
ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಅಬ್ಬರದ ನಡುವೆ ನಲುಗಿಹೋದ ಬಿಜೆಪಿ ಪಕ್ಷ .
BJP party is shaken amidst the uproar of JDS and Congress party in Hanur constituency
ವರದಿ:ಬಂಗಾರಪ್ಪ .ಸಿ.
ಹನೂರು : ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ವಜನರು ಸದಾಕಾಲವೂ ರಾಜಕೀಯ. ಮಾಡದಿದ್ದರು ಇಂದಿನ ಪರಿಸ್ಥಿತಿಯಲ್ಲಿ ಅವರಿಗಿರುವ ಸಾಮಾನ್ಯ ಜ್ಞಾನದ ಮಟ್ಟಿಗೆ ಹೇಳುವುದಾದರೆ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿಯೆ ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ವಿಶೇಷವಾಗಿ ಆಯ್ಕೆ ಮಾಡುವ ಮೂಲಕ ತಮ್ಮ ತನವನ್ನು ತೋರಿಸಿ ಬದಲಾವಣೆ ಮಾಡಿಕೊಳ್ಳುವ ಶಕ್ತಿಯ ಸಾಮರ್ಥ್ಯವನ್ನು ಕರಗತ ಮಾಡಿಕೊಂಡಿದ್ದಾರೆ ಎನ್ನಬಹುದು ಎನ್ನಲಾಗಿದೆ ಎಂದು ಪ್ರಾಮಾಣಿಕ ಕಾರ್ಯಕರ್ತರು ತಿಳಿಸಿದರು .

ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಜನಾಂಗದವರು ಸೇರಿದಂತೆ ಸುಮಾರು ಎರಡು ಲಕ್ಷದ ಇಪ್ಪತ್ತು ಸಾವಿರ ಮತದಾರರಿದ್ದಾರೆ ಕಳೆದ ಎರಡು ಸಲವು ಬಹು ಸುಲಭವಾಗಿ ಗೆಲುವು ಕಾಣುವ ಅವಕಾಶಗಳನ್ನು ,ಕೇಲವು ಕ್ಷೇತ್ರದ ಹೊರಗಿನ ಭಟ್ಟಂಗಿಗಳಿಂದ ಕಳೆದುಕೊಂಡಿದ ಬಿಜೆಪಿ ಅದಕ್ಕೆ ಕಾರಣ ಆಂತರಿಕ ಕಚ್ಚಾಟ ಸರಿಯಾದ ನಾಯಕರ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಪಕ್ಷಕ್ಕೆ ಸಾದ್ಯವಾಗಿಲ್ಲ ,ಜನ ಬಿಜೆಪಿ ಬಯಸಿದರು ಸಹ ಅನ್ಯ ಕ್ಷೇತ್ರದಿಂದ ಬಂದಿರುವ ಅಮಾವಾಸ್ಯೆ ಮತ್ತು ಹುಣ್ಣಿಮೆ ಎಂಬ ಎರಡು ಗಿರಾಕಿಗಳಿಂದ ಹನೂರು ಕ್ಷೇತ್ರವು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಾಗಿದೆ ಎಂದರು ತಪ್ಪಾಗಲಾರದು.
ಇದರ ಜೊತೆಯಲ್ಲಿ ಇತ್ತಿಚಿನ ದಿನಗಳಲ್ಲಿ ಮತ್ತೋಬ್ಬ ಗಿರಾಕಿ ಸೇರಿಕೊಂಡು ಗ್ರಹಣವು ಸೇರಿದರೆ ಸೂರ್ಯನಿಗೆ ಮಂಕಾದಂತೆ ಬಿಜಿಪಿ ಪಕ್ಷದ ಕಥೆಯು ಮುಗಿಯಿತು ಎನ್ನಬಹುದು .
