2028ರ ಅಧಿಕಾರ ಎರಡನ್ನು ಗೆದ್ದರೆ ಮಾತ್ರ

Mallikarjun
2 Min Read

Only if we win the 2028 mandate

2028ರ ಅಧಿಕಾರ ಎರಡನ್ನು ಗೆದ್ದರೆ ಮಾತ್ರ

          ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯ ಕಾವು, ಇರಾನ್ ಅಮೆರಿಕಾ ಮತ್ತು ಇಸ್ರೇಲ್ ಕದನವನ್ನು ಮೀರಿಸುವ ಹಂತ ತಲುಪಿದೆ. ಕಳೆದ ಭಾರಿ ಮೂರಕ್ಕೆ ಮೂರು ಗೆದ್ದುಕೊಂಡಿದ್ದ ಕಾಂಗ್ರೆಸ್. ಭಾಜಪಕ್ಕೆ ಮುಖಭಂಗ ಮಾಡಿತ್ತು.
ಈ ಕಾರಣಕ್ಕೆ ವಿಜಯೇಂದ್ರನನ್ನು ಅಧ್ಯಕ್ಷಗಿರಿಯಿಂದ ಇಳಿಸಲು, ಹೋರಾಟ ಮಾಡಿ ಫೇಲಾಗಿದ್ದು ನಮ್ಮ ಕಣ್ಮುಂದೆ ಇದೆ. ಇದು ಭಾಜಪ ಕಥೆಯಾದರೆ..
ಕಾಂಗ್ರೆಸನಲ್ಲಿ ಮುಖ್ಯಮಂತ್ರಿ ಖುರ್ಚಿ ಕದನ ಮತ್ತು ಡಿಕೆಶಿಯನ್ನು ಅಧ್ಯಕ್ಷಗಿರಿಯಿಂದ ಇಳಿಸಲು ಹುನ್ನಾರ ಚಾಲನೆಯಲ್ಲಿತ್ತು.
ನಾನು ಸಿದ್ಧರಾಮಯ್ಯನವರ ಬಗ್ಗೆ ಬರೆಯುವಾಗ, ಸುಮ್ನೆ ನಿಮ್ಮ ಪಾಡಿಗೆ ಮುಂದುವರೆದು, ಕರ್ನಾಟಕ ಅಭಿವೃದ್ಧಿಯ ಬಗ್ಗೆ ನೆನಪಿನಲ್ಲಿ ಉಳಿಯುವಂತೆ ಮಾಡಿ. ಏಕಂದರೆ ನಿಮ್ಮ ಅಧಿಕಾರದ ಕೊನೆಯ ಅವಕಾಶ ಎಂದು ಸೂಚಿಸಿದ್ದೆ.
2029ರವರೆಗೆ ರಾಹುಲ್ ಗಾಂಧಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ ಬೇಕು. ನಿಮ್ಮನ್ನು ಯಾರು ಇಳಿಸಲಾರರು. ಈಗ ಬಂದಿರುವ ಚುನಾವಣೆ, ಹಿಂದಿನ ಚುನಾವಣೆಯಂತಲ್ಲ. ಈ ಸಲ ಒಂದು ಕಾಂಗ್ರೆಸ್‌ಗೆ, ಒಂದು ಭಾಜಪಕ್ಕೆ ದಕ್ಕಲಿದೆ.


ಯಾವುದು ಎಂದು ತಿಳಿಯಲು ಚುನಾವಣೆ ಫಲಿತಾಂಶ ಬರುವವರಿಗೆ ಕಾಯಬೇಕಾಗಿದೆ. ಮತದಾರ ತನ್ನ ಮತದಾನದ ಸುಳಿವು ಬಿಟ್ಟುಕೊಟ್ಟಿಲ್ಲ. ಒಂದು ಕಾಂಗ್ರೆಸ್, ಒಂದು ಭಾಜಪಕ್ಕೆ ಬಂದರೆ, ಡಿಕೆಶಿಯನ್ನು ಅಧ್ಯಕ್ಷಗಿರಿಯಿಂದ ಇಳಿಸಲು, ಒಂದು ತಂಡ ಕಾಯುತ್ತಿದೆ. ಅವರಿಗೆ ಹಬ್ಬ.
ಅದೇ ರೀತಿ ವಿಜಯೇಂದ್ರನ್ನು ಇಳಿಸಲು, ಪ್ರಯತ್ನಿಸುತ್ತಿರುವ ಹಳೆಯ ಟೀಮ್ ಪುನಶ್ಚೇತನಗೊಳ್ಳುತ್ತದೆ.
ಟೆನ್ಷನ್ ಇರವುದು ಡಿಕೆಶಿ ಮತ್ತು ಬಿವೈವಿ ಗೆ ಮಾತ್ರ.
ಇದರ ಬಿಸಿ ಸಿದ್ಧರಾಮಯ್ಯನವರಿಗೆ ತಟ್ಟುವುದಿಲ್ಲ. ಇದು ಇವತ್ತಿನ ಮತದಾರ ಅನಿಸಿಕೆ.
ಮತದಾನದ ಹೊತ್ತಿಗೆ, ಪಕ್ಷಗಳು ಹೇಳುವ ಭರವಸೆಗಳನ್ನು ನಂಬಿ, ಮೇಲಿನ ಅನಿಸಿಕೆ ಸುಳ್ಳಾಗಿ, ಎರಡು ಒಂದೆ ಪಾರ್ಟಿ ಗೆಲುವುದಾರೆ. ಮುಂದಿನ 2028ರ ರಾಜ್ಯಭಾರ ಅವರದೆ. ಭಾಜಪ ಮತ್ತು ಕಾಂಗ್ರೆಸ್‌ಗೆ, ಮಾಡು ಇಲ್ಲವೆ ಮಡಿ ಎಂಬAತಾಗಿದೆ. ಹೀಗಾಗಿ ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಜಾತ್ರೆಯ ವಾತಾವರಣ ಸೃಷ್ಠಿಯಾಗಿದೆ.
ಇದ್ದುದರಲ್ಲಿ ಜನತಾದಳ ಈ ಚುನಾವಣೆಯಲ್ಲಿ ಓಡಾಡುವ ಮೂಲಕ, ತನ್ನ ಮತದಾರರನ್ನು ಹೆಚ್ಚಿಸಿಕೊಳ್ಳುವ ಲಕ್ಷಣಗಳಿವೆ.
ಕಾಂಗ್ರೆಸ್‌ನಲ್ಲಿ ಡಿಕೆಶಿ, ಭಾಜಪದಲ್ಲಿ ಬಿವೈವಿ ಭವಿಷ್ಯ ಬರೆಯಬಲ್ಲ ಈ ಚುನಾವಣೆ, ಇವರಿಬ್ಬರ ಹೊರತಾಗಿ ಇನ್ನಿಬ್ಬರು ಹೊಸನಾಯಕರನ್ನು ಸೃಷ್ಠಿಸಲಿದೆ.


ರಮೇಶ ಸುರ್ವೆ, ಹಿರಿಯ ಪತ್ರಕರ್ತರು

Total Views: 0
Share This Article