
Dr.Rajkumar's 97th and Mrs. S.Janaki's 88th birthday celebrations

ದೊಡ್ಡಮನೆ ಶಂಭಣ್ಣ ಕರೋಕೆ ಸ್ಟುಡಿಯೋದಲ್ಲಿ
ಡಾ. ರಾಜಕುಮಾರ್ ಅವರ ೯೭ನೇ ಹಾಗೂ ಶ್ರೀಮತಿ ಎಸ್. ಜಾನಕಿಯವರ ೮೮ನೇ ಹುಟ್ಟುಹಬ್ಬ ಆಚರಣೆ

ಗಂಗಾವತಿ: ನಗರದ ದೊಡ್ಡಮನೆ ಶಂಭಣ್ಣ ಕರೋಕೆ ಸ್ಡುಡಿಯೋದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಕಲಾ ಸಂಘ (ರಿ) ದಿಂದ ಸಂಘದ ಅಧ್ಯಕ್ಷರು ಹಾಗೂ ಮಾಜಿ ನಗರಸಭೆ ಸದಸ್ಯರಾದ ಆರ್. ಕಣ್ಣನ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್-೨೪ ಶುಕ್ರವಾರ ರಾತ್ರಿ ೮:೦೦ ಗಂಟೆಗೆ ಪದ್ಮಭೂಷಣ, ರ‍್ನಾಟಕ ರತ್ನ ಡಾ. ರಾಜಕುಮಾರ ಅವರ ೯೭ನೇ ಹುಟ್ಟುಹಬ್ಬದ ಜೊತೆಗೆ ಖ್ಯಾತ ಗಾಯಕಿ ಶ್ರೀಮತಿ ಎಸ್. ಜಾನಕಿಯವರ ೮೮ನೇ ಹುಟ್ಟುಹಬ್ಬ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ರವರ ಹುಟ್ಟುಹಬ್ಬವನ್ನೂ ಈ ಎಲ್ಲ ಮಹನೀಯರ ಭಾವಚಿತ್ರಗಳಿಗೆ ಪುಷ್ಪರ‍್ಪಣೆ ಮಾಡುವ ಮೂಲಕ, ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಕೇಕ್ ಕತ್ತರಿಸಿ ಸಿಹಿ ಹಂಚಿದ ನಂತರ ಡಾ. ರಾಜಕುಮಾರ್ ಅವರ ಹಾಗೂ ಎಸ್. ಜಾನಕಿಯವರ ಚಿತ್ರಗೀತೆಗಳನ್ನು ಸಂಘದ ಕಲಾವಿದರು ಗಾಯನ ಮಾಡುವ ಮೂಲಕ ಈ ಮಹಾನ್ ಕಲಾವಿದರನ್ನು ಸ್ಮರಿಸಿಕೊಂಡರು.
ಈ ಸಂರ‍್ಭದಲ್ಲಿ ಸಂಘದ ಗೌರವಾದ್ಯಕ್ಷರಾದ ತಟ್ಟಿ ಮಲ್ಲಿಕರ‍್ಜುನ, ಉಪಾಧ್ಯಕ್ಷರಾದ ತಟ್ಟಿ ಶಾಮಣ್ಣ ಗಂಗಾವತಿ, ಪ್ರಧಾನ ಕರ‍್ಯರ‍್ಶಿಯಾದ ವಿರೇಶ ಹಿರೇಮಠ, ಖಜಾಂಚಿಯಾದ ವಿರೇಶ ಪಪ್ಪಿ, ಸಂಘಟನಾ ಕರ‍್ಯರ‍್ಶಿಯಾದ ಹಾಜಿ ಅಲಿಸಾಬ್, ಸಹ ಕರ‍್ಯರ‍್ಶಿಗಳಾದ ಗೋಟೂರು ಪ್ರವೀಣ್, ಲಕ್ಕಪ್ಪ ನಾಯಕ, ಮೌನೇಶ, ನಗರಸಭೆ ಮಾಜಿ ಸದಸ್ಯರಾದ ಹುಸೇನಪೀರ, ಕರೋಕೆ ಸ್ಟುಡಿಯೋ ಮಾಲಿಕರಾದ ಡಿ. ಶಂಭುನಾಥ, ಸಂಘದ ಸದಸ್ಯರುಗಳಾದ ಶ್ರೀಮತಿ ಸಾವಿತ್ರಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಜಯಶ್ರೀದೇವಿ, ಇತರರಾದ ಎಂ.ಡಿ ಮುಸ್ತಫಾ, ರುಕ್ಮುದ್ದೀನ್, ಹನುಮೇಶ, ಅಮೀರ್ ಅಲಿ, ರಾಜು, ಕನಕ, ನೀಲಕಂಠ, ಸಂಪತ್, ಶೇಖ್ ಮಹೆಬೂಬ, ಸತ್ಯನಾರಾಯಣ, ಕೆ. ವೆಂಕಟೇಶ, ವಿರುಪಾಕ್ಷಿ ಹೋಬಲ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
