
Bear attack on farmer Rajashekar Gowda of Bukkasagar village, serious concern



ಬುಕ್ಕಸಾಗರ ಗ್ರಾಮದ ರೈತ ರಾಜಶೇಖರ್ ಗೌಡ ಅವರ ಮೇಲೆ ಕರಡಿ ದಾಳಿ ತೀವ್ರ ಆತಂಕ

ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನಲ್ಲಿ ಕರಡಿ ದಾಳಿಯಿಂದ ರೈತರು ಭೀತಿಗೊಳಗಾದ ಘಟನೆ ನಡೆದಿದೆ. ವೆಂಕಟಾಪುರ ಗ್ರಾಮದ 76 ವರ್ಷದ ರೈತ ರಾಯಪ್ಪ ಹಾಗೂ ಬುಕ್ಕಸಾಗರ ಗ್ರಾಮದ ರೈತ ರಾಜಶೇಖರ್ ಗೌಡ ಅವರ ಮೇಲೆ ಕರಡಿ ದಾಳಿ ನಡೆಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ರೈತ ಸಂಘದ ಮುಖಂಡ ಎಸ್. ಎ.ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಡಿಗಳ ಹಾವಳಿ ಹೆಚ್ಚಾಗುತ್ತಿದ್ದರೂ ತಕ್ಕ ಕ್ರಮ ಕೈಗೊಳ್ಳಲಾಗದೆ ನಿರ್ಲಕ್ಷಿಸುತ್ತಿರುವ ಅಧಿಕಾರಿಗಳು ಎಂದು ರೈತ ಸಂಘದ ಮುಖಂಡ ಎಸ್. ಎ.ಖಾದ್ರಿ ಅವರು ಆರೋಪಿಸಿದ್ದಾರೆ
ಈ ಕುರಿತು ರೈತ ಮುಖಂಡ ಎಸ್.ಎ. ಖಾದ್ರಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ರೈತರ ಜೀವ ರಕ್ಷಣೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು, ಕರಡಿಗಳನ್ನು ಅರಣ್ಯ ಪ್ರದೇಶಕ್ಕೆ ಹಿಂತಿರುಗಿಸುವ ವ್ಯವಸ್ಥೆ ಮಾಡಬೇಕು ಹಾಗೂ ಗಾಯಗೊಂಡ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಜಾಗೃತಿಯಿಂದ ಕೆಲಸ ಮಾಡಿ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
