ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು
Influential people who set out to build an unauthorized church overnight
ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು


ಕಾಮಗಾರಿ ತಡೆದು ನೋಟಿಸ್ ನೀಡಿದ ಗ್ರಾಮಪಂಚಾಯತ್ ಪಿಡಿಓ
ಗಂಗಾವತಿ ; ತಾಲೂಕಿನ ಮರಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರಗತಿನಗರ ಗ್ರಾಮದ 4 ನೇ ವಾರ್ಡಿನಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲು ಮಹಿಳೆ ಸೇರಿದಂತೆ ಕೆಲ ಜನ್ರು ಮುಂದಾದ ಘಟನೆ ಕಳೆದ ಎರಡನೇ ತಾರೀಖನಂದು ನಡೆದಿದೆ.
ಅನಧಿಕೃತ ಚರ್ಚ್ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಒತ್ತಡಡ ಮತಾಂತರ ಬಗ್ಗೆ ಪ್ರಗತಿನಗರ ಗ್ರಾಮದ ಜನ್ರು ಲಿಖಿತ ರೂಪದಲ್ಲಿ ಗ್ರಾಮಪಂಚಾಯತ್ , ತಾಲೂಕ ಪಂಚಾಯತ, ತಹಶಿಲ್ದಾರ್ ಕಚೇರಿಗೆ ಪತ್ರ ಬರೆದು ತಕ್ಷಣವೇ ಚರ್ಚ್ ನಿರ್ಮಾಣ ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ.

ಪ್ರಗತಿನಗರ ಗ್ರಾಮದ ಎಂ.ಸುಶೀಲಾ ಕೃಷ್ಣರಾವ್ ಎನ್ನುವವರು ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಪಡೆಯದೇ ಈ ಮಹಿಳೆ ಕೆಲ ಪ್ರಭಾವಿಗಳ ಕರೆತಂದು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇನ್ನೂ ಯಾವುದೇ ಪರವಾನಿಗೆ ಪಡೆಯದೇ ಡಿಜೆ ಸೌಂಡ್ ಸಿಸ್ಟಮ್ ಬಳಸಿ ಹಾಡು ಹಾಕುವುದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾಮಗಾರಿ ನಡೆಸುತ್ತಿರೋದು ಬೆಳಕಿಗೆ ಬಂದಿದೆ.
ಈ ಎಲ್ಲಾ ಚಟುವಟಿಕೆಗಳು ಸ್ಥಳೀಯವಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದ್ದು, ಅನಧಿಕೃತ ಚರ್ಚ್ ಕಾಮಗಾರಿ ನಿಲ್ಲಿಸುವಂತೆ ಹಾಗೂ ನಮ್ಮಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಮತಾಂತರವನ್ನು ತಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇಷ್ಟಾದ್ರೂ ಅನಧಿಕೃತ ಚರ್ಚ್ ನಿರ್ಮಾಣಕ್ಕೆ ರಾಜಕೀಯ ವ್ಯಕ್ತಿಗಳ ಸಪೋರ್ಟ್ ಇದೆ.
ನಾನು ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡ್ತೇನೆ ಎಂದು ರಾತ್ರೋರಾತ್ರಿ ಕಳೆದ ಮಾರ್ಚ್ ಎರಡರಂದು ಹೊರ ಜಿಲ್ಲೆಯ ಜನ್ರನ್ನು ಕರೆತಂದು ಈ ಮಹಿಳೆ ಕಾಮಗಾರಿ ಮುಗಿಸಲು ಮುಂದಾಗಿದ್ರು. ಇದನ್ನು ಮನಗಂಡ ಗ್ರಾಮಸ್ಥರು ತಹಶಿಲ್ದಾರ್, ತಾಲೂಕಪಂಚಾಯತ್ ಇಓ, ಪಿಡಿಓಗೆ ಕರೆ ಮಾಡಿ ಕಾಮಗಾರಿ ನಿಲ್ಲಿಸಿ ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ರು. ಇದನ್ನು ಅರಿತ ಪಿಡಿಓ ಇದೀಗ ಕಾಮಗಾರಿ ನಿಲ್ಲಿಸಿ ಕಾನೂನು ಪರಿಪಾಲನೆ ಮಾಡಿದ್ದಾರೆ.
__________________
ಕಾಮಗಾರಿ ನಿಲ್ಲಿಸಿದ ಬಳಿಕ ಮತ್ತೆ ಪ್ರಭಾವ ಬೀರಿ ಆ ಮಹಿಳೆ ಚರ್ಚ್ ನಿರ್ಮಾಣ ಮಾಡಲು ಸಚಿವರ ಹೆಸರು ಬಳಸಿಕೊಂಡು ಕೆಲ ಮುಖಂಡರಿಂದ ಕಾಮಗಾರಿ ಪ್ರಾರಂಭಿಸೋಕೆ ಸಿದ್ದತೆ ಮಾಡಿಕೊಂಡಿದ್ದಾಳಂತೆ. ಇದ್ರಿಂದ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದು, ಸಚಿವರು ಈ ರೀತಿ ಅನಧಿಕೃತ ಕಾರ್ಯಕ್ಕೆ ಒಪ್ಪಿಗೆ ನಿಡೋದಿಲ್ಲ. ನೀನು ಸಚಿವರ ಹೆಸರು ಹೇಳಿ, ಸಚಿವರ ಹೆಸರು ಬಳಕೆ ಮಾಡಿಕೊಳ್ಳಬೇಡ.. ಇದನ್ನು ನಾವೇ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ
_________ _________
ಎಮ್ ಸುಶೀಲಾ ಕೃಷ್ಣರಾವ್ ಅವರ ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಚರ್ಚ್ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಸತಿ ಉದ್ದೇಶದ ನಿವೇಶನದಲ್ಲಿ ಚರ್ಚ್ ಮಾಡಲು ಬರೋದಿಲ್ಲ. ಇದರ ಪರವಾನಿಗೆ ನೀಡೋದು ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರ್ ಗೆ ಇರುತ್ತದೆ .ನಾವು ಈಗಾಗಲೇ ಕಾಮಗಾರಿ ಸ್ಥಗಿತಕ್ಕೆ ನೋಟೀಸ್ ನೀಡಿದ್ದೇವೆ. ಕಾಮಗಾರಿ ಪ್ರಾರಂಭಿಸಿದ್ರೆ, ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು
ಬಸವರಾಜ ,ಪಿಡಿಓ ಮರಳಿ ಗ್ರಾಮಪಂಚಾಯತ್