ಹನೂರು ಕ್ಷೇತ್ರದಲ್ಲಿ ಸರಿಯಾದ ಮಂಡಲ ಅದ್ಯಕ್ಷರುಗಳಾಧಿಯಾಗಿ ತಮ್ಮ ಕೆಲಸ ನಿರ್ವಹಿಸುತ್ತಿಲ್ಲ ಅವರಿಗೆ ನಾನೆ ಸಂಬಳ ಕೊಟ್ಟಿದ್ದೆನೆ ಎಂದು ಒಬ್ಬ ಹುಣ್ಣಿಮೆ ಗಿರಾಕಿ ಹೇಳಿಕೊಂಡು ಮಂಡಲ ಅಧ್ಯಕ್ಷರಾದ ಒಬ್ಬರನ್ನು ಇವರು ಬಂದಾಗ ತಮ್ಮ ಕಛೇರಿಗೆ ಕರೆಯಿಸಿ ಮೆಲ್ಮಟ್ಟದ ಮುಖಂಡರಿಗೆ ಕೇವಲ ಕಥೆ ಹೇಳಿಸುವ ಮೂಲಕ ತಮ್ಮ ನಾಟಕ ಕಂಪನಿಯನ್ನು ನಡೆಸುತ್ತಿದ್ದಾನೆ ,ಮಂಡಲ ಅಧ್ಯಕ್ಷರಾದವರ ಜೊತೆಯಲ್ಲಿ ಜಿಲ್ಲಾಧ್ಯಕ್ಷರ ಕಥೆಗಳು ಸಹ ಕೇವಲ ಅಲ್ಲೊಂದು ಇಲ್ಲೊಂದು ಪೋಟೊಗೆ ಪೋಜು ನೀಡಿ ಒಂದು ಕಾಪಿ ಕುಡಿದು ಹನೂರು ಖಾಲಿ ಮಾಡಿದರೆ ಪಕ್ಷ ಸಂಘಟನೆ ಮಾಡಲಾಗಿದೆ ಎಂಬ ಭಾವನೆ ಅವರದು ,ಇಂತವರಿಗೆಲ್ಲ ಬಿಜೆಪಿ ಜವಬ್ದಾರಿ ನೀಡಿದರೆ ಪಕ್ಷದ ಕತೆ ಗೋತವಾಗಲಿದೆ ,ಇನ್ನು ಸಂಘಟನೆಯ ಕೊರತೆಯನ್ನು ತುಂಬಲು ಕಾರ್ಯಕರ್ತರು ಅಗಾದ ಕಷ್ಟ ಪಡುವ ಸ್ಥಿತಿಯನ್ನು ನಿರ್ಮಾಣಮಾಡಲಾಗಿದೆ .
ಇನ್ನು ಒಬ್ಬ ಅಮಾವಾಸ್ಯೆ ಗಿರಾಕಿಯು ಕೇವಲ ಜಾತಿಗೆ ಸೀಮಿತ ಎಂಬಂತೆ ಬಿಂಬಿಸಿ ಜಾತಿಗೆ ಕಳಂಕ ತರುವಂತೆ ಮಾಡಿದ್ದಾನೆ , ಹನೂರು ಕ್ಷೇತ್ರದಲ್ಲಿನ ಮೂಲ ಪಕ್ಷದ ಅಭ್ಯಾರ್ಥಿಗಳನ್ನು ಸೋಲಿಸುವಲ್ಲಿ ಅಂಗೊ ಇಂಗೊ ಯಶಸ್ವಿಯಾಗಿ ನಿಬಾಯಿಸುವಲ್ಲಿ ಯಶಸ್ವಿಯಾಗಿ ಮಾಡಿದ್ದಾನೆ, ಕಳೆದ ಚುನಾವಣಾ ಸಮಯದಲ್ಲಿ ಸ್ವಲ್ಪ ದರದಲ್ಲಿ ಕಾರ್ಯಕರ್ತರಿಂದ ಘೇರಾವ್ ಹಾಕಿಸಿಕೊಂಡು ಮುಂದುವರೆಯುವಷ್ಟರಲ್ಲಿ ಪಾರಾದ, ಆದರೆ ಅವನ ಆಟ ಇನ್ನು ಮುಗಿದಿಲ್ಲ ಮುಂದುವರಿದು ಮೈಸೂರು ಭಾಗದ ಶಾಸಕರಾದ ಜಿಟಿ ಹರಿಶ್ ಗೌಡರ ಸಖ್ಯ ಬೆಳೆಸಿ ಅವರಿಂದ ಎಮ್ ಡಿ ಸಿಸಿ ಬ್ಯಾಂಕಿನಲ್ಲಿ ಹನೂರು ಕ್ಷೇತ್ರವನ್ನೆ ಇತಿಹಾಸದ ಬದಲಿಸಿವೆ ಎಂದು ಮುನ್ನೂಗ್ಗಿ ಮುಗ್ಗರಿಸಿದ ಕಥೆಯು ನಮ್ಮ ಕಣ್ಣಮುಂದೆ ಕಾಣುತ್ತಿದೆ , ಜವಾಬ್ದಾರಿ ನನ್ನದೆ ಎಂಬುವಂತೆ ಬಿಂಬಿಸಿ ಮಲ್ಲೇಶ್ ಎಂಬುವವರನ್ನು ನಯವಾಗಿ ಸೋಲಿಸಿದ ಬೂಪರಾಗಿದ್ದಾರೆ ,
