ತಿಪಟೂರು. ಇಂದು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸರ್ಕಾರ ನಿಡುವ 2024 -25 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ತುಮಕೂರು ಜಿಲ್ಲಾಧಿಕಾರಿಗಳಾದ ಮಾನ್ಯ ಶುಭಕಲ್ಯಾಣ್ ರವರಿಂದ ತಾಲೂಕಿನ ಕರ್ತವ್ಯ ನಿಷ್ಠೆ ಹೆಮ್ಮೆಯ ಪ್ರಾಮಾಣಿಕ ಅಧಿಕಾರಿಗಳಾದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ರವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ರವರಿಗೆ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು ವರದಿ ಮಂಜು ಗುರುಗದಹಳ್ಳಿ
ಮಹಾತ್ಮ ಗಾಂಧಿ ನರೇಗಾ ಯೋಜನೆ ಯತಾಸ್ಥಿತಿಗೆ ಮಹಿಳಾ ಕಾಂಗ್ರೆಸ್ ಒತ್ತಾಯ : ಜ್ಯೋತಿ ಗೊಂಡಬಾಳ
Mahila Congress demands status quo of Mahatma Gandhi NREGA scheme: Jyoti Gondabaal
ಕೊಪ್ಪಳ: ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳು, ಧ್ವೇಷ ಮನಸ್ಥಿತಿಯಿಂದ ನರೇಗಾ ಯೋಜನೆಯನ್ನು ಬದಲಾಯಿಸಿ ಮಹಾತ್ಮ ಗಾಂಧಿ ಅವರ ಹೆಸರು ತೆಗೆದಿದ್ದನ್ನು ದೇಶವೇ ವಿರೋಧಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಕೋರಿದರು. ಅವರು ನಗರದ ಗಾಂಧಿ ವೃತ್ತದಲ್ಲಿ ಜಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆ ಯಥಾಸ್ಥಿತಿ ಉಳಿಸಲು ಆಗ್ರಹಿಸಿ ಪ್ರತಿಭಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕೇಂದ್ರದ ಗೋಡ್ಸೆ ಮತ್ತು ಮನುಸ್ಮೃತಿ ಪಾಲಕರು ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದು, ಯೋಜನೆಯ ರೂಪ ಬದಲಿಸಿ, ರಾಜ್ಯ ಸರಕಾರಗಳಿಗೆ ಅನ್ಯಾಯ ಮಾಡಲು ಹೊರಟಿದೆ, ಕೇಂದ್ರ ಬಿಜೆಪಿ ಸರಕಾರದ ದುಷ್ಟ ಮನಸ್ಥಿತಿಯನ್ನು ಖಂಡಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಯಥಾಸ್ಥಿತಿ ಉಳಿಸಲು ಆಗ್ರಹಿಸಿ ಮಹಾತ್ಮ ಗಾಂಧೀಜಿ ವೃತ್ತದವರೆಗೆ ಕಪುö್ಪ ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೇವೆ, ಕೂಡಲೇ ಕೇಂದ್ರ ಎಚ್ಚೆತ್ತುಕೊಳ್ಳದಿದ್ದರೆ ಇದನ್ನು ಜನಾಂದೋಲನವಾಗಿದೆ ರೂಪಿಸಲಾಗುತ್ತದೆ ಎಂದರು. ಬಿಜೆಪಿ ನಾಯಕರು ಅಜ್ಞಾನದಿಂದ ಮಾತನಾಡುತ್ತಿದ್ದಾರೆ, ಇಲ್ಲಿನ ಮಾಜಿ ಸಚಿವ ಹಾಲಪ್ಪಾಚಾರ ಅವರು ಹೊಸ ನರೇಗಾ ಕುರಿತು ಕಾರ್ಯಾಗಾರ ಮಾಡುತ್ತೇವೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡಲು ನರೇಗಾ ಯೋಜನೆ ಮಾಡಿದೆ ಎನ್ನುತ್ತಿದ್ದಾರೆ, ತಾವೂ ಸಹ ಈ ಜಿಲ್ಲೆಯ ಶಾಸಕರಾಗಿ ಕ್ಯಾಬಿನೆಟ್ ಸಚಿವರಾಗಿ ಕೆಲಸ ಮಾಡಿದಾಗ ನರೇಗಾದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಎಂದು ಜನರಿಗೆ ತಿಳಿಸಿ, ಇನ್ನು ಜನರಿಗೆ ಮೋಸ ಮಾಡುವ ಯೋಜನೆಗಳ ಬಗ್ಗೆ ಮತ್ರ ತಾವು ಕಾರ್ಯಾಗಾರ ಮಾಡಲು ಸಾಧ್ಯ ಎಂದು ಕುಟುಕಿದರು ಇನ್ನು ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ಅವರಿಗೆ ಮಾಹಿತಿಯ ಕೊರತೆ ಇದೆ, ಅವರು ಬೇರೆಯವರು ಬರೆದುಕೊಟ್ಟಿದ್ದನ್ನು ಪತ್ರಿಕೆಗಳಿಗೆ ಕಳಿಸುವ ಮೊದಲು ಸ್ವಲ್ಪ ಓದಿ ತಿಳಿದುಕೊಂಡು ಮಾಹಿತಿ ಕೊಡುವದು ಉತ್ತಮ, ಇಲ್ಲವಾದರೆ ಸುಳ್ಳನ್ನೇ ಹತ್ತು ಬಾರಿ ಹೇಳಿ ಸತ್ಯ ಮಾಡಲು ಹೇಳಿದ ನಿಮ್ಮ ಮಾಜಿ ನಾಯಕ ಈಶ್ವರಪ್ಪರ ಮಾತು ಕೇಳುತ್ತಿದ್ದೀರಿ ಎಂದು ಭಾವಿಸಬೇಕಾಗುತ್ತದೆ. ೧೯೮೯ ರಲ್ಲಿ ೭ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಜವಾಹರ ರೋಜಗಾರ ಯೋಜನೆ ಜಾರಿ ಮಾಡಲಾಗಿತ್ತು ಅದು ಐದು ವರ್ಷಗಳ ಒಂದು ಯೋಜನೆ ಮತ್ತು ಬಡವರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿತ್ತು, ಆದರೆ ೨೦೦೫ರಲ್ಲಿ ಆಗಿದ್ದು ಉದ್ಯೋಗ ಭದ್ರತೆಯ ಕಾನೂನು ನಂತರ ಅದನ್ನು ೨೦೦೯ರಲ್ಲಿ ಮಹಾತ್ಮ ಗಾಂಧಿ ಅವರ ೧೪೦ನೇ ಜನ್ಮ ದಿನದ ಸ್ಮರಣೆಗೆ ಮಹಾತ್ಮ ಗಾಂಧಿ ನರೇಗಾ ಎಂದು ಮರುನಾಮಕರಣ ಮಾಡಲಾಗಿದೆ. ನೀವು ಸುಳ್ಳು ಹೇಳಿದ ಹಾಗೆ ಇತಿಹಾಸ ಸುಳ್ಳು ಹೇಳಲ್ಲ, ಜನರಿಗೆ ಎಲ್ಲಾ ಅರ್ಥವಾಗುತ್ತದೆ ಎಂದರು. ಇನ್ನು ಈ ಯೋಜನೆಯ ದುಡಿಯುವ ದಿನಗಳನ್ನು ಹೆಚ್ಚು ಮಾಡಿದೆ ಆದರೆ ಅದು ಆರ್.ಎಸ್.ಎಸ್. ಮನವೊಲಿಸುವ ಉದ್ದೇಶ ಹಾಗೂ ರಾಜ್ಯ ಸರಕಾರಗಳಿಗೆ ವಿಶೇಷವಾಗಿ ಬಿಜೆಪಿಯೇತರ ಸರಕಾರಗಳಿಗೆ ಅನ್ಯಾಯ ಮಾಡುವ ಗುರಿಯೊಂದಿಗೆ ಬದಲಾವಣೆ ಮಾಡಲಾಗಿದೆ, ಕೇಂದ್ರವೇ ೯೦ ರಷ್ಟು ಅನುದಾನ ಕೊಡಬೇಕಿದ್ದ ಯೋಜನೆಯನ್ನು ಈಗ ೪೦ ರಷ್ಟು ರಾಜ್ಯ ಸರಕಾರ ಕೊಡುವ ಹಾಗೆ ಮಾಡಿದೆ, ಈಗಾಗಲೇ ಜಿಎಸ್‌ಟಿ ಮೂಲಕ ಸುಲಿಗೆ ಮಾಡುತ್ತಿರುವ ಕೇಂದ್ರ ಇದರ ಭಾರ ಹಾಕಿ ಯೋಜನೆ ಸಫಲವಾಗದಂತೆ ನೋಡಿಕೊಳ್ಳುವ ಗುರಿ ಹೊಂದಿದೆ ಎಂದಿದ್ದಾರೆ. ಇನ್ನು ಮಹಾತ್ಮ ಗಾಂಧಿ ಹೆಸರು ತೆಗೆದು ವಿಬಿ ಜಿ ರಾಮ ಜಿ ಎಂದಿದ್ದಾರೆ, ಹೊಸ ಹೆಸರಲ್ಲಿ ಇರುವದು ಯೋಜನೆಯ ಸಂಕ್ಷಿಪ್ತ ರೂಪವೇ ಹೊರತು ಶ್ರೀರಾಮನ ಹೆಸರಲ್ಲ, ಭಕ್ತ ಮಂಡಳಿ ಮೂರ್ಖರಾಗುವದು ಬೇಡ, ಅವರೂ ಸಹ ಈ ದೇಶದ ಮಾನವ ಸಂಪತ್ತು ಅದಕ್ಕೆ ಆಪತ್ತು ಬಾರದಿರಲಿ ಎಂದು ಎಚ್ಚರಿಸಿದ್ದಾರೆ. ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, ಮಹಾತ್ಮ ಗಾಂಧಿ ಅವರು ಕಂಡ ಕನಸು ನನಸು ಮಾಡಲು ಗ್ರಾಮೀಣ ಜನರ ಜೀವನ ಸುಲಭವಾಗಿರಬೇಕು ಅದಕ್ಕಗಿ ನರೇಗಾ ಯೋಜನೆ ಮೊದಲಿನ ರೀತಿಯಲ್ಲಿಯೇ ಇರಬೇಕು. ಹೊಸ ಯೋಜನೆಯಲ್ಲಿರುವ ರಾಮ ವಾಸ್ತವವಾಗಿ ಶ್ರೀರಾಮನಲ್ಲ ಅದು
ನಾಥು ರಾಮ ಗೋಡ್ಸೆ ಆಗಿದೆ. ಮೋಶಾ ಅವರು ಅಧಿಕಾರ ಕೇಂದ್ರೀಕರಿಸುವ ಬಹುದೊಡ್ಡ ಹಿಟ್ಲರ್‌ಗಳಾಗಿದ್ದಾರೆ. ಗ್ರಾಮ ಮಟ್ಟದ ಅಧಿಕಾರ ಕಿತ್ತುಕೊಂಡು ತಾವು ನಿರ್ದೇಶನ ಮಾಡಿದಂತೆ ಕೆಲಸ ಆಗಬೇಕು, ಅಲ್ಲಿ ಗುತ್ತಿಗೆದಾರರಿರಬೇಕು ಮುಂದೆ ಅದರ ಇಡೀ ಗುತ್ತಿಗೆ ಆದಾನಿ ಅಂಬಾನಿ ಅವರಿಗೆ ದಕ್ಕಬೇಕು ಎಂಬುವದಾಗಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಕಿಶೋರಿ ಬೂದನೂರ, ಆಯೆ಼ಷಾ ಖಾನಂ, ಮಂಜುನಾಥ ಜಿ. ಗೊಂಡಬಾಳ, ಯಾದವ ರವಿ ಕುರಗೋಡ, ಹೊನ್ನೂರಸಾಬ ಭೈರಾಪೂರ, ಸಲೀಂ ಅಳವಂಡಿ, ಪದ್ಮಾವತಿ ಕಂಬಳಿ, ಸುಮಂಗಲಾ ನಾಯಕ, ಮಲ್ಲಿಕಾರ್ಜುನ ಪೂಜಾರ, ಗಂಗಮ್ಮ ಚಿಕೇನಕೊಪ್ಪ, ಯಶೋಧಾ ಮರಡಿ, ಚನ್ನಮ್ಮ, ಶಿಲ್ಪಾ ಗುಡ್ಲಾನೂರ, ಸಾವಿತ್ರಿ ಗೊಲ್ಲರ, ಶರಣಮ್ಮ ಪೂಜಾರ, ಅಂಜಲಿ, ರೇಖಾ, ಶ್ರೀನಿವಾಸ ಪಂಡಿತ, ಸೈಯದ್ ನಾಸಿರುದ್ದೀನ್, ಮೌನೇಶ ವಡ್ಡಟ್ಟಿ, ಹನುಮೇಶ ಬೆಣ್ಣಿ ಅನೇಕರಿದ್ದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಬರೆದ ಮನವಿಯನ್ನು ಗ್ರೇಡ್ ೨ ತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ ಅವರು ಮನವಿ ಸ್ವೀಕರಿಸಿದರ
ಕೊಪ್ಪಳ ಜನವರಿ 28, (ಕರ್ನಾಟಕ ವಾರ್ತೆ): ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ(20 ಅಂಶಗಳು ಸೇರಿದಂತೆ) 2025-26ನೇ ಸಾಲಿನ 3ನೇ ತ್ರೆöÊಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯನ್ನು ಫೆಬ್ರವರಿ 2 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ವಹಿಸಿಕೊಳ್ಳುವರು. ಆದ್ದರಿಂದ ಸಂಬAಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಖುದ್ದಾಗಿ ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಜನವರಿ 28 