ಗಂಗಾವತಿ ಗ್ರಾಮೀಣ ಬಿಜೆಪಿ ಯುವಮೋರ್ಚಾ ವತಿಯಿಂದ ಸಸಿ ನೆಡುವ ಮೂಲಕವಿಶ್ವ ಪರಿಸರ ದಿನ ಆಚರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

World Environment Day celebrated by planting saplings by Gangavathi Gramin BJP Yuva Morcha

ಗಂಗಾವತಿ ಗ್ರಾಮೀಣ ಬಿಜೆಪಿ ಯುವಮೋರ್ಚಾ ವತಿಯಿಂದ ಸಸಿ ನೆಡುವ ಮೂಲಕ
ವಿಶ್ವ ಪರಿಸರ ದಿನ ಆಚರಣೆ

ಜಾಹೀರಾತು

ಗಂಗಾವತಿ: ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಗಂಗಾವತಿ ಗ್ರಾಮೀಣ ಯುವಮೋರ್ಚಾ ವತಿಯಿಂದ ಕೆಸರಟ್ಟಿ ಗ್ರಾಮದ ಗದ್ದಡಕಿ ಲಿಂಗಣ್ಣ ಪ್ರೌಢಶಾಲೆಯ ಸಹಯೋಗದೊಂದಿಗೆ ಶಾಲೆಯ ಆವರಣದಲ್ಲಿ 26 ನೆರಳು ಕೊಡುವ ಮರಗಳ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಈ ಬಾರಿಯ ವಿಶೇಷವೆಂದರೆ, ಈ 2026ನೇ ಇಸ್ವಿಯಲ್ಲಿ 26 ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಈ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಲೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯರಾದ ಜಿ. ಮಂಜುನಾಥ ಹಾಗೂ ಟಿ.ಎ.ಪಿ.ಸಿ.ಎಂ.ಎಸ್‌ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗಂಗಾವತಿ ಗ್ರಾಮೀಣ ಯುವಮೋರ್ಚಾ ಅಧ್ಯಕ್ಷರಾದ ವಿಶ್ವನಾಥ ಮಾಲಿಪಾಟೀಲ್ ಮಾತನಾಡಿ, ಪರಿಸರದಲ್ಲಿನ ಸಮತೋಲನ ಕಾಪಾಡಿಕೊಳ್ಳಲು ಗಿಡಮರಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅನಿವಾರ್ಯ, ಆ ನಿಟ್ಟಿನಲ್ಲಿ ಯುವಕರು, ಶಾಲಾ ಮಕ್ಕಳು ಸಸಿಗಳನ್ನು ನೆಡುವ ಮೂಲಕ ತಮ್ಮ ಬೆಳವಣಿಗೆಯ ಜೊತೆಗೆ ಸಸಿಗಳ ಬೆಳವಣಿಗೆಗೆ ಮಹತ್ವ ಕೊಡಬೇಕೆಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು, ಊರಿನ ಪ್ರಮುಖರಾದ ಸಿದ್ದಯ್ಯಸ್ವಾಮಿ ಹಿರೇಮಠ, ಯಮನೇಗೌಡ ವಕೀಲರು, ನಾಗರಾಜ ಹಂಚಿನಾಳ, ಬಾಲನಗೌಡ, ಶಿವಕುಮಾರ ಸ್ವಾಮಿ, ಬಸವರಾಜ್. ಹನುಮಂತಪ್ಪ ಉಪ್ಪಾರ್, ಹುಲುಗಪ್ಪ ನಾಯಕ್, ದೇವರಾಜ್ ನಾಯಕ್, ಮತ್ತಿತರರು ಇದ್ದರು.

Total Views: 0
Share This Article