ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವಕುಲದ ವಿನಾಶ: ಸಾಹಿತಿ ಭೇರ್ಯ ರಾಮಕುಮಾರ್ ಎಚ್ಚರಿಕೆ

ಪರಿಸರ ಸಂರಕ್ಷಣೆ ಮಾಡದಿದ್ದರೆ
ಮಾನವಕುಲದ ವಿನಾಶ:
ಸಾಹಿತಿ ಭೇರ್ಯ ರಾಮಕುಮಾರ್ ಎಚ್ಚರಿಕೆ

ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ ವ್ಯಕ್ತ ಪಡ

If the environment is not protected, humanity will be destroyed: Writer Bherya Ramkumar warns

ಮೈಸೂರು ಜಿಲ್ಲೆಯ ಕೆ. ಆರ್. ನಗರದ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ಅವರು ನಮ್ಮ ಹಿರಿಯರ ಭವಿಷ್ಯದ ಆಲೋಚನೆ ಫಲವಾಗಿ ನಮಗೆ ಸುಂದರ ಪರಿಸರ ದೊರೆತಿದೆ. ನಾವು ನಮ್ಮ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದರೆ ಭವಿಷ್ಯದ ಪೀಳಿಗೆ ನಮ್ಮನ್ನು ಕ್ಷಮಿಸದು. ಮುಂದಿನ ತಲೆಮಾರಿನ ಸುಖಕರ ಜೀವನಕ್ಕಾಗಿ ಇಂದು ನಾವು ಹಸಿರು ಪರಿಸರ ನಿರ್ಮಾಣ ಮಾಡಬೇಕಿದೆ ಎಂದು ಕಿವಿಮಾತು ನುಡಿದರು.

ನಾವು ಹೆದ್ದಾರಿಗಳ ನಿರ್ಮಾಣಕ್ಕಾಗಿ, ಐಷರಾಮಿ ರೆಸಾರ್ಟ್ಗಳ ನಿರ್ಮಾಣಕ್ಕಾಗಿ, ಕೃಷಿ ಉದ್ದೇಶಕ್ಕಾಗಿ, ಮನೆಗಳ ಉಪಕರಣಗಳ ನಿರ್ಮಾಣಕ್ಕಾಗಿ ಪ್ರತಿನಿತ್ಯವೂ ಮರಗಳ ಹನನ ಮಾಡುತ್ತಿದ್ದೇವೆ. ಇದರಿಂದಾಗಿ ಸ್ವಚ್ಛ ಗಾಳಿ, ಶುದ್ಧ ನೀರು, ಅರೋಗ್ಯಕರ ಪರಿಸರ ನಿರ್ನಾಮವಾಗುತ್ತಿದೆ. ಮಾನವರಲ್ಲಿ ಹೃದಯ ಸಂಭಂದಿ ಕಾಯಿಲೆಗಳು, ಶ್ವಾಸ ಕೋಶದ ಕಾಯಿಲೆಗಳು ತೀವ್ರವಾಗುತ್ತಿವೆ. ಮನುಷ್ಯನ ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಆಗುತ್ತಿದ್ದು ಅಪಾರ ಸಂಖ್ಯೆಯ ಜನರು ಸಾವು ನೋವು ಗಳಿಗೆ ಒಳಗಾಗುತ್ತಿದ್ದಾರೆ
ಎಂದು ಪರಿಸರ ನಾಶದ ಬಗ್ಗೆ ಎಚ್ಚರಿಕೆ ನೀಡಿದರು.

ಕಾಡಿನ ವಿನಾಶದಿಂದಾಗಿ ಕಾಡುಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲ. ಇದರಿಂದಾಗಿ ಆನೆಗಳು ಕೃಷಿ ಭೂಮಿಗೆ ಲಗ್ಗೆ ಇಡುತ್ತಿವೆ. ಚಿರತೆಗಳು ಜನವಸತಿ ಪ್ರದೇಶಗಳಿಗೆ ಬಂದು ಸಾಕು ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ಧಾಳಿ ಮಾಡುತ್ತಿವೆ. ಇದಕ್ಕೆಲ್ಲ ಮನುಷ್ಯನ ಸ್ವಾರ್ಥವೇ ಕಾರಣ ಎಂದು ರಾಮಕುಮಾರ್ ವಿವರಿಸಿದರು. ಕಾಡಿನ ನಾಶದಿಂದಗಿ ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ ಉಂಟಾಗಿ ಕೃಷಿ ಚಟುವಟಿಕೆಗಳು ತೊಂದರೆಗೆ ಸಿಲುಕಿವೆ. ಪ್ರತಿಯೊಬ್ಬರು ಈ ಬಗ್ಗೆ ಆಲೋಚಿಸಬೇಕು. ಕಾಡಿನ ವಿನಾಶ ಮಾನವಕುಲದ ವಿನಾಶ ಎಂದು ಅರಿತು ಕಾಡಿನ ನಾಶ ತಪ್ಪಿಸಬೇಕು ಎಂದವರು ಕಿವಿಮಾತು ನುಡಿದರು.

ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯಕ್ರಮವಲ್ಲ. ಅದು ಪ್ರತಿ ಒಬ್ಬ ವ್ಯಕ್ತಿಗೆ ಸೇರಿದೆ ಎಂದು ನುಡಿದ ಅವರು ಪ್ರತಿ ಒಬ್ಬರು ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಯ ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಡಬೇಕು. ತಮ್ಮ ಊರಿನ ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ಅದರ ನೆನಪಿನಲ್ಲಿ ಸಸಿ ನೆಟ್ಟು ಪೋಶಿಸಬೇಕು. ಈ ಬಗ್ಗೆ ಎಲ್ಲರೂ ಆಲೋಚಿಸಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಭೇರ್ಯ ರಾಮಕುಮಾರ್ ನುಡಿದರು.ಇದೆ ಸಂದರ್ಭದಲ್ಲಿ ಅವರು ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಭೋದಿಸಿದರು.

