ್ದ ಕಾರ್ಮಿಕರುಗಳು, ಕಾರ್ಮಿಕ ನೀರಿಕ್ಷಕರು ಆಫೀಸ್ ನಲ್ಲಿ ಯಾವಾಗಲೂ ಸಿಗುವುದಿಲ್ಲ ಎಂದು ತಮ್ಮ ಅಸಮಾಧಾನ ಹೋರಹಾಕಿದರು.
