ಶಿತ್ರಕಲೆ, ಶಿಲ್ಪಿಕಲೆ, ರಂಗಭೂಮಿ ವಿವಿಧ ಕಲೆಗಳಲ್ಲಿ ನಿರತರಾಗಿರುವ ಕಲಾವಿದರಿಗೆ ಪ್ರೋತ್ಸಾಹ -ಸಚಿವರಾದ ಹೆಚ್.ಕೆ.ಪಾಟೀಲ್

Mallikarjun
2 Min Read

 

Encouragement for artists engaged in various arts such as painting, sculpture, and theater - Minister H.K. Patil

ಶಿತ್ರಕಲೆ, ಶಿಲ್ಪಿಕಲೆ, ರಂಗಭೂಮಿ ವಿವಿಧ ಕಲೆಗಳಲ್ಲಿ ನಿರತರಾಗಿರುವ ಕಲಾವಿದರಿಗೆ ಪ್ರೋತ್ಸಾಹಸಚಿವರಾದ ಹೆಚ್.ಕೆ.ಪಾಟೀಲ್

ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ ಸಹಾಯ ಹಸ್ತ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ಇಂಟರ್ ನ್ಯಾಷವಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಮತ್ತು ವೆಬ್ ಸೈಟ್ ಬಿಡುಗಡೆ ಹಾಗೂ ಜೀವಮಾನ ಶೇಷ್ಠ ಕಲಾ ಸಾಧಕರ ಪ್ರಶಸ್ತಿ ಹಾಗೂ ಹಿರಿಯ, ಕಿರಿಯ ಕಲಾವಿದರ ಚಿತ್ರ ಪ್ರದರ್ಶನ ಕಾರ್ಯಕ್ರಮ.

ಸಚಿವರಾದ ಹೆಚ್.ಕೆ.ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪ್ರ.ಸ.ಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ರವರು, ಚಲನಚಿತ್ರ ನಿರ್ದೇಶಕ ರಾಮ್ ನಾರಾಯಣ, ಸಂಗೀತ ನಿರ್ದೇಶಕ ರಮೇಶ್ ಕೃಷ್ಣ, ಖ್ಯಾತ ನಟಿ ಕುಮಾರಿ ಸಂಜನಾ ತ್ರಿವೇದಿ, ಅಧ್ಯಕ್ಷರಾದ ಬಿ.ಜಿ.ಅವಟಿರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ನಂತರ ಟ್ರಸ್ಟ್  ಹಾಗೂ ವೆಬ್ ಸೈಟ್ ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನಿಸಿದರು.

ಸಚಿವರಾದ ಹೆಚ್.ಕೆ.ಪಾಟೀಲ್ ರವರು ಮಾತನಾಡಿ. ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಟ್ರಸ್ಟ್ ರಾಜ್ಯದ ವಿವಿಧ ಕ್ಷೇತ್ರದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ನೀಡುವ ಸಂಸ್ಥೆಯಾಗಿದೆ.
ಟ್ರಸ್ಟ್ ಸಹಕಾರ ನೀಡಲು ಸರ್ಕಾರ ಬದ್ದವಾಗಿದೆ.
ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ.

ಕಲೆ ಮತ್ತು ಕಲಾವಿದರು ಉಳಿದರೆ ನಾಡಿನ ಇತಿಹಾಸ ತಿಳಿಯಬಹುದು, ಕಲಾವಿದ ಇಲ್ಲವೆಂದರೆ ಇತಿಹಾಸ ತಿಳಿಯಲು ಆಸಾಧ್ಯ. ವಿವಿಧ ರಂಗದ ಕಲಾವಿದರಿಗೆ ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಆಸರೆಯಾದರೆ ಕಲಾವಿದರ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಡಾ||ಬಿ.ಜಿ.ಅವಟಿರವರು ಮಾತನಾಡಿ ಚಿತ್ರಕಲಾವಿದರು, ಸಂಗೀತ, ನೃತ್ಯ ಶಿಲ್ಪಕಲೆ ನಾಟಕ, ರಂಗಭೂಮಿ ಉಳಿಯಬೇಕು ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಟ್ರಸ್ಟ್ ಸ್ಥಾಪಿಸಲಾಗಿದೆ.

ರಾಜ್ಯದ ಎಲ್ಲ ಮೂಲೆಯಲ್ಲಿ ಕಲಾವಿದರಿಗೆ ಅವರಿಗೆ ಬೆಂಗಳೂರಿನ ಸುತ್ತಮುತ್ತಲ ಜಾಗದಲ್ಲಿ ಅವರಿಗೆ ನಿವೇಶನ ನೀಡಿ ಅವರು ಅಲ್ಲಿ ಪ್ರದರ್ಶನ ಮತ್ತು ತಯಾರಿಕೆ ಮತ್ತು ವಾಸ ಮಾಡಲು ಅನುಕೂಲವಾಗಲಿ ಎಂದು ನಮ್ಮ ಟ್ರಸ್ಟ್ ಯೋಜನೆ ರೂಪಿಸಿದೆ.

ಕಲಾವಿದರಿಗೆ ಒಂದು ಗ್ರಾಮ ನಿರ್ಮಾಣ ಮಾಡಿ ಅಲ್ಲಿ ಅವಕಾಶ ನೀಡಿದರೆ ರಾಜ್ಯ, ದೇಶ ವಿದೇಶಗಳಿಂದ ಬರುವ ನಾಗರಿಕರಿಗೆ ಅಲ್ಲಿ ಕಲಾವಿದರು ತಯಾರಿಕೆ ವಸ್ತುಗಳನ್ನು ಖರೀದಿಸಬಹುದು, ಕಲೆಯ ಅರಿಯಬಹುದು ಇದರಿಂದ ಆರ್ಥಿಕವಾಗಿ ಕಲಾವಿದರು ಸಬಲರಾಗುತ್ತಾರೆ ಎಂದು ಹೇಳಿದರು.

Total Views: 0
Share This Article