ಸರ್ಕಾರಿ ಪ್ರೌಢಶಾಲೆ ಆಂಜನೇಯ ಬ್ಲಾಕ್ ಕೆ ಆರ್ ನಗರ ತಾ.ನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಎ .ಎಸ್. ವಿಜ್ಞಾನ ಶಿಕ್ಷಕರು ಹಾಗೂ ಹಾಗೂ ಇಕೋ ಕ್ಲಬ್ ಮುಖ್ಯಸ್ಥರಾದ ಉದಯ ಗೌಡ,ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ನ ಪದಾಧಿಕಾರಿಗಳಾದ…. ಹರಿಪ್ರಸಾದ್, ಪ್ರಣತಿ, ಲಿಖಿತ್,ಧನುಷ್, ನಿಖಿತಾ ಹಾಗೂ ಸದಸ್ಯರುಗಳಾದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಜ್ಯುಕೇರ್ ಸ್ಕೂಲ್ ವಾರ್ಷಿಕೋತ್ಸವ : ಹೋಲಿಕೆ ಬೀಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ – ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ

ಎಜ್ಯುಕೇರ್ ಸ್ಕೂಲ್ ವಾರ್ಷಿಕೋತ್ಸವ : ಹೋಲಿಕೆ ಬೀಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ – ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ

Educare School Anniversary: Stop comparing, recognize the talent in children - SP Dr. Ram L. Arasiddi

ಕೊಪ್ಪಳ:ಮಕ್ಕಳನ್ನು ಮತ್ತೊಂದು ಮಗುವಿನ ಜೊತೆ ಹೋಲಿಕೆ ಮಾಡುವುದನ್ನು ಬಿಡಿ, ಆ ಮಗುವಿನಲ್ಲಿಯೇ ಇರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಎಂದು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್.ಅರಸಿದ್ದಿ ಪಾಲಕರಿಗೆ ಸಲಹೆ ನೀಡಿದರು.

ನಗರದ ಎಜುಕೇರ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಕಲಿಕಾ ಸಾಮರ್ಥ್ಯವಿರುತ್ತದೆ. ಅವರ ಕಲಿಕಾ ಸಾಮರ್ಥ್ಯ- ನ್ಯೂನತೆ ಗಮನಿಸಿ, ಅವರ ಬೌದ್ಧಿಕ ಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ವಿಷಯಕ್ಕೆ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹೀಗಾಗಿ ಮಾನಸಿಕವಾಗಿ ಮಕ್ಕಳಲ್ಲಿ ಗಟ್ಟಿತನ ಬೆಳೆಸುವ ಕೆಲಸವಾಗಬೇಕಿದೆ ಎಂದರು.

ಕಳೆದೊಂದು ದಶಕದಿಂದ ಮಕ್ಕಳಲ್ಲಿ ಜ್ಞಾನದ ಹಸಿವು ನಿಗಿಸುತ್ತಿರುವ ಎಜ್ಯುಕೇರ್ ಇಂಗ್ಲೀಷ ಮಿಡಿಯಂ ಶಾಲೆಯ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು.

ನಾನು ಕೂಡ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದಿದ್ದೇನೆ. ನಾನು ಐಪಿಎಸ್ ಆದ ಬಳಿಕ ರಾಮಕೃಷ್ಣ ಆಶ್ರಮದ ಶಾಲೆಯ ಹೆಸರನ್ನು ಹೆಮ್ಮೆಯಿಂದ ಹೇಳುತ್ತಿದ್ದೇನೆ.

ಅದೇ ರೀತಿ ಈ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೆ ಉತ್ತಮ ಭವಿಷ್ಯ ಕಂಡುಕೊಂಡ ಬಳಿಕ ಈ ಶಾಲೆಯ ಹೆಸರನ್ನು ಚಿರಸ್ಥಾಯಿಯಾಗಿಸುತ್ತಾರೆ.

ಹೀಗಾಗಿ ಮಕ್ಕಳ ಜೀವನದಲ್ಲಿ ಶಿಕ್ಷಣ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಬಾಕ್ಸ್…

ಕಲಾವಿದ ಅನಂತ ದೇಶಪಾಂಡೆ ಅವರು,

ಹಿರಿಯ ಕವಿ ದಿ. ದ.ರಾ.ಬೇಂದ್ರೆಯವರಂತೆ ಮಾಡಿದ ಮಿಮಿಕ್ರಿ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸಿತು.

ಥೇಟ್ ದ.ರಾ.ಬೇಂದ್ರೆಯವರಂತೆ ವೇಷ- ಭೂಷ ಧರಿಸಿದ್ದ ಅನಂತ ದೇಶಪಾಂಡೆ ಅವರನ್ನು ನೋಡಿ, ವಿದ್ಯಾರ್ಥಿಗಳು, ಪಾಲಕರು ಸೇರಿ ನೆರೆದವರು ಕಾರ್ಯಕ್ರಮದಲ್ಲಿ ಮೊದಲಿಗೆ ಒಂದು ಕ್ಷಣ ಅವಕ್ಕಾಗಿದ್ದರು. ಬಳಿಕ ವೇದಿಕೆಯ ಮೇಲೆ ಅವರ ಮಿಮಿಕ್ರಿ ಎಲ್ಲರ ಮನಸೊರೆಗೊಂಡಿತು.

ಬೇಂದ್ರೆಯವರ ನಿ ಹಿಂಗ್ ನೋಡಬೇಡ ನನ್ನಾ ಅವರ ಗೀತೆ ಸೇರಿದಂತೆ ವಿವಿಧ ಕವಿತೆಗಳನ್ನು ವಾಚನ ಮಾಡಿ, ಗಮನ ಸೆಳೆದರು.

ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ್, ಎಜ್ಯುಕೇರ್ ಇಂಗ್ಲಿಷ ಮಿಡಿಯಂ ಶಾಲೆಯ ಅಧ್ಯಕ್ಷ ಡಾ.ಶ್ರೀನಿವಾಸ ಹ್ಯಾಟಿ, ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ ಸೇರಿ ಇನ್ನಿತರರು ಇದ್ದರು.

2ಕೆಪಿಎಲ್21 ಕೊಪ್ಪಳ ನಗರದ ಎಜುಕೇರ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ

ರಸ್ತೆ ಬದಿ ಆಹಾರಗಳಲ್ಲಿ ನಿಷೇಧಿತ ವಸ್ತು, ಕೃತಕ ಬಣ್ಣ ಬಳಸದಂತೆ ಎಚ್ಚರಿಕೆ ವಹಿಸಿ: ಡಾ.ಸುರೇಶ ಬಿ.ಇಟ್ನಾಳ
District Level Advisory Committee Meeting of Food Safety and Quality Authority

