
ಕರುಣಾ ರೂರಲ್ ಡೆವಲಪ್ಮೆಂಟ್ ವೃದ್ಧಾಶ್ರಮದಲ್ಲಿ 8ನೇ ವರ್ಷದ ಹುಟ್ಟುಹಬ್ಬ ಆಚರಣೆ
8th birthday celebration at Karuna Rural Development Old Age Home

ಗಂಗಾವತಿ: ನಗರದ ಕರುಣಾ ರೂರಲ್ ಡೆವಲಪ್ಮೆಂಟ್ ವೃದ್ಧಾಶ್ರಮದಲ್ಲಿ ಫೆಬ್ರವರಿ 12 ರಂದು 8ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹುಟ್ಟುಹಬ್ಬದ ಅಂಗವಾಗಿ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಅನ್ನಸಂತರ್ಪಣೆ ಮಾಡಿ ಸಾಮಾಜಿಕ ಸೇವೆಯ ಮೂಲಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಭಾರತೀಯ ಪ್ರಜಾ ಸೇನೆ (ಅಂಬೇಡ್ಕರ್ ವಾದ) ಮುಖಂಡರಾದ ಹುಲುಗಪ್ಪ ಕೊಜ್ಜಿ ಅವರ ಪುತ್ರ ಪುನೀತ್ ಕೊಜ್ಜಿ ತಮ್ಮ ಹುಟ್ಟುಹಬ್ಬವನ್ನು ವೃದ್ಧರೊಂದಿಗೆ ಆಚರಿಸಿಕೊಂಡು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು.
ಕಾರ್ಯಕ್ರಮವು ಕುಟುಂಬದವರು ಹಾಗೂ ಸಂಘಟನೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮರಿಯಪ್ಪ ಹೊಸಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ನರಸಿಂಹಲು ಹಿರೇ ಜಂತಕಲ್, ತಾಲೂಕು ಉಪಾಧ್ಯಕ್ಷರಾದ ಪಂಪಾಪತಿ ಹೊಸಳ್ಳಿ ಸೇರಿದಂತೆ ನರಸಿಂಹಲು ಚಿಂತಲಕುಂಟ, ಭರತ್, ಈರಣ್ಣ, ಸೋಮ, ಹನುಮಂತ, ಕಿಟ್ಟಿ, ಗಾಳೆಪ್ಪ ಹಾಗೂ ಇತರ ಕುಟುಂಬ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಾಜ ಸೇವೆಯ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ ಯುವಕರು ಸಮಾಜಕ್ಕೆ ಮಾದರಿಯಾಗಬೇಕೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.




