ಕಾಲೇಜು ಸಿಬ್ಬಂದಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ

Mallikarjun
1 Min Read

ಕಾಲೇಜು ಸಿಬ್ಬಂದಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ

     

Free health check-up camp for college staff

ಗಂಗಾವತಿ: ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಗೆ ಮಂಗಳವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

       ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯ ಹಾಗೂ ಸ್ವಸ್ಥ್ಯ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಶಿಬಿರ ನಡೆಯಿತು. ಶಿಬಿರ ಉದ್ದೇಶಿಸಿ  ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಅಕ್ಕಿ ಮಾರುತಿ ಮಾತನಾಡಿ, ಒತ್ತಡದ ಈ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಮನುಷ್ಯ ಆರೋಗ್ಯವಾಗಿದ್ದರೆ ಕರ್ತವ್ಯ ನಿರ್ವಹಣೆ ಸುಲಭ. ಆರೋಗ್ಯ ಭಾಗ್ಯಕ್ಕಿಂತ ಬೇರೆ ಭಾಗ್ಯ ಮತ್ತೊಂದಿಲ್ಲ ಎಂದರು.

      ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಮಾತನಾಡಿ, ಕಾಲೇಜು ಮನೆಯಂತಿದ್ದರೆ, ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ ಎಲ್ಲರೂ ಮನೆಯ ಸದಸ್ಯರಿದ್ದಂತೆ. ಕಾಯಂ ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಮತ್ತು ಕಾಲೇಜಿನ ಬೋಧಕೇತರ ಸಿಬ್ಬಂದಿ ಶಿಬಿರದ ಪ್ರಯೋಜನ ಪಡೆದು ಉತ್ತಮ ಆರೋಗ್ಯ ಪಡೆಯುವಂತೆ ಕರೆ ನೀಡಿದರು.

    ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರಾದ ಡಾ.ಕೃಷ್ಣಾಜಿ, ಡಾ.ಇಬ್ರಾಹಿಂ, ಡಾ.ಮುಮ್ತಾಜ್ ಬೇಗಂ, ಡಾ.ಅಣ್ಣೋಜಿ ರೆಡ್ಡಿ, ಡಾ.ಶೋಭಾ, ಡಾ.ಅನಿಲ್ ಎಡ್ವರ್ಡ್, ಮಂಜುನಾಥ ಕೆ.ಎಚ್., ಫಣಿರಾಜ್, ದೊರೆಬಾಬು, ಅಂಜುಮ್, ಕೆ.ರವಿಕುಮಾರ್, ರವಿಕುಮಾರ್. ಎಚ್.,   ರವಿಕುಮಾರ್. ಕೆ.ಎನ್., ಅನಿಲ್‌ಕುಮಾರ್, ಸಲೀಂ, ಸುಮಲತಾ, ನಯನಾ, ಭೂಮಿಕಾ, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ರಾಘಮ್ಮ, ಶಾಮೀದ್, ಪ್ರತಿಭಾ, ವೀರೇಶ್, ಅಶೋಕ್ ಇತರರು ಇದ್ದರು.

Total Views: 0
Share This Article