

ಸಾಂಕೇತಿಕ ಚಿತ್ರ: ಮಕ್ಕಳ ಪಿರಾಮಿಡ್
ಹಿಂದು ಸಮ್ಮೇಳನದಲ್ಲಿ ಶಾಲಾ ಮಕ್ಕಳ ಪಿರಾಮಿಡ್ ಪ್ರದರ್ಶನ
School children's pyramid display at Hindu Sammelan
ಗಂಗಾವತಿ:ಫೆ.21ಕ್ಕೆ ಸಂಜೆ ಜಯನಗರದ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ನಗರದ ಪಶ್ಚಿಮ ಭಾಗದ ಹಿಂದು ಸಮ್ಮೇಳನದಲ್ಲಿ ಶಾಲಾ ಮಕ್ಕಳ ಪಿರಾಮಿಡ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹಿಂದು ಸಮ್ಮೇಳನದ ಭಾಗವಾಗಿ ಫೆ.21ಕ್ಕೆ ಸಂಜೆ 3.30ಕ್ಕೆ ಕಲ್ಮಠದಿಂದ ಹೊರಡುವ ಶೋಭಾಯಾತ್ರೆಗೆ ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಚಾಲನೆ ನೀಡುವರು. ಮಕ್ಕಳು ವೇಷಭೂಷಣದಲ್ಲಿ ಭಾಗಿಯಾಆಗುತ್ತಾರೆ. ಮಹಿಳಾ ಭಜನಾ ಮಂಡಳಿಗಳು, ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ.
ಸಮ್ಮೇಳನದ ವೇದಿಕೆ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲ್ಗಡಾ ವಿದ್ಯಾವಿನಾಯಕ್ ಶಾಲೆಯ ವೀರ ಸಾವರ್ಕರ್ ಎಕ್ರೊಬಿಟಿಕ್ಸ್ ತಂಡದ ಮಕ್ಕಳಿಂದ ಆಕರ್ಷಕ ಪಿರಾಮಿಡ್ ರಚನೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಕಾರಟಗಿ ತಾಲ್ಲೂಕಿನ ಸೋಮನಾಳದ ಚಿಕ್ಕಬೊಮ್ಮನಾಳ ಹಿರೇಮಠದ ಮಲ್ಲಿಕಾಜರ್ುನ ಆಶ್ರಮದ ರುದ್ರಮುನಿಸ್ವಾಮಿ ಆಶೀರ್ವಚನ ನೀಡುವರು. ವಿಶ್ವ ಹಿಂದು ಪರಿಷತ್ತಿನ ಉತ್ತರ ಕನರ್ಾಟಕ ಪ್ರಾಂತದ ಸಹ ಕಾರ್ಯದಶರ್ಿ ವಿನಾಯಕ ತಳಗೇರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಹಾಸ್ಯ ಕಲಾವಿದ ಬೇವಿನಾಳ ಪ್ರಾಣೇಶ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.