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ (Koppal Fruits, Honey & Mushroom Festival) ವನ್ನು ಆಯೋಜಿಸಲಾಗುತ್ತಿದ್ದು, ಮಳಿಗೆ ಕಾಯ್ದಿರಿಸಲು ಜಿಲ್ಲೆಯ ಆಸಕ್ತ ಬೆಳೆಗಾರರು ತಮ್ಮ ಹೆಸರನ್ನು ನೋಂದಾಯಿಸುವAತೆ ಕೊಪ್ಪಳ ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಅವರು ತಿಳಿಸಿದ್ದಾರೆ. ಗ್ರಾಹಕರಿಗೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಜೇನು, ಅಣಬೆ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಮತ್ತು ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ “ಶಿವರಾತ್ರಿ” ಹಬ್ಬದ ಪ್ರಯುಕ್ತ ಕೊಪ್ಪಳದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಫೆಬ್ರವರಿ 12 ರಿಂದ 16ರ ವರೆಗೆ 5 ದಿನಗಳ ಕಾಲ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸುವ ಜಿಲ್ಲೆಯ ಆಸಕ್ತ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಅಂಜೂರು, ಪೇರಲ ಮತ್ತು ಕರಬೂಜ ಬೆಳೆಗಾರರು ಮುಂಗಡವಾಗಿ ಮಾರಾಟ ಮಳಿಗೆಗಳನ್ನು ಕಾಯ್ದಿರಿಸಲು ತಮ್ಮ ಹೆಸರನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಹತ್ತಿರ ಹೆಸರು ನೋದಾಯಿಸಬೇಕಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ರೈತರು ತಮ್ಮ ಪಹಣಿ ಪ್ರತಿಯೊಂದಿಗೆ, ತಮ್ಮ ಹೆಸರು, ವಿಳಾಸ, ಸರ್ವೆ ನಂಬರ್, ಬೆಳೆ, ತಳಿಗಳು ಹಾಗೂ ವಿಸ್ತೀರ್ಣ ಮುಂತಾದ ವಿವರಗಳೊಂದಿಗೆ ಸಂಬAಧಿಸಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನೀಡಬೇಕು. ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲು ಹಾಗೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ರೈತರು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ (ಜಿಪಂ)ಯ ಕೇಂದ್ರ ಸ್ಥಾನಿಕ ಸಹಾಯಕರು ಮೊ.ಸಂ: 8095359179, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೊಪ್ಪಳ ಮೊ.ಸಂ: 9611888607, ಗಂಗಾವತಿ ಮೊ.ಸಂ: 9480257282, ಕುಷ್ಟಗಿ ಮೊ.ಸಂ: 9743518608 ಹಾಗೂ ಯಲಬುರ್ಗಾ ಮೊ.ಸಂ: 9945644338, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ಪ್ರಕಟಣೆ ತಿಳಿಸಿದೆ.