ಕೊಪ್ಪಳ ಫೆಬ್ರವರಿ 02, (ಕರ್ನಾಟಕ ವಾರ್ತೆ): ರಸ್ತೆ ಬದಿ ದೊರೆಯುವ ಗೋಬಿ ಮಂಚೂರಿ, ಪಾನಿಪೂರಿ ಮುಂತದಾ ಚಾಟ್ಸ್ಗಳಲ್ಲಿ ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳನ್ನು ಬೆರೆಸದಂತೆ ಸರ್ಕಾರ ಆದೇಶಿಸಿದೆ. ಅದರಂತೆ ಸರ್ಕಾರದ ಆದೇಶ ಪಾಲನೆಯಾಗುತ್ತಿರುವ ಬಗ್ಗೆ ಇಲಾಖೆ ಎಚ್ಚರಿಕೆ ವಹಿಸಿ, ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ.ಸುರೇಶ ಬಿ.ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ತಯಾರಾಗುವ ಆಹಾರ ಹಾಗೂ ರಸ್ತೆ ಬದಿ ಮಾರಾಟ ಮಾಡುವ ಗೋಬಿ ಮಂಚೂರಿ, ಪಾನಿ ಪೂರಿಯಂತಹ ಚಾಟ್ಸ್, ಫಾಸ್ಟ್ ಫುಡ್‌ಗಳಲ್ಲಿ ಕೃತಕ ಬಣ್ಣಗಳನ್ನು ಹಾಗೂ ಆಹಾರದ ರುಚಿ ಹೆಚ್ಚಿಸುವ ನಿಷೇಧಿತ ವಸ್ತುಗಳನ್ನು ಬಳಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದಾಗ್ಯೂ ಕೆಲ ಅಂಗಡಿಗಳಲ್ಲಿ ನಿಷೇಧಿತ ವಸ್ತುಗಳು ಹಾಗೂ ಕೃತಕ ಬಣ್ಣಗಳ ಬಳಕೆ ನಡೆಯುತ್ತಿದೆ. ಇಂತಹ ಹೋಟೆಲ್, ರಸ್ತೆ ಬದಿ ಅಂಗಡಿಗಳನ್ನು ಗುರುತಿಸಿ, ಅದರ ಮಾಲೀಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ. ರುಚಿ ಹೆಚ್ಚಿಸುವ ನಿಷೇಧಿತ ವಸ್ತುಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಆದ್ದರಿಂದ ಯಾವುದೇ ಹೋಟೆಲ್, ರಸ್ತೆ ಬದಿ ಅಂಗಡಿಗಳಲ್ಲಿ ಇಂತಹ ನಿಷೇಧಿತ ವಸ್ತುಗಳ ಬಳಕೆ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು, ಸರ್ಕಾರದ ಆದೇಶದ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಹಾಗೂ ಶಾಲೆಗಳಲ್ಲಿ ನೀಡುವ ಆಹಾರಗಳಲ್ಲಿ ಬಳಸುವ ದಿನಸಿ ವಸ್ತುಗಳ ಗುಣಮಟ್ಟ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಹಾಗೂ ಆಹಾರ ಸಾಮಗ್ರಿ ಶೇಖರಿಸುವ ಗೋದಾಮುಗಳಲ್ಲಿ ನಿಯಮಾನುಸಾರ ಸ್ವಚ್ಛತೆ ಹಾಗೂ ಸುರಕ್ಷತೆ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಹಾಲು ಸಂಗ್ರಹಣಾ ಕೇಂದ್ರಗಳಿಗೆ ಗುಣಮಟ್ಟ ಪರೀಕ್ಷೆಯ ಮಾನದಂಡಗಳನ್ನು ನೀಡಲಾಗಿದೆ. ಆ ಮಾನದಂಡಗಳನ್ವಯ ಗುಣಮಟ್ಟದ ಹಾಲನ್ನು ಮಾತ್ರ ಹಾಲು ಮಾರಾಟಗಾರರಿಂದ ಸಂಗ್ರಹಿಸಬೇಕು. ಇಂತಹ ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ದೊರೆಯುವ ಹಾಲನ್ನು ಪರೀಕ್ಷೆಗೊಳಪಡಿಸಿ. ಯೂರಿಯಾ ಬಳಸಿ ನಕಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಪನೀರ್, ಚೀಸ್ ಮುಂತಾದವುಗಳನ್ನು ತಯಾರಿಸಲಾಗುತ್ತದೆ. ಅಂತಹವುಗಳನ್ನು ಗುರುತಿಸಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು. ಬೇಕರಿ ಹಾಗೂ ಎಗ್‌ರೈಸ್ ಅಂಗಡಿಗಳಲ್ಲಿ ಒಡೆದ ಹಾಗೂ ಕೆಟ್ಟ ಮೊಟ್ಟೆಗಳನ್ನು ಬಳಸುತ್ತಿರುವ ಕುರಿತು ದೂರುಗಳಿವೆ. ಈ ಬಗ್ಗೆ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಮಾದರಿ ಪರೀಕ್ಷೆ ಮಾಡಿ, ತಪ್ಪು ಕಂಡುಬAದಲ್ಲಿ ಸಂಬAಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿಯೂ ಇಲಾಖೆಯಿಂದ ಮಾದರಿ ಪರೀಕ್ಷೆ ನಡೆಸಬೇಕು. ಸರ್ಕಾರದಿಂದ ಜನರಿಗೆ ನೀಡುವ ಯಾವುದೇ ಆಹಾರ ಸಾಮಗ್ರಿ, ದಿನಸಿ ಮುಂತಾದವು ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಸಾರ್ವಜನಿಕರು ಹೋಟೆಲ್ ಹಾಗೂ ರಸ್ತೆ ಬದಿ ಅಂಗಡಿಗಳಲ್ಲಿ ದೊರೆಯುವ ಆಹಾರ ಸೇವಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಗುಣಮಟ್ಟದ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಕಿರಾಣಿ ಹಾಗೂ ಮಾರ್ಟ್ಗಳಲ್ಲಿ ದೊರೆಯುವ ದಿನಸಿ ಸಾಮಗ್ರಿಗಳ ಮೇಲೆ ಕಡ್ಡಾಯವಾಗಿ ಸುರಕ್ಷಿತ ಬಳಕೆಯ ಅವಧಿಯನ್ನು ನಮೂದಿಸಬೇಕು. ಗ್ರಾಹಕರು ಅವಧಿ ನಮೂದಿಸಿದ ಬಗ್ಗೆ ಖಾತ್ರಿಪಡಿಸಿಕೊಂಡು ಸರಕು ಕೊಳ್ಳಬೇಕು. ಮಕ್ಕಳಿಗೆ ನೀಡುವ ಸಿಹಿತಿಂಡಿ, ಐಸ್‌ಕ್ರೀಮ್ ಮುಂತಾದ ತಿನಿಸುಗಳಲ್ಲಿ ಬಳಸಲಾದ ಅನುಮತಿಸಲಾದ ವಸ್ತುಗಳ ವಿವರಣೆ ನಂತರವೇ ಮಕ್ಕಳಿಗೆ ತಿನಿಸುಗಳನ್ನು ನೀಡಬೇಕು. ಕುರುಕಲು ತಿಂಡಿಗಳಲ್ಲಿ ಬಳಸುವ ಎಣ್ಣೆ ಕಳಪೆಯಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ತಿನಿಸುಗಳ ಬಗ್ಗೆ ಜಾಗ್ರತೆ ವಹಿಸಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ, ಜಾಗೃತಿ ಮೂಡಿಸಬೇಕು ಎಂದು ಅವರು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ.ಅಲಕನಂದಾ ಮಳಗಿ ಇಲಾಖೆ ಕೈಗೊಂಡ ಕ್ರಮಗಳು, ಆಹಾರ ಸುರಕ್ಷತಾ ಮಾನದಂಡಗಳು ಕುರಿತು ವಿವರವಾದ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಆಹಾರ ಇಲಾಖೆ ಉಪನಿರ್ದೇಶಕ ವಿಶ್ವನಾಥ, ಅಬಕಾರಿ ಇಲಾಖೆ ಡಿವೈಎಸ್‌ಪಿ ಬಿ.ಆಂಜನೇಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಗುಂಡಮ್ಮ ಕ್ಯಾಂಪ್: ವಾರ್ಡ್ ಮುಖಂಡರಿಂದ ಶಾಲಾ ಅಭಿವೃದ್ಧಿ ಸಭೆ

