Chief Minister's Medal for Gangavathi Nagar Police Station PI Prakash L. Mali

ಗಂಗಾವತಿ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಎಲ್.ಮಾಳಿಗೆ ಮುಖ್ಯಮಂತ್ರಿ ಪದಕ
ಗಂಗಾವತಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ 2025 ನೇ ಸಾಲಿನ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಗಂಗಾವತಿ ನಗರದ ಪೊಲೀಸ್ ಠಾಣೆ ನಿರೀಕ್ಷಕರಾದ ಪ್ರಕಾಶ ಎಲ್.ಮಾಳಿ ಅವರು ಭಾಜನರಾಗಿದ್ದಾರೆ. ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ತೋರಿದ ನಿಷ್ಠೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಇವರು ಕೊಪ್ಪಳ ರಾಯಚೂರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಸಿಪಿಐಯಾಗಿ ಸೇವೆ ಸಲ್ಲಿಸಿ ಹಲವು ವರ್ಷಗಳ ಸೇವೆ ಸಲ್ಲಿದ್ದಾರೆ ನಂತರ ವಿದೇಶಿ ಪ್ರಜೆ ಪ್ರಕರಣದ ಕರಾಳತೆ:
ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ವಿದೇಶಿ ಪ್ರಜೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುವ ಅತಂಕವಿದ್ದಾಗ, ತನಿಖಾ ತಂಡಗಳು ಹಗಲಿರುಳು ಶ್ರಮಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದು ದೊಡ್ಡ ಸಾಧನೆಯಾಗಿತ್ತು. ಇಂತಹ ಸವಾಲುಗಳ ಮಧ್ಯೆಯೇ ದಕ್ಷ ಅಧಿಕಾರಿಗಳನ್ನು ಗುರುತಿಸಿ ಸರ್ಕಾರ ಪದಕ ಘೋಷಿಸಿದಕ್ಕೆ ಗಂಗಾವತಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಭಿನಂದಸಿ ಸನ್ಮಾನಿಸಿ ಗೌರವಿಸಿದರು
ಏಪ್ರಿಲ್ 2ಕ್ಕೆ ಪ್ರದಾನ:
ರಾಜ್ಯಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಪದಕ ಪುರಸ್ಕೃತರಿಗೆ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ಪದಕ ಪ್ರದಾನ ಸ್ವೀಕರಿಸಲಾಗುತ್ತದೆ,ಈ ಸಂದರ್ಭದಲ್ಲಿ ಪಿಎಸ್ಐ ಟಿ.ಜಿ.ನಾಗರಾಜ,ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು
