Heartfelt tribute to Suresh Sankanur, who has been elected as the new district president.

ನೂತನಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುರೇಶ್ ಸಂಕನೂರ್ ಅವರಿಗೆ ಆತ್ಮೀಯ ಸನ್ಮಾನ..
ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ಕ್ರಿಮಿನಾಶಕ ಮತ್ತು ಬೀಜ ಮಾರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡಿರುವ ಸುರೇಶ್ ಸಂಗನೂರು ಅವರಿಗೆ ಆನೆಗುಂದಿ ರಸ್ತೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ಬಡಾವಣೆಯಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಮನಾಯಕ್ ಮಾತನಾಡಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸುರೇಶ್ ಸಂಕನೂರು ಅವರು ರೈತರಿಗೆ ಅಗತ್ಯ ಇರುವ ಕೃಷಿಗೆ ಸಂಬಂಧಿಸಿದಂತಹ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಮುಂದಾಗಬೇಕೆಂದು ತಿಳಿಸಿದರು.
ಬಡಾವಣೆಯ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಕರು ಸೇರಿ ಸುರೇಶ್ ಸಂಕನೂರ್ ಮತ್ತು ಅವರ ಧರ್ಮಪತ್ನಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶ್ರೀಮತಿ ಶಾರದಾ ಮಾತನಾಡಿ , “ನಮ್ಮ ಬಡಾವಣೆಯ ಸದಸ್ಯರಾದ ಸುರೇಶ್ ಸಂಕನೂರ್ ಅವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಷಯ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆದು ರಾಜ್ಯ ಮಟ್ಟದಲ್ಲೂ ಸಾಧನೆ ಮಾಡಲಿ” ಎಂದು ಹಾರೈಸಿದರು.
ನಂತರ ಮಾತನಾಡಿದ ಸುರೇಶ್ ಸಂಕನೂರ್ ಅವರು, “ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ ಶ್ರೀ ರಾಮಲಿಂಗೇಶ್ವರ ಬಡಾವಣೆಯ ಎಲ್ಲಾ ಹಿರಿಯರು, ಮಹಿಳೆಯರು ಮತ್ತು ಯುವಕರಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಸಪ್ಪ ರಾಮ್ ಸಾಗರ್, ವೀರೇಶ್ ಬಸವ ದಳ, ಭೀಮೇಶ್ ರೆಡ್ಡಿ, ನಾಗರಾಜ್, ವೀರನಗೌಡ, ವಿಜಯ್, ಗಣೇಶ, ವಿಶ್ವನಾಥ್, ನವೀನ್, ರಾಮ ನಾಯಕ್, ಮಲ್ಲಿಕಾರ್ಜುನ್ ಬಾವಿಕಟ್ಟಿ, ವಿಜಯಲಕ್ಷ್ಮಿ ಲಿಂಗಣ್ಣ ಸೂಗುರು, ನೀಲಾವತಿ, ಮಣಿ, ಶಾಂತಮ್ಮ, ತ್ರಿವೇಣಿ, ಪುಷ್ಪ, ಶ್ವೇತಾ, ಮಹಾಲಕ್ಷ್ಮಿ ಸೇರಿದಂತೆ ಕಾಲೋನಿಯ ಅನೇಕ ಹಿರಿಯ ನಾಗರಿಕರು ಮತ್ತು ಯುವಕರು ಉಪಸ್ಥಿತರಿದ್ದರು.