ಗುಂಡಮ್ಮ ಕ್ಯಾಂಪ್: ವಾರ್ಡ್ ಮುಖಂಡರಿಂದ ಶಾಲಾ ಅಭಿವೃದ್ಧಿ ಸಭ

Gundamma Camp: School development meeting by ward leaders

ಗಂಗಾವತಿ:ದಿ,2-2-2026 ಸೋಮವಾರ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಿವಾಸ್ ,ನೇತೃತ್ವ ದಲ್ಲಿ ಮತ್ತು ವಾರ್ಡ್‌ ನ ಮುಖಂಡರ ನೇತೃತ್ವದ ಲ್ಲಿ ಶಾಲಾ ಅಭಿವೃದ್ಧಿ ಸಭೆ ಜರುಗಿತು.

ಈಸಭೆಯಲ್ಲಿ ಮುಖ್ಯವಾಗಿ ಶಾಲೆಗೆ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಅಗಿರುದರ ಬಗ್ಗೆ ಚೆರ್ಚಿಸಲಾಯಿತು.ಮತ್ತು ಶೌಚಾಲಯ, ಆಟದ ಮೈದಾನ ಸ್ವಚ್ಚವಾಗಿಡಲು ,ಮೇತಿಂಗಳಿನಿಂದ ಮನೆ ಮನೆಗೆ ತೆರಳಿ ಪಾಲಕರಿಗೆ ಶಾಲೆಯ ಮಾಹಿತಿ ನೀಡಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನ ಪಡಬೇಕು , ಪ್ರತಿ ಹದಿನೈದು ದಿನಕ್ಕೊಮ್ಮೆ ಸಭೆ ಸೇರಿದ ಸೇರಲು ತೀರ್ಮಾನಿಸಲಾಯಿತು.ಮುಂದಿನ ಸಭೆ ದಿ,16-2-2026 ಸೇರಲು ತೀರ್ಮಾನಿಸಿ ಸಭೆ ಮುಂದೂಡಲಾಯಿತು.

ಆಗಮಿಸಿ ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಂಡು,ಅತ್ಯಂತ ಉಪಯುಕ್ತ ಸಲಹೆ,ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿ ಸಭೆಯನ್ನು ಯಶಸ್ವಿಗೊಳಿಸಿದ ಎಲ್ಲಾ ಮುಖಂಡರಿಗೆ ಶಿಕ್ಷಕರಾದ ಪ್ರಕಾಶ ಸರ್ ಧನ್ಯವಾದಹೇಳಿದರು.

ಈ ಸಭೆಯಲ್ಲಿ ಇಜಾಪ್,ಎಂ. ಎಸ್ ಉಲ್ಲಾಸ, ಆಸಿಪಾ.ಕೆ ಸನ್ನಿಕ್,ಹುಸೇನ್ ಸಾಬ್,ಮೌಲಾಹುಸೇನ್,ಸೇಖಮೈಬುಬ,ಮೆಹಬೂಬ್,ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಇತರರು ಭಾಗವಹಿದಿದ್ದರು.

ರಾತ್ರಿ ಹೊತ್ತು ಮೊಸರನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ ?

ರಾತ್ರಿ ಹೊತ್ತು ಮೊಸರನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ ?

Is eating yogurt at night good for health ?

Health Care: ಮೊಸರು ಅನ್ನವು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುವ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಅತಿಸಾರದಂತಹ ಜಠರಗರುಳಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಪ್ರೋಬಯಾಟಿಕ್ಗಳು ಸಹಾಯ ಮಾಡುತ್ತವೆ.

ದೇಹದಲ್ಲಿನ ಶಾಖವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ತಂಪಾಗಿಸಲು ಮೊಸರು ಮತ್ತು ಮೊಸರಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವಂತೆ ದೊಡ್ಡವರು ಹೇಳುತ್ತಾರೆ. ಮೊಸರನ್ನವು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ಮೊಸರು ಅನ್ನವು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುವ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಅತಿಸಾರದಂತಹ ಜಠರಗರುಳಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಪ್ರೋಬಯಾಟಿಕ್ಗಳು ಸಹಾಯ ಮಾಡುತ್ತವೆ.

ಮೊಸರಿನಲ್ಲಿರುವ ಪ್ರೋಬಯಾಟಿಕ್ಗಳು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಮೊಸರು ಅನ್ನವು ಎಲೆಕ್ಟ್ರೋಲೈಟ್ಗಳ ಉತ್ತಮ ಮೂಲವಾಗಿದ್ದು, ಇದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಮೊಸರನ್ನವನ್ನು ಧಾರಾಳವಾಗಿ ಸೇವಿಸಬಹುದು. ಆದರೆ ರಾತ್ರಿ ಹೊತ್ತು ಮೊಸರು ಅನ್ನ ತಿನ್ನಬಹುದೇ? ಇದು ಆರೋಗ್ಯಕ್ಕೆ ಒಳ್ಳೆಯದೇ ಎಂಬ ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ ನೋಡಿ.

ಮೊಸರು ರುಚಿಯಲ್ಲಿ ಹುಳಿಯಾಗಿದ್ದರೂ ಸ್ವಭಾವತಃ ಬಿಸಿಯಾಗಿರುತ್ತದೆ. ಇದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಮತ್ತು ಹೆಚ್ಚು ಸಮಯ ಬೇಕಾಗುತ್ತದೆ. ಶಕ್ತಿಯನ್ನು ಸುಧಾರಿಸುತ್ತದೆ, ಕಫ ಮತ್ತು ಪಿಟ್ಟಾಗಳನ್ನು ಹೆಚ್ಚಿಸುತ್ತದೆ. ಜೀರ್ಣ ಶಕ್ತಿಯನ್ನು ಸುಧಾರಿಸುತ್ತದೆ.

