ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ –ಕ್ಯಾರೆ ಎನ್ನದ ಅಬಕಾರಿ ಇಲಾಖೆ

Mallikarjun
2 Min Read
ಜಾಹೀರಾತು




ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ –ಕ್ಯಾರೆ ಎನ್ನದ ಅಬಕಾರಿ ಇಲಾಖೆ

ಜಾಹೀರಾತು
Drinking alcohol in public places is allowed - Excise Department not to be called a carrier

ಕನ್ನಡ ಯುವ ಜಾಗೃತಿ ವೇದಿಕೆ ಜಿಲ್ಲಾ ಘಟಕ ತೀವ್ರ ಆಕ್ರೋಶ

ಗಂಗಾವತಿ: ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲೆ ಮದ್ಯಪಾನಕ್ಕೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ವೈನ್ ಶಾಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಅಸ್ಲಂ ಒತ್ತಾಯಿಸಿದ್ದಾರೆ.

ನಗರಸಭೆ ಮುಂಭಾಗದಲ್ಲಿರುವ “ದಿ ನ್ಯೂ ಸಿ.ಎಲ್-2 ವೈನ್ ಶಾಪ್” ನಲ್ಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ, ಅಂಗಡಿ ಮುಂಭಾಗದಲ್ಲೇ ಗ್ರಾಹಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸೈಯ್ಯದ್ ಅಸ್ಲಂ ಅವರು ಆರೋಪಿಸಿದ್ದಾರೆ.

ಈ ಸ್ಥಳವು ಗಂಗಾವತಿಯ ಪ್ರಮುಖ ಜನಸಂದಣಿ ಪ್ರದೇಶವಾಗಿದ್ದು, ಪಕ್ಕದಲ್ಲೇ ತಾಲೂಕು ಬಸ್ ನಿಲ್ದಾಣ, ಐಸ್ ಕ್ರೀಮ್ ಪಾರ್ಲರ್ ಹಾಗೂ ಬೇಕರಿಗಳು ಇರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗವಾಗಿ ಸಂಚರಿಸುತ್ತಾರೆ. ಅದಲ್ಲದೆ ಅಂಜನಾದ್ರಿ ದೇವಸ್ಥಾನಕ್ಕೆ ಹೋಗುವ ಮಾರ್ಗವೂ ಇದೇ ಆಗಿರುವುದರಿಂದ ಪ್ರತಿದಿನ ಅನೇಕ ಭಕ್ತರು ಮತ್ತು ಪ್ರವಾಸಿಗರು ಇಲ್ಲಿ ಓಡಾಡುತ್ತಾರೆ.

ಇಂತಹ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮದ್ಯಪಾನ ನಡೆಯುತ್ತಿರುವುದು ಜನರಿಗೆ ತೊಂದರೆಯಾಗಿದ್ದು, ಕೆಲವು ವೇಳೆ ಮದ್ಯಪಾನ ಮಾಡಿದವರು ಸಾರ್ವಜನಿಕರಿಗೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಕೂಡ ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅವರಿಗೆ ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುತ್ತಿರುವುದಾಗಿ ಕೂಡ ಆರೋಪಿಸಲಾಗಿದೆ.

ಈ ಹಿನ್ನೆಲೆ, ಕರ್ನಾಟಕ ಅಬಕಾ

ರಿ ಕಾಯ್ದೆ 1965 ರ ಸೆಕ್ಷನ್ 29 ಮತ್ತು 30 ಅಡಿಯಲ್ಲಿ ಸಂಬಂಧಪಟ್ಟ ವೈನ್ ಶಾಪ್ ಲೈಸೆನ್ಸ್ ರದ್ದುಪಡಿಸಿ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಅಸ್ಲಾಂ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸು ಸಲ್ಲಿಸುವುದರ ಮೂಲಕ ಒತ್ತಾಯಿಸಿದ್ದಾರೆ.

ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಸಂಘಟನೆ ಸಂಬಂಧಪಟ್ಟ ಇಲಾಖೆಯವರಿಗೆ ಎಚ್ಚರಿಕೆ ನೀಡಲಾಗಿದೆ.

ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

Total Views: 1
Share This Article