ಇನ್ನೊಬ್ಬ ಉಣ್ಣಿಮೆ ಗಿರಾಕಿ ಚುನಾವಣಾ ಬಂದರೆ ಕ್ಷೇತ್ರದಲ್ಲಿ ಕೈ ಎತ್ತುವ ಮೂಲಕ ನನ್ನ ಪ್ರಾಣ ಇಲ್ಲೆ ಎನ್ನುತ್ತ ,ಕ್ಷೇತ್ರದಲ್ಲಿ ಅಪಘಾತ ಅಥವಾ ಸಣ್ಣಪುಟ್ಟ ಕಾಯಿಲೆಗಳಿಂದ ಅನಾರೋಗ್ಯದ ದೃಷ್ಟಿಯಿಂದ ಪ್ರಾಣ ಹೊದವರ ಹತ್ತಿರವು ಸುಳಿಯದೆ ಕಣ್ಮರೆಯಾಗಿ ಹೋಗುವ ಇವರು, ಕ್ಷೇತ್ರಕ್ಕೆ ಯಾರಾದರು ಗಣ್ಯ ವ್ಯಕ್ತಿಗಳು ಬಂದರೆ ತಟ್ಟಂತ ನಾನೆ ಮಹನಾಯಕನೆಂಬಂತೆ ಹಾರಿ ಬರುವ ಜಾರುಬಂಡಿ ನಾಯಕರ ಸ್ಥಿತಿಯು ಬಿಜೆಪಿಯಲ್ಲಿ ಚಿಂತಜನಕವಾಗಿದೆ ಅವರಿಗೆ ಬಿ ಪಾರ್ಮ್ ಸಿಗುವ ವಿಶ್ವಾಸವು ಇವರಿಗಿಲ್ಲ ,
ಇನ್ನು ಕಳೆದ ಸಲದಲ್ಲಿ ಪರಜಿತರಾದ ಪ್ರೀತನ್ ರವರು ಮತ್ತು ಅವರ ತಾಯಿ ಪರಿಮಳಮ್ಮರವರು ತಾವು ಮಾಡುವ ಕೆಲಸದಲ್ಲಿ ಪ್ರಚಾರ ಕಾರ್ಯದಿಂದ ದೂರವೆ ಉಳಿದಿದ್ದಾರೆ . ಹಾಗೆ ನೋಡುವುದಾದರೆ .ಇದೇ ಕ್ಷೇತ್ರದ ದತ್ತೇಶ್ ಕುಮಾರ್ ರವರು ಸಹ ಪಕ್ಷದ ಅಭ್ಯರ್ಥಿಯಾಗಿ ಯಾರು ಬಂದು ಸ್ಪರ್ದಿಸಿದರು ಸರಿ ನಾನೆ ಮೊದಲು ಪಕ್ಷದ ಅಭ್ಯರ್ಥಿಯಾಗಿರುವವರ ಜೊತೆಯಲ್ಲಿ ಸೇರಿ ಬಿಜೆಪಿ ಗೆಲುವು ಕಾಣಲಿ ಎನ್ನುತ್ತಿದ್ದಾರೆ ,ಆದಾರೆ ಇವೆಲ್ಲವು ಸಾದ್ಯನ , ಬಿಜೆಯಲ್ಲಿ ತಿಂಗಳಿಗೊ ಮೂರು ತಿಂಗಳಿಗೊಮ್ಮೆ ಹಾಗೂ ಇಗೋ ಬರುವ ರಾಜಕೀಯ ಮಹನಾಯಕರಾದರವರು ನನ್ನ ನಾಯಕತ್ವ ದೆಹಲಿ ನಾಯಕರಿಗೆ ಗೊತ್ತು ಎನ್ನುತ್ತ ಧರ್ಮಸ್ಥಳದ ಬುರುಡೆ ಗ್ಯಾಂಗ್ ನ ರೀತಿಯಲ್ಲಿ ಬುರುಡೆ ಬಿಡುವುದೆ ಇವರ ಕಾಯಕವಾಗಿದೆ ಒಟ್ಟರೆ ಹೇಳುವುದಾದರೆ ಇವರುಗಳು ,ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವುದಿಲ್ಲ ಕ್ಷೇತ್ರ ಬಿಟ್ಟು ಹೋರಡುವುದಿಲ್ಲ ಜೆಡಿಎಸ್ ಪಕ್ಷದ ಬಿ ಟೀಮ್ ನಂತೆ ಕಾರ್ಯನಿರ್ವಹಿಸುವ ಇವರಕಾರ್ಯ ಅಲ್ಲೊಬ್ಬ ಇಲ್ಲೊಬ್ಬರು ನೋಡ್ತ ನಗ್ತಿದ್ದಾರೆ , ಆದರೆ ಪ್ರಾಮಾಣಿಕ ಕಾರ್ಯಕರ್ತರ ಕತೆ ಅಯೋಮಯವಾಗಲಿದೆ ಎಂದು ಬಿಜೇಪಿಯ ರಾಜಕೀಯ ಮುಖಂಡರಾದ... ತಿಳಿಸಿದರು.