ಆಯುರ್ವೇದ ತಜ್ಞರ ಪ್ರಕಾರ, ಸ್ಥೂಲಕಾಯತೆ, ಕೆಮ್ಮು, ರಕ್ತಸ್ರಾವ, ಉರಿಯೂತದ ಕಾಯಿಲೆ ಇರುವವರು ರಾತ್ರಿ ಹೊತ್ತು ಮೊಸರು ಸೇವಿಸಬಾರದು. ಹಗಲಿಗಿಂತ ರಾತ್ರಿ ಹೊತ್ತು ಚಯಾಪಚಯವು ಕಡಿಮೆಯಾಗಿರುತ್ತದೆ.

ರಾತ್ರಿ ಮೊಸರು ತಿಂದರೆ ಜೀರ್ಣವಾಗಲು ಕಷ್ಟವಾಗುವುದರಿಂದ ಹೊಟ್ಟೆ ಭಾರವಾಗುತ್ತದೆ. ಇದು ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ. ಮಧುಮೇಹ, ತೂಕ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೂ ನಿಮಗೆ ರಾತ್ರಿ ಹೊತ್ತು ಮೊಸರು ತಿನ್ನಲೇಬೇಕು ಅನಿಸಿದರೆ ಅದರಲ್ಲಿ ಸ್ವಲ್ಪ ಮಜ್ಜಿಗೆ ಮಾಡಿ ಕುಡಿಯಿರಿ.

ನಿಮಗೆ ಮೊಸರು ತಿನ್ನಲೇಬೇಕು ಅನಿಸಿದರೆ ಅದನ್ನು ಮಣ್ಣಿನ ಪಾತ್ರೆಯಲ್ಲಿ ಇಡುವುದು ಒಳ್ಳೆಯದು. ಉಕ್ಕಿನ ಪಾತ್ರೆಗಳಲ್ಲಿಟ್ಟರೂ ಪರವಾಗಿಲ್ಲ. ಪ್ಲಾಸ್ಟಿಕ್ನಂತಹ ವಸ್ತುಗಳನ್ನು ಬಳಸದಿರುವುದು ಉತ್ತಮ. ಬೆಳಗ್ಗೆ ಹೊತ್ತು ಮಜ್ಜಿಗೆ ಮಾಡಿ ಅದರೊಳಗೆ ಬೀಜಗಳು ಹಾಕಿ ಅಥವಾ ಮೊಸರಿಗೆ ಸ್ವಲ್ಪ ನೀರು ಹಾಕಿ ನಿಮಗಿಷ್ಟವಾದ ಹಣ್ಣುಗಳನ್ನು ಹಾಕಿ ಕೂಡ ಸೇವಿಸಬಹುದು. ಇದರಿಂದ ನೀವು ದಿನವಿಡೀ ಆ್ಯಕ್ಟಿವ್ ಆಗಿರುತ್ತೀರಿ.

ಚಿಲುಕೂರಿ ನಾಗೇಶ್ವರ್ ರಾವ್ ಕಾಲೇಜ್ ನಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ 

ಚಿಲುಕೂರಿ ನಾಗೇಶ್ವರ್ ರಾವ್ ಕಾಲೇಜ್ ನಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

He wished everyone in the country a happy birthday to Madiwala Machideva

ಗಂಗಾವತಿ: ದಿನಾಂಕ 01-02-2026 ರಂದು ತಾಲೂಕಿನ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪವಾಡಸದೃಶ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರದ ಪ್ರೊ.ಕರಿಗೂಳಿಯವರು,
ಸಾಮಾಜಿಕ ಶೋಷಣೆಯು ಹೆಚ್ಚಿದ್ದ 12ನೇ ಶತಮಾನದ ಕಾಲದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಾದಿ ಶರಣರಲ್ಲಿ ಪ್ರಮುಖರಾದ ಮಡಿವಾಳ ಮಾಚಿದೇವರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯವರು ಬಸವ ಚಿಂತನೆಯ ಕಾಲಘಟ್ಟದಲ್ಲಿ ಅತ್ಯಂತ ಕಟುಪ್ರಶ್ನೆ ಕೇಳಲು ಹೆಸರಾಗಿದ್ದರು, ತನ್ನ ಮೇಲೆ ದಾಳಿ ಮಾಡಿಸಿದ ಬಿಜ್ಜಳರಾಜನ ಸೈನ್ಯವನ್ನು ಹಾಗೂ ಆನೆಯನ್ನು ಸೋಲಿಸಿ ಗೆದ್ದ ಮಹಾನ್ ಶಕ್ತಿಶಾಲಿ ಶರಣರು, ‘ಬೇಡುವ ಭಕ್ತರಿಲ್ಲದೆ ಬಡವನಾದೇನಯ್ಯ’ ಎಂಬ ಬಸವಣ್ಣರನ್ನೇ, ನೀವು ಮಾತ್ರ ದಾನಿಗಳು ನಾವೆಲ್ಲರೂ ದರಿದ್ರರೇ ಎಂದು ಪ್ರಶ್ನಿಸಿ ಭಕ್ತರು ಬಡವರಲ್ಲ ಎಂದು ಸಾಬೀತುಪಡಿಸಿದ ಇವರು ಅತ್ಯಂತ ಭಕ್ತಿಮಯ ಜ್ಞಾನಿಗಳಾಗಿದ್ದರು, ಇದಕ್ಕೆ ಮೂಲ ಕಾರಣ ಶೂದ್ರರಿಗೆ ವಿದ್ಯೆ ದೊರೆಯದ ಕಾಲದಲ್ಲೇ ಇವರಿಗೆ ವಿದ್ಯೆ ಕಲಿಸಿದ ಇವರ ಗುರುಗಳಾದ ಮಲ್ಲಿಕಾರ್ಜುನಯ್ಯ ಸ್ವಾಮಿಗಳು.

