ಹಿರೇಜಂತಕಲ್ ಬೀದಿ ನಾಯಿ ಹಾವಳಿ: ರಸ್ತೆಯಲ್ಲಿ ಓಡಾಡಲು ಭಯ

Mallikarjun
2 Min Read

Hirejantakal street dog plague: Fear of walking on the road

ಹಿರೇಜಂತಕಲ್ ಬೀದಿ ನಾಯಿ ಹಾವಳಿ: ರಸ್ತೆಯಲ್ಲಿ ಓಡಾಡಲು ಭಯ


ಗಂಗಾವತಿ: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಹಾಗೂ ವೃದ್ಧರ ಮೇಲೆ ನಾಯಿಗಳು ಏಕಾಏಕಿ ದಾಳಿ ಮಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಹಿರೇಜಂತಕಲ್ ಮತ್ತು ವಿರುಪಾಪೂರ ತಾಂಡ,ವಾರ್ಡ್ ಗಳಲ್ಲಿ ನಾಯಿಗಳು ಗುಂಪು ಗುಂಪಾಗಿ ಸುತ್ತಾಡುತ್ತಿವೆ. ಹಲವು ನಾಯಿಗಳನ್ನು ಹಿಡಿದು ಸಂತಾನಹರಣ ಮಾಡಲಾಗಿದ್ದು, ಉಳಿದ ತಾಲ್ಲೂಕಿನಲ್ಲಿ ನಾಯಿಗಳ ಹಾವಳಿ ಯಥಾಪ್ರಕಾರ ಮುಂದುವರಿದಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತವಾಗಿದೆ. ನಾಯಿ ಕಡಿತದಿಂದ ಗಾಯಗೊಳ್ಳುತ್ತಿರುವ ಜನರು, ಸಮೀಪದ ಆಸ್ಪತ್ರೆ ಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಬೀದಿ ನಾಯಿಗಳ ಹಾವಳಿಯಿಂದಾಗಿ ಮಕ್ಕಳು–ಮಹಿಳೆಯರು ಒಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ರಸ್ತೆಗಳಲ್ಲಿ ಬೈಕ್‌ನಲ್ಲಿ ಹೋಗುವ ಸವಾರರನ್ನು ನಾಯಿಗಳು ಬೆನ್ನಟ್ಟುತ್ತಿದ್ದು, ಕೆಲವರು ಬೈಕ್‌ನಿಂದ ಉರುಳಿಬಿದ್ದ ಘಟನೆಗಳೂ ನಡೆದಿವೆ.
ಗಂಗಾವತಿ ಕೇಂದ್ರ ಬಸ್‌ ನಿಲ್ದಾಣ ಸುತ್ತಮುತ್ತ, ಹಾಗೂ ಇತರೆ ಪ್ರದೇಶಗಳಲ್ಲಿ ಬೀದಿನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಒಂಟಿಯಾಗಿ ಓಡಾಡುವವರನ್ನು ಕಂಡರೆ, ಬೊಗಳುತ್ತಿವೆ. ದಾಳಿ ಸಹ ಮಾಡಿ ಗಾಯಗೊಳಿಸುತ್ತಿವೆ’ ಎಂದು ಹಿರೇಜಂತಕಲ್ ನಿವಾಸಿ ಗವಿಸಿದ್ದಪ್ಪ ಆರಾಳ ಇವರು ಹೇಳಿದರು.
‘ಗುಂಪಿನಲ್ಲಿ 10ಕ್ಕೂ ಹೆಚ್ಚು ನಾಯಿಗಳು ಇರುತ್ತದೆ. ಎಲ್ಲ ನಾಯಿಗಳು ಒಟ್ಟಿಗೆ ಓಡಾಡುತ್ತವೆ. ಹಗಲು ಹಾಗೂ ರಾತ್ರಿ ಎನ್ನದೇ ಜನರ ಮೇಲೆ ದಾಳಿ ಮಾಡುತ್ತಿವೆ. ರಾತ್ರಿಯಂತೂ ಜನರ ಓಡಾಟವೇ ಕಷ್ಟವಾಗಿದೆ’ ಎಂದರು.
ನಾಯಿ ದಾಳಿಯಿಂದ ಗಾಯಗೊಂಡಿರುವ ಹೆಣ್ಣು ಮಗಳು ವಂದನಾ ಬುದೇಶ ಕಂಪ್ಲಿ ಅಂಗಡಿಗೆ ಹೋಗಿ ಬರುವಾಗ, ಗುಂಪಿನಲ್ಲಿ ಬೀದಿನಾಯಿಗಳು ಬಂದವು. ನಾಯಿಗಳು ಬೊಗಳುತ್ತಿದ್ದರಿಂದ, ಭಯವಾಯಿತು. ಕೆಲ ಕ್ಷಣಗಳಲ್ಲಿ ನಾಯಿಯೊಂದು ನನ್ನ ಮೇಲೆ ದಾಳಿ ಮಾಡಿ, ಕಚ್ಚಿತು. ಸಮೀಪದಲ್ಲಿದ್ದ ಕೆಲವರು, ಸ್ಥಳಕ್ಕೆ ಬಂದು ನಾಯಿ ಓಡಿಸಿ ನನ್ನನ್ನು ರಕ್ಷಿಸಿದರು. ದಯವಿಟ್ಟು 29 ನೇ ವಾರ್ಡ್ ಹಿರೇಜಂತಕಲ್ ನಲ್ಲಿ ನಾಯಿಗಳ ಹೆಚ್ಚು ಆಗಿದೆ ಅದಕ್ಕೆ ನಗರಸಭೆದವರು ಕೂಡಲೇ ನಾಯಿಗಳು ಹಿಡಿಯಬೇಕೆಂದು ಹೇಳಿದರು ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡು, ಚೇತರಿಸಿಕೊಳ್ಳುತ್ತಿದ್ದೇವೆ’ ಎಂದು ದಾಳಿ ಸಂದರ್ಭವನ್ನು ವಿವರಿಸಿದರು.

Total Views: 0
Share This Article