ನಿಖರ ದತ್ತಾಂಶ ಸಂಗ್ರಹಿಸಿ ಜನಗಣತಿ ಕಾರ್ಯ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಸೂಚನೆ

Mallikarjun
2 Min Read

Collect accurate data and make the census a success: District Collector's instructions




ನಿಖರ ದತ್ತಾಂಶ ಸಂಗ್ರಹಿಸಿ ಜನಗಣತಿ ಕಾರ್ಯ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಸೂಚನೆ

ವಿಜಯನಗರ, (ಹೊಸಪೇಟೆ):ಮುಂಬರುವ ಜನಗಣತಿ ಕಾರ್ಯವನ್ನು ಅತ್ಯಂತ ನಿಖರ ಮತ್ತು ಸ್ಪಷ್ಟ ಮಾಹಿತಿಯೊಂದಿಗೆ ವ್ಯವಸ್ಥಿತವಾಗಿ ದತ್ತಾಂಶ ಸಂಗ್ರಹಿಸುವ ಮೂಲಕ ಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.
ನಗರದ ಪಿ.ಡಿ.ಐ.ಟಿ ಕಾಲೇಜಿನಲ್ಲಿ ಬುಧವಾರ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಗಣತಿ ಕಾರ್ಯವು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯುತ್ತಿರುವುದರಿಂದ, ಗಣತಿದಾರರು ನಿಗದಿಪಡಿಸಿದ ಮೊಬೈಲ್ ಆಪ್‌ನ್ನು ಸಮರ್ಪಕವಾಗಿ ಬಳಸಬೇಕು. ತಾಂತ್ರಿಕ ತೊಂದರೆಗಳಿದ್ದಲ್ಲಿ ತಕ್ಷಣವೇ ತಾಂತ್ರಿಕ ತಂಡದ ಗಮನಕ್ಕೆ ತರುವ ಮುಖೇನ ಪರಿಹಾರ ಕಂಡುಕೊಳ್ಳಬೇಕು. ಗಣತಿ ಕಾರ್ಯವು 2 ಹಂತಗಳಲ್ಲಿ ನೆಡಯಲಿದ್ದು, ಇಂದಿನಿAದ 15 ದಿನಗಳ ಕಾಲ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಪ್ರತಿಯೊಬ್ಬ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ ಸಂಗ್ರಹಿಸುವ ಮಾಹಿತಿ ಶೇ. 100ರಷ್ಟು ನಿಖರವಾಗಿರಬೇಕು. ಯಾವುದೇ ಮಾಹಿತಿಯನ್ನು ಅಂದಾಜಿನ ಮೇಲೆ ದಾಖಲಿಸಬಾರದು. ಗಣತಿದಾರರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಈ ಗಣತಿ ಕಾರ್ಯಕ್ಕೆ 27 ಚಾರ್ಜ್ ಆಫಿಸರ್, 44 ಫೀಲ್ಡ್ ತರಬೇತುದಾರರು, 16 ತಾಂತ್ರಿಕ ಸಹಾಯಕರು, ಹಾಗೂ 499 ಮೇಲ್ವಿಚಾರಕರನ್ನು ಮತ್ತು 2847 ಗಣತಿದಾರರು ನೇಮಿಸಲಾಗಿದೆ. 2467 ಹೌಸ್ ಲಿಸ್ಟಿಂಗ್ ಬ್ಲಾಮಕ್ ಗುರುತಿಸಲಾಗಿದ್ದು, ಒಬ್ಬ ಗಣತಿದಾರರಿಗೆ 250 ಮನೆಗಳ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಜನಗಣತಿಯು ದೇಶದ ಭವಿಷ್ಯ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಬುನಾದಿಯಾಗಲಿದೆ. ಇದರಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಎಚ್ಚರಿಸಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ಗಣತಿದಾರರು ನಿಗದಿಪಡಿಸಿದ ಕಾಲಮಿತಿಯೊಳಗೆ ತಮಗೆ ವಹಿಸಿದ ಬ್ಲಾಕ್‌ಗಳ ಗಣತಿಯನ್ನು ಪೂರ್ಣಗೊಳಿಸಬೇಕು. ಪ್ರತಿದಿನದ ಪ್ರಗತಿಯನ್ನು ಆಯಾ ದಿನವೇ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದ ಅವರು, ಗಣತಿದಾರರು ಸಾರ್ವಜನಿಕರ ಮನೆಗೆ ಭೇಟಿ ನೀಡಿದಾಗ ಸೌಜನ್ಯದಿಂದ ವರ್ತಿಸಿ, ಗಣತಿಯ ಉದ್ದೇಶವನ್ನು ಮನವರಿಕೆ ಮಾಡಿಕೊಡಬೇಕು. ಸಾರ್ವಜನಿಕರು ಸಹ ಸಂಯಮದಿAದ ನಿಖರ ಮತ್ತು ಸ್ಪಷ್ಟ ಮಾಹಿತಿ ನೀಡಬೇಕು. ಸಾರ್ವಜನಿಕರು ನೀಡುವ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ನಗರಸಭೆ ಪೌರಾಯುಕ್ತ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಜಿಲ್ಲಾ ನೋಡಲ್ ಅಧಿಕಾರಿ ಶ್ರೀಕಾಂತ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗಣತಿದಾರರು, ಆಶಾ ಕಾರ್ಯಕರ್ತೆಯರು ಇದ್ದರು.
ಜನಗಣತಿ ಪ್ರಯುಕ್ತ ಜಾಥಾ ಕಾರ್ಯಕ್ರಮ :
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 16 ನೇ ಜನಗಣತಿ ಪ್ರಯುಕ್ತ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಚಾಲನೆ ನೀಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ತಹಶೀಲ್ದಾರ ಶೃತಿ. ಎಂ, ನಗರಸಭೆ ಪೌರಾಯುಕ್ತ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮನೋಹರ್ ಇದ್ದರು.

Total Views: 1
Share This Article