Doctorate in Agricultural Studies to Hussain B of Anegondi
ಗಂಗಾವತಿ: ತಾಲೂಕಿನ ಆನೆಗೊಂದಿಯ ಹಿರಿಯ ಪತ್ರಕರ್ತರಾದ ಮಹಮ್ಮದ್ ಜಾಕಿರ್ ಹುಸೇನ್ ಖಾದ್ರಿ ಇವರ ಮಗಳು ಹುಸೇನ್ ಬಿ ಇವರು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಅನುವಂಶಿಕತೆ ಮತ್ತು ಸಸ್ಯ ತಳಿಶಾಸ್ತ್ರ ವಿಭಾಗದಲ್ಲಿ ಜೋಳದ ವಿಭಿನ್ನ ಕೋಶದ್ರವಗಳ ವಿಷಯದ ಮೇಲೆ ಸಂಶೋಧನಾ ಪ್ರಬAಧ ಮಂಡಿಸಿ (ಪಿಎಚ್‌ಡಿ)ಡಾಕ್ಟರೇಟ್ ಪಡೆದಿದ್ದಾರೆ. ಮಾರ್ಗದರ್ಶಕರಾಗಿ ಡಾ. ಬಸವರಾಜ ಡಿ ಬಿರಾದಾರ ಕಾರ್ಯ ಮಾಡಿದ್ದಾರೆ. ಸಾಧನೆ ಮಾಡಿದ ಹುಸೇನ್ ಬಿ ಅವರನ್ನು ಆನೆಗೊಂದಿ ಗ್ರಾಮಸ್ಥರು ಹಾಗೂ ಗಂಗಾವತಿಯ ಪತ್ರಕರ್ತರು ಅಭಿನಂದಿಸಿ ಶುಭ ಕೋರಿದ್ದಾರೆ.
ಬೆಂಗಳೂರು, ಜ.28: ಭಾರತೀಯ ಚರ್ಮರೋಗ ತಜ್ಞರ ಸಂಘಟನೆಯಾದ ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್, ವೆನಿರಿಯಾಲಜಿಸ್ಟ್ಸ್ ಅಂಡ್ ಲೆಪ್ರಾಲಜಿಸ್ಟ್ಸ್ ಯಿಂದ ರಾಷ್ಟ್ರೀಯ ಮೆಗಾ ಆಂಟಿ–ಕ್ವಾಕರಿ ಚರ್ಮ ಆರೋಗ್ಯ ಶಿಬಿರವನ್ನು ದೇವನಹಳ್ಳಿಯ ಆಕಾಶ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರದಲ್ಲಿ 1,000ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚರ್ಮರೋಗ ತಪಾಸಣೆ, ಉಚಿತ ಔಷಧೋಪಚಾರ ಮತ್ತು ಆಹಾರ ಒದಗಿಸಲಾಯಿತು. ನಕಲಿ ವೈದ್ಯರು (ಕ್ವಾಕರಿ) ಹಾಗೂ ಅರ್ಹತೆಯಿಲ್ಲದ ವ್ಯಕ್ತಿಗಳಿಂದ ನಡೆಯುವ ಅಪಾಯಕಾರಿ ಚಿಕಿತ್ಸೆಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.
ಡಾ. ಆರ್. ರಘುನಾಥ ರೆಡ್ಡಿ ಮಾತನಾಡಿ, “ಕ್ವಾಕರಿ ಶಾಶ್ವತ ಚರ್ಮ ಹಾನಿ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ಹೇಳಿದರು.
ಡಾ. ಬ್ರಿಜೇಶ್ ಕೆ ಮಾತನಾಡಿ, ಅವರು ವೈದ್ಯರ ಸಲಹೆಯಿಲ್ಲದೆ ಬಳಸುವ ಕ್ರೀಮ್ಗಳ ಅಪಾಯಗಳ ಬಗ್ಗೆ ಎಚ್ಚರಿಸಿದರು.
ಡಾ. ರಾಜೇತಾ ಧಾಮಿಸೆಟ್ಟಿ ಮಾತನಾಡಿ, ಅವರು ಸಾರ್ವಜನಿಕ ಜಾಗೃತಿಯೇ ಕ್ವಾಕರಿಯ ವಿರುದ್ಧದ ಶಕ್ತಿಶಾಲಿ ಆಯುಧ ಎಂದರು.
ಡಾ. ಅಮರೇಂದ್ರ ಪಾಂಡೆ ಮಾತನಾಡಿ, ಸ್ಟೆರಾಯ್ಡ್ ಮಿಶ್ರಿತ ಕ್ರೀಮ್ಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ಡಾ. ಅಕ್ಷಯ ಸಮಗಾನಿ, ಅರ್ಹ ಚರ್ಮರೋಗ ತಜ್ಞರಿಂದಲೇ ಚಿಕಿತ್ಸೆ ಪಡೆಯಬೇಕೆಂದು ಜನರಿಗೆ ಮನವಿ ಮಾಡಿದರು. ತಜ್ಞರು ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.
ಈ ಶಿಬಿರವನ್ನು ಐಎಡಿವಿಎಲ್ ಆಂಟಿ–ಕ್ವಾಕರಿ ಸಮಿತಿ, ಡರ್ಮಾಕಾನ್ 2026 ಮತ್ತು ಆಕಾಶ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಯಿತು.
ಬೆಂಗಳೂರಿನಲ್ಲಿ ಜ. 29 ರಿಂದ ಚರ್ಮರೋಗ, ಲೈಂಗಿಕ ರೋಗ ತಜ್ಞರ ಸಮ್ಮೇಳನ “ಡರ್ಮಕಾನ್ – 2026: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟನೆ
Dermatology and Venereology Conference “Dermacon – 2026” to be held in Bengaluru from Jan. 29: Minister Dr. Sharan Prakash Patil to inaugurate
ಬೆಂಗಳೂರು: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಠರೋಗ ತಜ್ಞರ ಸಂಘದ 54ನೇ ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್ – 2026 ಜ. 29 ರಿಂದ ಫೆಬ್ರವರಿ 1 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ಅಂಡ್ ಸ್ಪಾ ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ವಿಚಾರ, ವಿನಿಯಮ ನಡೆಯಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ. ಭಗವಾನ್ ಬಿ.ಸಿ, ಐಎಡಿವಿಎಲ್ ಅಧ್ಯಕ್ಷ ಡಾ. ರಾಜೀವ್ ಶರ್ಮಾ, ಉಪಾಧ್ಯಕ್ಷ ಡಾ. ವಿನಯ್ ಸಿಂಗ್, ಗೌರವ ಕಾರ್ಯದರ್ಶಿ ಡಾ. ಭೂಮೇಶ್ ಕುಮಾರ್, ಸಂಘಟನಾ ಅಧ್ಯಕ್ಷ ಡಾ. ಎಸ್. ಸಚ್ಚಿದಾನಂದ್, ಸಂಘಟನಾ ಕಾರ್ಯದರ್ಶಿ ಡಾ. ಆರ್. ರಘುನಾಥ್ ರೆಡ್ಡಿ, ವೈಜ್ಞಾನಿಕ ವಿಭಾಗದ ಅಧ್ಯಕ್ಷ ಡಾ. ಬಿ.ಎಸ್. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿರಲಿದ್ದಾರೆ. “ಡರ್ಮಕಾನ್ – 2026 ಒಂದು ಪ್ರತಿಷ್ಠಿತ ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಮಾವೇಶವಾಗಿದ್ದು, ದೇಶ, ವಿದೇಶಗಳ ಪ್ರಮುಖ ಚರ್ಮರೋಗ ತಜ್ಞರು, ಸಂಶೋಧಕರು, ಶೈಕ್ಷಣಿಕ ತಜ್ಞರು ಮತ್ತು ಕೈಗಾರಿಕಾ ಪರಿಣಿತರನ್ನು ಒಟ್ಟುಗೂಡಿಸಲಿದೆ. ಈ ಸಮ್ಮೇಳನದಲ್ಲಿ 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಇದು ಈ ಪ್ರದೇಶದ ಅತಿದೊಡ್ಡ ಚರ್ಮರೋಗ ಸಮ್ಮೇಳನಗಳಲ್ಲಿ ಒಂದಾಗಿದೆ. “ಚರ್ಮದ ಶಕ್ತೀಕರಣ: ವಿಜ್ಞಾನ, ಅನ್ವಯಿಕೆ, ಸೃಜನಶೀಲತೆ ಮತ್ತು ಒಳಗೊಳ್ಳುವಿಕೆ” ಎಂಬುದು ಸಮಾವೇಶದ ವಿಷಯವಾಗಿದ್ದು, ವೈಜ್ಞಾನಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಮಸ್ಯೆ ಇರುವ ಚರ್ಮ ಆರೈಕೆಯನ್ನು ಮುಂದುವರಿಸುವಲ್ಲಿ ಚರ್ಮರೋಗ ಶಾಸ್ತ್ರದ ಬದಲಾಗುತ್ತಿರುವ ಪಾತ್ರವನ್ನು ಸಮಾವೇಶ ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮದಲ್ಲಿ ಚರ್ಮರೋಗ ಶಾಸ್ತ್ರ, ಲೈಂಗಿಕ ರೋಗ ಶಾಸ್ತ್ರ ಮತ್ತು