ಜ್ಞಾನ ಸಂಪಾದನೆಯಲ್ಲಿ ಹಾಗೂ ಭಕ್ತಿಪಥದಲ್ಲಿ ಗುರುವಿನ ಪಾತ್ರ ಹಿರಿದು ಎಂಬುದಕ್ಕೆ ಮಡಿವಾಳ ಮಾಚಿದೇವರ ಜೀವನವೇ ಸಾಕ್ಷಿ.
ಸಾಮಾಜಿಕವಾಗಿ ಅಸಮಾನತೆಯನ್ನು ಆಚರಿಸುತ್ತಿದ್ದ ಅಂದಿನ ಕಾಲದಲ್ಲೇ, ಭಕ್ತರಲ್ಲದವರು ನನ್ನನು ಮುಟ್ಟಬೇಡಿ ಎಂಬ ಮಾತಿನೊಂದಿಗೆ ಜಾತಿವಾದಿಗಳನ್ನು ಆತ್ಮವಿಮರ್ಶೆಗೆ ಹಚ್ಚಿದ ಮಹನೀಯರು ಮಾಚಿದೇವರು, ಇಂತಹ ಮಹಾನ್ ಶರಣರು ಹುಟ್ಟಿ ಬೆಳೆದು ಪವಿತ್ರ ಸಂದೇಶ ನೀಡಿಹೋದ ಈ ನಮ್ಮ ಕಲ್ಯಾಣ ಕರ್ನಾಟಕ ನಾಡು ಧನ್ಯ, ಈ ಮಣ್ಣಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ, ನಡೆಯಲ್ಲೊಂದು ನುಡಿಯಲ್ಲಿ ಇನ್ನೊಂದು ಆಚರಿಸಿದವರು ದೇವರೇ ಆಗಿದ್ದರು ಪ್ರಶ್ನಾರ್ಹರು ಎಂದು ಪ್ರತಿಪಾದಿಸಿದ ಶ್ರೇಷ್ಠ ಶರಣರು ಮಾಚಿದೇವರು ಎಂದು ಅಭಿಪ್ರಾಯಪಟ್ಟರು, ಇವರ ವಚನಗಳ ಮೂಲಕ ಹೊರಹೊಮ್ಮಿದ ಮಾನವೀಯ ಮೌಲ್ಯಗಳು ಇಂದಿಗೂ ಅನುಕರಣೀಯ ಎಂದರು.

ಈ ಸಂದರ್ಭದಲ್ಲಿ ಚಿನ್ನವರಪ್ರಸಾದ ಹಾಗೂ ದುರ್ಗಾಕೃಷ್ಣ ಇದ್ದರು.

ಕರಾಟೆ ತರಬೇತಿದಾರ ಡಾ. ಶಿಹಾನ್ ಜಬಿವುಲ್ಲಾ ಅವರಿಗೆ ಪದ್ಮಶ್ರೀ ಗ್ಲೋಬಲ್ ಪ್ರಶಸ್ತಿ
Karate trainer Dr. Shihan Zabiullah awarded Padma Shri Global Award

ಗಂಗಾವತಿ:ಭಾರತದ ಹೆಸರಾಂತ ಸಂಸ್ಥೆಯಾದಂತಹ ಒರಿಯಂಟಲ್ ಫೌಂಡೇಶನ್ (ರಿ) ವತಿಯಿಂದ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಇಂಡಿಯಾ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಗಂಗಾವತಿಯ ಖ್ಯಾತ ಕರಾಟೆ ತರಬೇತಿದಾರರಾದ ಡಾ. ಶಿಹಾನ್ ಜಬಿವುಲ್ಲಾ ಅವರ 20 ವರ್ಷಗಳ ಕರಾಟೆ ಸ್ಕೇಟಿಂಗ್ ಮತ್ತು ಸ್ವಿಮ್ಮಿಂಗ್ ಕ್ಷೇತ್ರದಲ್ಲಿನ ಸಾದನೆಯನ್ನು ಗುರುತಿಸಿ ಅವರಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪದ್ಮಶ್ರೀ ಗ್ಲೋಬಲ್ ಪ್ರಶಸ್ತಿ ಮತ್ತು ಹತ್ತು ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಡಾಕ್ಟರ್ ರವಿಕುಮಾರ್ ಸರ್ ಮೈಸೂರ್ ರಮಾನಂದ ಖ್ಯಾತ ಚಿತ್ರನಟರು ಶ್ರೀಮತಿ ಅಭಿನಯ ಖ್ಯಾತ ಕಿರುತರೆ ಚಿತ್ರ ನಟಿಯರು ಮತ್ತು ಗಣ್ಯ ವ್ಯಕ್ತಿಗಳು ಈ ಪ್ರಶಸ್ತಿಯನ್ನು ನೀಡಿ ಜಬಿವುಲ್ಲಾ ಅವರಿಗೆ ಗೌರವಿಸಲಾಯಿತು. ಈ ಸಂಸ್ಥೆಗೆ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯನ್ ಮತ್ತು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ರಾಜ್ಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಸರ್ ಮತ್ತು ಭಾರ್ಗವ್ ರೆಡ್ಡಿ ಅವರು ಅಭಿನಂದನೆಗಳನ್ನು ಹೇಳುವುದರ ಮೂಲಕ ಜಬಿವುಲ್ಲಾ ಅವರಿಗೆ ಶುಭಾಶಯಗಳು ಕೋರಿದ್ದಾರೆ ಮತ್ತು ಗಂಗಾವತಿಯ ಮಾಜಿ ಬಾಡಿ ಬಿಲ್ಡರ್ ಆದಂತಹ ಮೈಬೂಬ್ ಸಾಬ್ ಹಾಗೂ ವಿವಿಧ ಸಂಘಟನೆ ಅಧ್ಯಕ್ಷರುಗಳು ಶುಭ ಹಾರೈಸಿದ್ದಾರೆ ಎಂದು ಹೇಳಲಾಯಿತು

ಕ್ಯಾನ್ಸರ್ ಪತ್ತೆಯಾದರೆ ನೀವು ಏನು ಮಾಡುವಿರಿ?

ನಾನು ಸ್ವತಃ ಎರಡು ಬಾರಿ ಕ್ಯಾನ್ಸರ್‌ಗೆ ಒಳಗಾಗಿದ್ದೇನೆ. ಮೊದಲ ಬಾರಿಗೆ 2019ರಲ್ಲಿ, ಮತ್ತೆ 2021ರಲ್ಲಿ ಪುನಃ ಬಂದಿತು. ಎರಡೂ ಬಾರಿ ದೊಡ್ಡ ಶಸ್ತ್ರಚಿಕಿತ್ಸೆ ಮತ್ತು ದೀರ್ಘ ಚಿಕಿತ್ಸೆ ಮಾಡಿಸಿಕೊಂಡೆ. ಭಾಷಣ ಮಾಡಲು ಮತ್ತು ಸರಿಯಾಗಿ ತಿನ್ನಲು ಸಾಧ್ಯವಾಗದ ಸ್ಥಿತಿಗೆ ಬಂದರೂ, ನಾನು ಬದುಕಿದ್ದೇನೆ — ಏಕೆಂದರೆ ನಾನು ಹೆದರದೆ ತಕ್ಷಣವೇ ಸರಿಯಾದ ತಜ್ಞ ವೈದ್ಯರನ್ನು ಸಂಪರ್ಕಿಸಿದೆ, ಪರೀಕ್ಷೆ ಮತ್ತು ಚಿಕಿತ್ಸೆ ವಿಳಂಬ ಮಾಡಲಿಲ್ಲ.

