I have no energy in my body. How can I increase energy in my body?

ನನ್ನ ದೇಹದಲ್ಲಿ ಶಕ್ತಿ ಇಲ್ಲ ದೇಹದಲ್ಲಿ ಶಕ್ತಿ ವೃದ್ಧಿಸಿಕೊಳ್ಳುವುದು ಹೇಗೆ ?
ಉತ್ತರ ವಿನಂತಿಸಿದವರು ಹೆಣ್ಣೋ, ಗಂಡೋ ತಿಳಿದಿಲ್ಲ. ಯಾರೇ ಆದರೂ ಶಕ್ತಿ ಹೆಚ್ಚಿಸಿಕೊಳ್ಳಲು೧. ಮುಖ್ಯವಾಗಿ ಮನಸ್ಸಿನ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಸ್ಥಿತಪ್ರಜ್ಞತೆ ಅಥವಾ ಶಾಂತವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಬಹಳ ಮುಖ್ಯ.೨. ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಸೋಮಾರಿತನ ಬಿಟ್ಟು ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ, ಏರೋಬಿಕ್ಸ್, ನಡಿಗೆ, ಯೋಗ, ನೃತ್ಯ ಇಂತಹವನ್ನು ದಿನನಿತ್ಯದ ಭಾಗವಾಗಿ ರೂಢಿಸಿಕೊಳ್ಳಬೇಕು. ಧ್ಯಾನ, ಪ್ರಾಣಾಯಾಮ ನಮ್ಮ ಬದುಕಿಗೆ ಹೊಸ ದಿಕ್ಕನ್ನು ಪರಿಚಯಿಸುತ್ತದೆ.೩. ಬಾದಾಮಿ ದ್ರಾಕ್ಷಿ ಗೋಡಂಬಿ, ಖರ್ಜೂರದಂತಹ ಒಣ ಹಣ್ಣುಗಳು, ವಿವಿಧ ರೀತಿಯ ಸೊಪ್ಪುಗಳು, ಮೊಳಕೆ ಕಟ್ಟಿದ ಕಾಳುಗಳು, ಸೇಬು, ದ್ರಾಕ್ಷಿ, ಸ್ಟ್ರಾಬೆರಿ, ಬ್ಲೂಬೆರ್ರಿ, ಬಾಳೆ, ಸಪೋಟ, ಪೇರಲೆ ಮತ್ತು ತಾಜಾ ತರಕಾರಿಗಳು ಊಟದ ಭಾಗವಾಗಬೇಕು. ವಿಟಮಿನ್ ಕ್ಯಾಲ್ಸಿಯಂ, ಪ್ರೋಟಿನ್ ಇರುವ ಬ್ಯಾಲೆನ್ಸ್ ಡ್ ಡಯಟ್ ಬಹಳ ಮುಖ್ಯ. ಮಾಂಸಾಹಾರಿಗಳು ಉತ್ತಮ ಗುಣಮಟ್ಟದ ಮಾಂಸ, ಮೀನು, ಮೊಟ್ಟೆ ಮುಂತಾದುವನ್ನು ನಿಯಮಿತವಾಗಿ ಸೇವಿಸಬೇಕು.ಬಯಸಿದ್ದು ಗಳಿಸಿಕೊಳ್ಳಲು ದೃಢ ಸಂಕಲ್ಪ ಗಟ್ಟಿಯಾಗಿರಬೇಕು. ಆಗಷ್ಟೇ ಏನಿದ್ದರೂ ಸಿಕ್ಕಿಯೇ ತೀರುತ್ತದೆ. ಶುಭವಾಗಲಿ.
