
ಕಂದಾಯ ಇಲಾಖೆಯ ಡಿಜಿಟಲ್ ದಾಖಲೆಗಳನ್ನು ರೈತರಿಗೆ ವಿತರಣೆ ಮಾಡಿದ ಶಾಸಕ ಎಮ್ ಆರ್ ಮಂಜುನಾಥ್.

MLA M R Manjunath distributed digital documents of the Revenue Department to farmers.
ವರದಿ: ಬಂಗಾರಪ್ಪ .ಸಿ.
ಹನೂರು:ರಾಜ್ಯಾದ್ಯಂತ ಹಲವಾರು ವರ್ಷಗಳಿಂದ ಬಗೆಹರಿಯದ ನೆನೆಗುದ್ದಿಗೆ ಬಿದ್ದಿದ್ದ ಹಲವಾರು
ಸಮಸ್ಯೆಗಳನ್ನು ವಿಶೇಷವಾಗಿ ರಾಜ್ಯದ ಜನಕ್ಕೆ, ಅರ್ಹ ಫಲಾನುಭವಿಗಳಿಗೆ ಸರ್ಕಾರ ಹಾಗೂ ಕಂದಾಯ ಇಲಾಖೆ ಡಿಜಿಟಲ್ ಮೂಲಕ ದಾಖಲೆ ನೀಡಲಾಗುತ್ತಿದೆ ಎಂದು ಶಾಸಕ ಆರ್.ಆರ್ ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಸಭಾ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ/ಪಿಂಚಣಿ ಅದಾಲತ್ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಯ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ರೈತರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆಧಾರವಾಗವಂತೆ ಮನೆ, ಜಮೀನು ಹಕ್ಕು ಪತ್ರ ಸೇರಿದಂತೆ ಯೋಜನೆಯ ಆದೇಶಗಳನ್ನು ವಿತರಣೆ ಮಾಡಲಾಗುತ್ತಿದೆ. ಜಮೀನು ಪೋಡಿಗೆ ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ದಿಟ್ಟ ನಿರ್ಧಾರ ಕೈಗೊಂಡು ಅರ್ಹರಿಗೆ ಹಕ್ಕು ದಕ್ಕಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯವನ್ನು ಕಂದಾಯ ಇಲಾಖೆ ಮನೆ ಬಾಗಿಲಿಗೆ ಯೋಜನೆಯನ್ನು ಒದಗಿಸುವ ಮಾಡುತ್ತಿರುವುದು ಸ್ವಾಗತರ್ಹ ಎಂದರು. ಮಾಡುತ್ತಿರುವುದು ಸ್ವಾಗ ಕಾರ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ,ಕೊಳ್ಳೇಗಾಲ ಉಪ ವಿಬಾಗದ ಕಛೇರಿಯ ಉಪತಹಸೀಲ್ದಾರ್ ರವಿ, ಸರ್ವೇ ಅಧೀಕ್ಷಕರಾದ ಕುಮಾರಸ್ವಾಮಿ, ಲೊಕ್ಕನಹಳ್ಳಿ ರಾಜಸ್ವನಿರಿಕ್ಷಕರಾದ ಮಹಾದೇವಸ್ವಾಮಿ, ಕಂದಯ ಆಡಳಿತ ಅಧಿಕಾರಿಗಳಾದ ಮಾರುತಿ, ವಿದ್ಯಾಶ್ರೀ,, ಶಿವಕುಮಾರ್, ನಂಜುಂಡ, ವಿಷಯ ನಿರ್ವಾಹಕರಾದ ಮಹೇಶ್ವರಿ ಸಿಬ್ಬಂದಿಗಳಾದ ನಿಂಗರಾಜು, ಕೃಷ್ಣ ಮೂರ್ತಿ, ಸಿದ್ದರಾಜು, ಶಿವಚಂದ್ರ, ಸೇರಿದಂತೆ ಇನ್ನಿತರರು ಹಾಜರಿದ್ದರು.