ಆದುದರಿಂದ, ನಿಮಗೆ ಕ್ಯಾನ್ಸರ್ ಪತ್ತೆಯಾದರೆ —

    1. ಹೆದರಬೇಡಿ – ಭಯದಿಂದ ನೀವು ಸಮಯ ಕಳೆದುಕೊಳ್ಳುತ್ತೀರಿ, ಆದರೆ ಕ್ಯಾನ್ಸರ್‌ಗೆ ಸಮಯವೇ ದೊಡ್ಡ ಶಸ್ತ್ರಾಸ್ತ್ರ.
    2. ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ – ಸಾಮಾನ್ಯ ಚಿಕಿತ್ಸೆಯಿಂದ ಸಮಯ ವ್ಯರ್ಥ ಮಾಡಬೇಡಿ.
    3. ಪರೀಕ್ಷೆ ಮತ್ತು ಚಿಕಿತ್ಸೆ ತಡಮಾಡಬೇಡಿ – ಆರಂಭದ ಹಂತದಲ್ಲೇ ಹಿಡಿದರೆ ಬಹಳಷ್ಟು ಜೀವಗಳು ಉಳಿಯುತ್ತವೆ.
    4. ಮನೋಬಲ ಕಳೆದುಕೊಳ್ಳಬೇಡಿ – ನಾನು ನನ್ನ ಮಗಳ ಭವಿಷ್ಯವನ್ನು ನೆನೆದು ಬದುಕಲು ಹೋರಾಡಿದೆ. ನಿಮ್ಮ ಜೀವನದಲ್ಲೂ ಯಾರಿಗಾದರೂ ನೀವು ಬೇಕು — ಅವರಿಗಾಗಿ ಹೋರಾಡಿ.
    5. ಆರೋಗ್ಯಕರ ಜೀವನಶೈಲಿ – ಚಿಕಿತ್ಸೆ ಸಮಯದಲ್ಲಿ ಪೌಷ್ಟಿಕ ಆಹಾರ, ವಿಶ್ರಾಂತಿ ಮತ್ತು ಧೈರ್ಯ ತುಂಬುವ ಮಾತುಗಳು ತುಂಬಾ ಮುಖ್ಯ.

    ನಾನು ಇಂದು ಜೀವಂತನಾಗಿರುವುದು, ಸಮಯಕ್ಕೆ ಚಿಕಿತ್ಸೆ ಆರಂಭಿಸಿದ್ದರಿಂದ ಮತ್ತು ಮನೋಬಲ ಕಳೆದುಕೊಳ್ಳದಿದ್ದರಿಂದ.
    ಕ್ಯಾನ್ಸರ್ ಪತ್ತೆಯಾದಾಗ ಅದು ಅಂತ್ಯವಲ್ಲ — ಅದು ಹೋರಾಟ ಪ್ರಾರಂಭಿಸುವ ಸಮಯ.

    ಬಸವಣ್ಣನವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರವರಿಗೆ ವಿಶೇಷ ಸ್ಥಾನಮಾನವಿತ್ತು : ಶಾಸಕ ಎಮ್ ಆರ್ ಮಂಜುನಾಥ್

    ಬಸವಣ್ಣನವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರವರಿಗೆ ವಿಶೇಷ ಸ್ಥಾನಮಾನವಿತ್ತು : ಶಾಸಕ ಎಮ್ ಆರ್ ಮಂಜುನಾಥ್

    Madiwala Machideva had a special status in Basavanna's Anubhav Mantapa: MLA M.R. Manjunath

    ವರದಿ: ಬಂಗಾರಪ್ಪ .ಸಿ .
    ಹನೂರು : ಮಾಚಿದೆವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕತೆಯಾಗುತ್ತದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ರವರು ತಿಳಿಸಿದರು..
    ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರ ಪುಷ್ಪ ನಮನ ಸಲ್ಲಿಸುವ ಮೂಲಕ ಮಾತನಾಡಿದ ಅವರು
    ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ , 12ನೇ ಶತಮಾನ ಕಾಲಘಟ್ಟದಲ್ಲಿ ಮೌಢ್ಯಗಳಿಂದ ಕೂಡಿದ ಶೋಷಿತರನ್ನು ವರದರವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಪ್ರಮುಖವಾಗಿದ್ದು ಬಸವಣ್ಣನವರ ಅನುಭವ ಮಂಟಪದ
    ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಶುದ್ದವಾದ ವಾತಾವರಣ ನಿರ್ಮಾಣ ಮಾಡಲು ಹೊರಟ್ಟಿದ್ದವರು.
    ಅನುಭವ ಮಂಟಪದಲ್ಲಿ ಎಲ್ಲಾ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಯಿತು. ಅಂತಹವರ ಹೇಳಿಕೆಯನ್ನು ನಾವು ಅರ್ಥೈಸಿಕೊಂಡರೆ ಮುಂದಿನ ಪೀಳಿಗೆಗೆ ಉತ್ತಮ ವಾತವರಣದಲ್ಲಿ ಬದುಕಲು ಸಹಕಾರಿಯಾಗುತ್ತದೆ , ಇಲ್ಲಿರುವ ಸಮುದಾಯ ಮುಖಂಡರುಗಳು ಮೂರು ವರ್ಷ ಅಥವಾ ಐದು ವರ್ಷಗಳ ಕಾಲಕ್ಕೆ ತಕ್ಕಂತೆ ಕಾರ್ಯಕ್ರಮವನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು.

    ಜಿಲ್ಲಾ ಉಪಾದ್ಯಕ್ಷರಾದ ವಿಜಯಕುಮಾರ್ ಮಾತನಾಡಿ ಹನ್ನೇರಡೆ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಿದವರು ಇವರು, ವಚನ ಸಾಹಿತ್ಯದಲ್ಲಿ ಕುಲಗುರುಗಳ ಹೆಸರು ಅಜಾರಮರವಾಗಿರಲಿ . ಹಾಗೂ
    ನಮ್ಮ ಭಾಗದ ಸಮುದಾಯದ ಜನಾಂಗದ ಪರವಾಗಿ ನಿಂತು ಕೆಲಸ ಮಾಡಿದ ನಮ್ಮ ಶಾಸಕರು ,ಇಂಥ ಮಹನಿಯರ ಜಯಂತಿಯನ್ನು ಆಚರಿಸುವುದೆ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