ಕುಷ್ಠರೋಗ ಶಾಸ್ತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಅಭಿವೃದ್ಧಿಗಳು ಹಾಗೂ ಉತ್ತಮ ಚಿಕಿತ್ಸಾ ಕ್ರಮಗಳನ್ನು ಪ್ರದರ್ಶಿಸುವ ಸಮಗ್ರ ವೈಜ್ಞಾನಿಕ ಅಧಿವೇಶನಗಳು, ಗುಂಪು ಚರ್ಚೆಗಳು, ಕಾರ್ಯಾಗಾರಗಳು ನಡೆಯಲಿವೆ. “ಡರ್ಮಕಾನ್ – 2026 ಬೆಂಗಳೂರಿನ ಪರಿಣಿತ ಚರ್ಮರೋಗ ತಜ್ಞರ ತಂಡ ಆಯೋಜಿಸುತ್ತಿದೆ. ವೈದ್ಯಕೀಯ ಶಿಕ್ಷಣ ಮತ್ತು ವೈಜ್ಞಾನಿಕ ಅನ್ವೇಷಣೆಯಲ್ಲಿ ಪ್ರಮುಖ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಈ ಸಮ್ಮೇಳನವು ಚರ್ಮ ಆರೈಕೆ, ಕೂದಲು ಆರೈಕೆ ಹಾಗೂ ಸೌಂದರ್ಯ ಆರೈಕೆಯನ್ನು ಒದಗಿಸುವಲ್ಲಿ ಚರ್ಮರೋಗ ತಜ್ಞರ ಪಾತ್ರದ ಮೇಲೆ ಗಮನಹರಿಸುತ್ತದೆ. ಚರ್ಮರೋಗ ತಜ್ಞರು, ನೈಜ ಕೂದಲು ತಜ್ಞರು ಹಾಗೂ ನೈಜ ಸೌಂದರ್ಯ ತಜ್ಞರ ಪಾತ್ರದ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತದೆ.
ವಿವೇಕದೀಪ್ತಿ- ದಕ್ಷಿಣಾಸ್ಯದರ್ಶಿನೀ ಸಮಾವೇಶಕ್ಕೆ ಜ. 29 ರಂದು ಇಸ್ರೋ ಮಾಜಿ ಮುಖ್ಯಸ್ಥ ಡಾ|| ಎಸ್. ಸೋಮನಾಥ್ ಚಾಲನೆ
ಜ. 31 ರಂದು ಶೃಂಗೇರಿ ಶ್ರೀಗಳಿಂದ ಆಶೀರ್ಚನ
Former ISRO chief Dr. S. Somnath to inaugurate Vivekadeepti-Dakshinasyadarshini conference on Jan. 29
ಬೆಂಗಳೂರು,ಜ.27: ಆಧುನಿಕ ವಿಜ್ಞಾನವನ್ನು ಆಧರಿಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ತಂತ್ರಜ್ಞಾನ ಮುಂತಾದ ಪ್ರಯೋಗಗಳ ಮೂಲಕ ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿದ ವಿಚಾರಗಳನ್ನು ಯುವ ಸಮೂಹಕ್ಕೆ ಮನಮುಟ್ಟುವಂತೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವೇದಾಂತ ಭಾರತಿ ಹಾಗೂ ಪರಮ್ ಫೌಂಡೇಶನ್ ನಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಜ.29 ರಿಂದ ಫೆ. 1ರ ವರೆಗೆ ರಾಷ್ಟ್ರಮಟ್ಟದ ಬೃಹತ್ “ವಿವೇಕ ದೀಪ್ತಿ” ಸಮಾವೇಶ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಾಂತ ಭಾರತಿ ಟ್ರಸ್ಟಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ, ಈ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ಇಂದಿನ ಯುವಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ‘ದಕ್ಷಿಣಾಸ್ಯದರ್ಶಿನೀ’ ಎನ್ನುವ ಪ್ರದರ್ಶನ ಏರ್ಪಡಿಸಲಾಗಿದೆ. ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನ ಇದಾಗಿದೆ. ಈ ಎಲ್ಲ ಪ್ರಯೋಗಗಳನ್ನು ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಸ್ತುತಪಡಿಸಲಿದ್ದಾರೆ ಎಂದರು. ಇದಕ್ಕೆ ಪೂರಕವಾಗಿ ವೇದಾಂತವನ್ನು ಅಭ್ಯಾಸ ಮಾಡಿದ ಸಂಸ್ಕೃತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ವಾಂಸರು ಆಯಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಅಂಶಗಳ ವಿವರಣೆ ನೀಡಲಿದ್ದಾರೆ. ಬೇರೆ ಬೇರೆ ಕಾಲೇಜು ಹಾಗೂ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಅನಾವರಣಗೊಳ್ಳಲಿವೆ. ಪ್ರತಿದಿನ ಬೆಳಿಗ್ಗೆ 10ಗಂಟೆಯಿಂದ ಸಂಜೆ 7.30ರವರೆಗೆ ಶಾಲಾಕಾಲೇಜಿನ ವಿದ್ಯಾರ್ಥಿಗಳು, ಯುವ ಸಮೂಹ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಜ. 31 ರಂದು ಅರಮನೆ ಮೈದಾನ ಕೃಷ್ಣವಿಹಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಶೃಂಗೇರಿ ಶಾರದಾಪೀಠದ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ ಎಂದರು. ಜ.29 ರಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿ.ವಿ.ಯ ಕುಲಪತಿ ಡಾ|| ಎಸ್. ಸೋಮನಾಥ್ ದಕ್ಷಿಣಾಸ್ಯದರ್ಶಿನಿಯ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಸಿದ್ಧ ಇತಿಹಾಸ ತಜ್ಞ ಡಾ|| ವಿಕ್ರಮ್ ಸಂಪತ್ ಭಾಗವಹಿಸಲಿದ್ದಾರೆ. ಫೆ.1 ರ ಸಮಾರೋಪ ಸಮಾರಂಭದಲ್ಲಿ ಡಾ|| ಎಸ್. ಸೋಮನಾಥ್ ಹಾಗೂ ಡಿ.ಆರ್.ಡಿ.ಓ. ಮಾಜಿ ನಿರ್ದೇಶಕರಾದ ಪ್ರದ್ಮಶ್ರೀ ಪುರಸ್ಕೃತ ಪ್ರಹ್ಲಾದ್ ರಾವ್ ಭಾಗವಹಿಸಲಿದ್ದಾರೆ. ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು. ಪ್ರದರ್ಶನ ದರ್ಶಿನಿ ಮುಖ್ಯಸ್ಥ ಹಾಗೂ ಕೃತಕ ಬುದ್ದಿಮತ್ತೆ ತಂತ್ರಜ್ಞ ಡಾ. ಅಶೂತೋಶ್ ಸಿಂಹ ಮಾತನಾಡಿ, ಈ ನವೀನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಾಂತದ ‘ಮಾಯೆ’, ‘ಚೈತನ್ಯ’ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ, ಭ್ರಮೆ ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು ಸಿದ್ಧಪಡಿಸಲಿದ್ದಾರೆ ಎಂದರು. ಟ್ರಸ್ಟಿ ಗೋಪಾಲ ಕೃಷ್ಣ ಮಾತನಾಡಿ. ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿರುವ ಸಾರ್ವಕಾಲಿಕ ವಿಚಾರಗಳನ್ನು ಆಧರಿಸಿ ಯುವಜನಾಂಗದ ಅಂತಃಕರಣದಲ್ಲಿ ಸತ್ಯಾಸತ್ಯತೆಯ ವಿವೇಚನೆಯನ್ನು ಮೂಡಿಸಿ, ಜೀವನವನ್ನು ಸುಗಮವಾಗಿ ಸಾಗಿಸುವ ಮಾರ್ಗವನ್ನು ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದರು. ಟ್ರಸ್ಟಿ ಎಚ್.ಎಲ್.ಎನ್ ಸಿಂಹ ಮಾತನಾಡಿ, ದಕ್ಷಿಣಾಮೂರ್ತಿ ಅಷ್ಟಕದ ಪಠಣ ಹಾಗೂ ಚಿಂತನೆಯು ಯುವಮನಸ್ಸುಗಳಲ್ಲಿ ಮೂಡುವ ಗೊಂದಲಗಳನ್ನು ನಿವಾರಿಸಿ, ವಿವೇಕವನ್ನು ಜಾಗೃತಗೊಳಿಸಿ, ವ್ಯಕ್ತಿತ್ವವನ್ನು ಉನ್ನತಗೊಳಿಸಿ, ಸದುದ್ದೇಶ ಸಮರಸಗಳಿಂದ ಕೂಡುವಂತೆ ಮಾಡುತ್ತದೆ ಎಂದರು.