
Ningoji Educational Institute has grown immensely and has borne sweet fruit - Shekar Gowda Ullagadi
ನಿಂಗೋಜಿ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಿಹಿ ಫಲ ನೀಡಿದೆ-ಶೇಖರಗೌಡ ಉಳ್ಳಾಗಡ್ಡಿ
ನಿಂಗೋಜಿ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಿಹಿ ಫಲ ನೀಡಿದೆ-ಶೇಖರಗೌಡ ಉಳ್ಳಾಗಡ್ಡಿ

ಯಲಬುರ್ಗಾ:ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕನಸನ್ನು ಹೊತ್ತು ಪ್ರಾರಂಭಗೊಂಡ ನಿಂಗೋಜಿ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಿಹಿಫಲ ನೀಡಿದೆ ಎಂದು ರಾಯಚೂರ,ಕೊಪ್ಪಳ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಶೇಖರಗೌಡ ಉಳ್ಳಾಗಡ್ಡಿ ರವರು ಹೇಳಿದರು.
ಪಟ್ಟಣದ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ ಶಾಲೆಯ 12 ನೇ ವಾರ್ಷಿಕೋತ್ಸವ ದಿನಾಚರಣೆ ಹಾಗೂ ಮಲ್ಲಪ್ಪ ನಿಂಗೋಜಿ ಪ್ರತಿಷ್ಠಾನದಿಂದ “ಅವ್ವ_ಅಪ್ಪ” ಸಮಾಜ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ ಸಹಕಾರಿ ಧುರೀಣರಾದ ಶೇಖರಗೌಡ ಉಳ್ಳಾಗಡ್ಡಿ ರವರು ಮಾತನಾಡುತ್ತಾ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಮಲ್ಲಪ್ಪ ನಿಂಗೋಜಿರವರು ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ತದ ನಂತರ ಹೈ. ಕ. ವಿಮೋಚನೆಗೆ ಶ್ರಮಿಸಿದ ಧೀಮಂತ ವ್ಯಕ್ತಿಯಾಗಿದ್ದರು ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿ ನನಗೆ ಲಭಿಸಿರುವುದು ಪೂರ್ವ ಜನ್ಮದ ಸುಕ್ರತ ಎಂದು ಭಾವಿಸಿರುವೆ . ನಿಂಗೋಜಿ ಕುಟುಂಬವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಸ್ಮರಣೀಯವಾಗಿದೆ . ನಮ್ಮ ಜಿಲ್ಲೆಯಲ್ಲಿ ಆ ಕುಟಂಬವು ಸಹಕಾರಿ ˌ ಶಿಕ್ಷಣ ˌ ಸಾಹಿತ್ಯ ˌ ಕ್ರಷಿ ˌರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಎಲ್ಲರ ಜನ ಮಾನಸದಲ್ಲಿ ಉಳಿದಿದ್ದಾರೆ ಎಂದು ಮನದಾಳದ ಮಾತನ್ನು ಬಿಚ್ಟಿಡುತ್ತಾ ಕೊಪ್ಪಳದಲ್ಲಿ ಬಿ.ಎ.ಎಂ.ಎಸ್. ಮಹಿಳಾ ಪದವಿ ಕಾಲೇಜು ಹಾಗೂ ಯಲಬುರ್ಗಾದಲ್ಲಿ ಬಿ.ಇಡಿ . ಕಾಲೇಜು ˌ ಸೆಂಟ್ರಲ್ ಪಬ್ಲಿಕ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ಕೊಡುವದರ ಜೊತೆಗೆ ಮೌಲ್ಯಾಧಾರಿತ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ನಿಂಗೋಜಿ ಶಿಕ್ಷಣ ಸಂಸ್ಥೆಯ ಕಳಕಳಿಯಾಗಿದೆ ಎಂದರು .
ತಾ.ಪಂ. ಮಾಜಿ ಸದಸ್ಯೆ ಲಲಿತಾ ನಿಂಗೋಜಿ ಸ್ಮರಣಾರ್ಥ ಕೊಡಲ್ಪಡುವ “ಕಾಯಕ ರತ್ನ” ಪ್ರಶಸ್ತಿಯನ್ನು ಸ್ವಾವಲಂಬಿ ಜೀವನ ಸಾಗಿಸುವ ರೇಣುಕಾ ಸಂಗನಾಳ ರವರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾದ ಶಿವಶರಣಪ್ಪ ಬಳಿಗಾರ ಮಾತನಾಡಿ ಶಶಿಕಾಂತ ನಿಂಗೋಜಿರವರು ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಸಂಕಷ್ಟದ ಬದುಕನ್ನು ಸಾಗಿಸಿ ಯಶದ ದಾರಿಯನ್ನು ಕಂಡುಕೊಂಡವರಾಗಿದ್ಧಾರೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರದ ಮಹತ್ವವನ್ನು ಸಾಕಾರಗೊಳಿಸಿದವರಾಗಿದ್ದಾರೆ ಎಂದರು.
ಕೊಪ್ಪಳದ ರಾಮಕ್ರಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿರವರು ಸಾನಿಧ್ಯ ವಹಿಸಿ ಮಾತನಾಡುತ್ತಾ ನಿಂಗೋಜಿ ಶಿಕ್ಷಣ ಸಂಸ್ಥೆ ಜ್ಞಾನ ದಾಸೋಹದ ಜೊತೆಗೆ ಅನ್ನ ದಾಸೋಹಕ್ಕೂ ಹೆಸರಾಗಿದೆ . ಅವರಿಗೆ ಪೂರ್ವಜರ ಪರಿ ಶ್ರಮದ ಫಲ ತಟ್ಟಿದೆ ಉತ್ತರೋತ್ತರವಾಗಿ ಅವರ ಶಿಕ್ಷಣ ಕ್ಷೇತ್ರ ಬೆಳೆಯಲಿ ಲಕ್ಷಾಂತರ ಜನರು ಅವರನ್ನು ನೆನೆಯುವ ಕಾಲ ಇತಿಹಾಸದ ಪುಟದಲ್ಲಿ ಸ್ಮರಣೀಯವಾಗಿ ಉಳಿಯಲಿ ಎಂದು ಆಶಿಸಿದರು.
