Magala Mani protests against MLAs who were absent from Dr. Babu Jagjivan Ram Jayanti program.
ಡಾ ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮಕ್ಕೆ ಗೈರಾದ ಶಾಸಕರ ವಿರುದ್ಧ ಮ್ಯಾಗಳ ಮನಿ ಪ್ರತಿಭಟನೆ.
ಗಂಗಾವತಿ –5–ಹಸಿರು ಕ್ರಾಂತಿ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನರಾಮ್ ರವರ 119 ನೇ ಜಯಂತಿ ಕಾರ್ಯಕ್ರಮ ನಗರದ ಬಾಲಕಿಯರ ಶಾಲೆಯಲ್ಲಿ ಜರುಗಿತು. ಇದರ ಅಧ್ಯಕ್ಷತೆ ಯನ್ನು ಸ್ಥಳೀಯ ಶಾಸಕ ಗಾಲಿ ಜನಾರ್ಧನ್ ರಡ್ಡಿ ವಹಿಸಿಕೊಳ್ಳಬೇಕಿತ್ತು, ಅವರು ಗೈರು ಆಗಿರುವದ ಕ್ಕೆ ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಶಾಸಕರ ವಿರುದ್ಧ ದಿಕ್ಕಾರ ಹಾಕಿ ಪ್ರತಿಭಟನೆ ಮಾಡಿದರು.
ಅಧಿಕಾರಿಗಳು ಅನಿವಾರ್ಯ ಕಾರಣಗಳಿಂದ ಬಂದಿಲ್ಲ ಎಂದು ಸಮಾಧಾನ ಪಡಿಸಲು ಮುಂದಾದರೂ ಇದಕ್ಕೆ ಒಪ್ಪದ ಮ್ಯಾಗಳಮನಿ ಅನಿವಾರ್ಯ ಎನ್ನುವ ಮಾಮೂಲಿ ಉತ್ತರ ಬದಲಾಗಿ ನಿಖರ ಉತ್ತರಕ್ಕೆ ಪಟ್ಟು ಹಿಡಿದರು. ನಂತರ ಮುಖಂಡರುಗಳು ಸಮಾಧಾನ ಪಡಿಸಿ ಕಾರ್ಯಕ್ರಮ ಪ್ರಾರಂಭ ಮಾಡಿದರು.
ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಬೋಗೇಶ್ ಆನೆಗುಂದಿ, ರಾಮಣ್ಣ ರುದ್ರಾಕ್ಷಿ,ದುರ್ಗೇಶ್ ಹೊಸಳ್ಳಿ, ಮಂಜುನಾಥ್ ಚನ್ನಾದಾಸರು,ಮೇಘರಾಜ್, ಗಣೇಶ್, ಅರವಿಂದ್ ಯೋಗಿ, ಮತ್ತಿತರರು ಇದ್ದರು.