    ಇದೇ ಸಂದರ್ಭದಲ್ಲಿ
    ತಾಲೂಕು ದಂಡಾಧಿಕಾರಿಗಳಾದ ಚೈತ್ರ,ಮಡಿವಾಳ ಸಮುದಾಯದ ಜಿಲ್ಲಾ ಉಪಾಧ್ಯಕ್ಷರಾದ ಹಾಗೂ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್,ಸಮುದಾಯದ ಮುಖಂಡರುಗಳಾದ ಕೃಷ್ಣ, ಡಿ ಅರ್ ಮಾದೇಶ್ . ಅಜ್ಜೀಪುರ ಮಹಾದೇವಶೆಟ್ಟಿ, ರಮೇಶ್, ನಂದೀಶ್, ಮಹದೇವಕುಮಾರ್,ಶಾಂತು, ನಾಗಣ್ಣ, ಕುಮಾರ್, ಹಾಗೂ ಪೋಲಿಸ್ ಇಲಖೆಯ ಶಿವಮೂರ್ತಿ ,ಅಗ್ನಿಶಾಮಕ ಠಾಣೆ ಅಧಿಕಾರಿ ಮಹೇಶ್ ,ಶಿಕ್ಷಕರಾದ ವೆಂಕಟಚಲರವರು ಸೇರಿದಂತೆ ಇನ್ನಿತರರು ಹಾಜರಿದ್ದರು..

    ಪಾರ್ಲೆ-ಜಿ: ಭಾರತದ ಅರ್ಧದಷ್ಟು ಜನರಿಗೆ 5 ರೂಪಾಯಿ ಪಾರ್ಲೆ-ಜಿ ಯಲ್ಲಿ ‘ಜಿ’ ಅಕ್ಷರದ ಅರ್ಥ ತಿಳಿದಿಲ್ಲ.

    ಪಾರ್ಲೆ-ಜಿ: ಭಾರತದ ಅರ್ಧದಷ್ಟು ಜನರಿಗೆ 5 ರೂಪಾಯಿ ಪಾರ್ಲೆ-ಜಿ ಯಲ್ಲಿ ‘ಜಿ’ ಅಕ್ಷರದ ಅರ್ಥ ತಿಳಿದಿಲ್ಲ.

    Parle-G: Half of India doesn't know the meaning of the letter 'G' in the 5 rupee Parle-G

    ಪಾರ್ಲೆ-ಜಿ ಬಿಸ್ಕತ್ತುಗಳನ್ನು ಭಾರತದಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇವು ಚಹಾದೊಂದಿಗೆ ಅಚ್ಚುಮೆಚ್ಚಿನ ಜೋಡಿ. ಪ್ರಸ್ತುತ, ಈ ಬಿಸ್ಕತ್ತುಗಳು ಗಾಜಾದಲ್ಲಿ ಮಾರಾಟಕ್ಕಾಗಿ ಸುದ್ದಿಯಲ್ಲಿವೆ ಏಕೆಂದರೆ ಅವುಗಳ ಬೆಲೆಗಳು ಗಗನಕ್ಕೇರಿವೆ. ₹5 ಬೆಲೆಯಿದ್ದ ಪ್ಯಾಕೆಟ್ ಈಗ ₹2,000 ಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಆದರೆ ಈ ಪ್ರಸಿದ್ಧ ಬಿಸ್ಕತ್ತಿನ ಹೆಸರಿನಲ್ಲಿರುವ “ಜಿ” ಏನನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ತಿಳಿಯಿರಿ.

    ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್‌ನ ಅಧಿಕೃತ ಹೇಳಿಕೆಯ ಪ್ರಕಾರ, ಪಾರ್ಲೆ-ಜಿ ಅನ್ನು 1939 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಇನ್ನೂ ಭಾರತದ ಅತ್ಯಂತ ವಿಶ್ವಾಸಾರ್ಹ ಬಿಸ್ಕತ್ತು ಬ್ರಾಂಡ್ ಎಂದು ಪರಿಗಣಿಸಲಾಗಿದೆ. ₹5 ಬೆಲೆಯ ಈ ಬಿಸ್ಕತ್ತು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಪ್ರಿಯವಾಗಿದೆ.

    ಪಾರ್ಲೆ-ಜಿ ಯಲ್ಲಿರುವ ‘ಜಿ’ ಅಕ್ಷರವು “ಗ್ಲುಕೋ” ವನ್ನು ಸೂಚಿಸುತ್ತದೆ. ಹೌದು, ಇದನ್ನು ಮೂಲತಃ ಪಾರ್ಲೆ ಗ್ಲುಕೋ ಬಿಸ್ಕತ್ತು ಎಂದು ಕರೆಯಲಾಗುತ್ತಿತ್ತು, ಇದು ಶಕ್ತಿಯನ್ನು ಒದಗಿಸುವ ಗ್ಲೂಕೋಸ್ ಬಿಸ್ಕತ್ತು. ನಂತರ, ಹೆಸರನ್ನು ಚಿಕ್ಕದಾಗಿ ಮತ್ತು ಹೆಚ್ಚು ಸ್ಮರಣೀಯವಾಗಿಸಲು, ಕಂಪನಿಯು ಅದನ್ನು ಪಾರ್ಲೆ-ಜಿ ಎಂದು ಬದಲಾಯಿಸಿತು, ‘ಜಿ’ ಅಕ್ಷರವು ಗ್ಲೂಕೋಸ್ ಅನ್ನು ಪ್ರತಿನಿಧಿಸುತ್ತದೆ. ಕೆಲವರು ಇದನ್ನು ‘ಜೀನಿಯಸ್’ ಎಂದು ಪರಿಗಣಿಸುತ್ತಾರೆ, ಆದರೆ ಕಂಪನಿಯ ಪ್ರಕಾರ, ‘ಜಿ’ ವಾಸ್ತವವಾಗಿ ಗ್ಲೂಕೋಸ್ ಅನ್ನು ಸೂಚಿಸುತ್ತದೆ.

    ಪಾರ್ಲೆ-ಜಿ ಪ್ಯಾಕೆಟ್‌ನಲ್ಲಿರುವ ಹುಡುಗಿ ಒಬ್ಬ ಕಲಾವಿದನ ಕಾಲ್ಪನಿಕ ಸೃಷ್ಟಿಯಾಗಿದ್ದು, ನಿಜವಾದ ಮುಖವಲ್ಲ. ಇದನ್ನು 1960 ರ ದಶಕದಲ್ಲಿ ವಿನ್ಯಾಸಕ ಮಗನ್‌ಲಾಲ್ ದೈಯಾ ರಚಿಸಿದ್ದಾರೆ.

    ಪಾರ್ಲೆ-ಜಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ತು. 2003 ರಲ್ಲಿ, ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿಯೂ ಸೇರಿತ್ತು.