ಮಲ್ಲಪ್ಪ ನಿಂಗೋಜಿ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ನಿ.ಪ್ರಾಚಾರ್ಯರಾದ ಜಿ.ಎಂ. ನಿಂಗೋಜಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಹಿರಿಯರ ಸ್ಮರಣೆಯು ಸಾಧಕರನ್ನು ಗುರುತಿಸುವ ಮೂಲಕ ಪ್ರತಿಷ್ಠಾನ ಹಾಗೂ ನಿಂಗೋಜಿ ಶಿಕ್ಷಣ ಸಂಸ್ಥೆಯ ಮೂಲಕ ನಡೆಯುತ್ತಿರುವುದು ಸದ್ರಢ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದೆನ್ನುತ್ತಾ ಆಂಗ್ಲ ಭಾಷೆಯ ಅನಿವಾರ್ಯತೆ ˌ ಮಕ್ಕಳ ಕಲಿಕಾ ವಿಚಾರದಲ್ಲಿ ಪಾಲಕರ ಜವಬ್ದಾರಿ ಮಹತ್ತರವಾದರೂ ಸಹಿತ ಮಾತ್ರು ಭಾಷೆಯಲ್ಲಿ ಕಲಿಯುವದರಿಂದ ಮಕ್ಕಳ ಸಾಮರ್ಥ್ಯ ನೂರಕ್ಕೆ ನೂರರಷ್ಟು ಹೆಚ್ಚಾಗಲಿದೆ ಎಂದರು.
2024—25 ನೇ ಸಾಲಿನಲ್ಲಿ ಹತ್ತನೆ ತರಗತಿಯಲ್ಲಿ ಹಾಗೂ ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕರಮುಡಿಯ ವಿದ್ಯಾರ್ಥಿಗಳಾದ ರಾಜೇಶ್ವರಿ ಪಾಟೀಲ ˌ ಲಕ್ಷ್ಮೀ ರಾಟಿ ˌ ಮಂಜುನಾಥ ಹೊಂಬಳ ˌ ಕಿರಣ ಹುನಗುಂದ ˌ ಸುಶ್ಮಿತಾ ನಂದಿಕೋಲಮಠ ˌ ಶಶಿಕಾಂತ ಮಾನಶೆಟ್ಟಿರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಎಸ್.ಎ.ನಿಂಗೋಜಿ ಸೆಂಟ್ರಲ್ ಪಬ್ಲಿಕ ಶಾಲೆಯಲ್ಲಿ ಓದಿ ಸಾಧನೆಗೈದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪದಕ ನೀಡಿ ಸನ್ಮಾನ ಮಾಡಲಾಯಿತು.
ಗೋಪಾಲರಾವ್ ಬಿನ್ನಾಳ ˌ ಮುಕಂದರಾವ್ ದೇಸಾಯಿ ˌಡಿ.ಎಲ್ˌ.ಕುಲಕರ್ಣಿ ˌ ವೀರಪ್ಪ ನಿಡಶೇಸಿ ˌ ವೀರಣ್ಣ ವಾಲಿ ˌ ಶ್ಯಾಮೀದಸಾಬ್ ಮುಲ್ಲಾ ˌ ಇಮಾಮ ಗುಳೇದಗುಡ್ಡ ˌಬಸವರಾಜ ಕರಾಟೆ ˌಯಮನೂರಪ್ಫ ಹಾದಿಮನಿ ˌರಾಯಪ್ಪ ಹುಂಡಿ ˌ ನೀಲಸಗೌಡ ಪವಾಡಿಗೌಡರ ˌರವಿಚಂದ್ರ ಕೆಂಚರಡ್ಡಿ ˌ ನಿಂಗೋಜಿ ಶಿಕ್ಷಣ ಹಾಗೂ ಗ್ರಾ.ಅ.ಟ್ರಸ್ಟ ಅಧ್ಯಕ್ಷ ಎಸ್.ಎ.ನಿಂಗೋಜಿˌಡಾˌಪ್ರಕಾಶ ˌಜಾಫರ್ ˌ ಸಂಪತಕುಮಾರ ಆಕಳವಾಡಿˌ ವೀರೇಶ ಹೊನ್ನೂರು ˌನಿಂಗೋಜಿ ಕುಟುಂಬದ ರಾಜಶೇಖರ ˌ ರವಿ ˌಮಂಜುನಾಥˌ ವೀರಣ್ಣ ಇನ್ನು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿದ್ದರುˌ
ಗದುಗಿನ ಪಿ.ಪಿ.ಜಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ!ವ್ಹಿ .ಎ. ನಿಂಗೋಜಿ ಪ್ರಾಸ್ಥಾವಿಕವಾಗಿ ಮಾತನಾಡಿ ಶಿಕ್ಷಣ ಸಂಸ್ದೆ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಲಿಂಗರಾಜ ಬಿಸನಳ್ಳಿ (ತೊಂಡಿಹಾಳ) ಖಾನಸಾಬ ಕಲ್ಲೂರ ರವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಶಿಕ್ಷಕರಾದ ಯಮುನಾ ಹಾಗೂ ಪ್ರಶಾಂತರವರು ನಿರೂಪಿಸಿ ವಂದಿಸಿದರು




