
ಸಂವಿಧಾನ ಅರ್ಪಣೆ ದಿನಾಚರಣೆ ಆಚರಣೆ
Constitution dedication day celebration
ಗಂಗಾವತಿ: ಸಂವಿಧಾನ ದಿನಾಚರಣೆಯ ಅಂಗವಾಗಿ, ಮಾನ್ಯ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ತಹಶೀಲ್ದಾರ ನಾಗರಾಜ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹುಲುಗಪ್ಪ ಸರ್ ಹಾಗೂ ನಗರಸಭೆಯ ಪೌರಯುಕ್ತ ವಿರುಪಾಕ್ಷಯ್ಯ ಸ್ವಾಮಿ ಹಿರೇಮಠ ಅವರ ಸಹಭಾಗಿತ್ವದಲ್ಲಿ ಭವ್ಯವಾದ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸಿ, ರಾಷ್ಟ್ರ ನಿರ್ಮಾಣಕ್ಕೆ ಅಸಾಧಾರಣ ಕೊಡುಗೆ ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ನಂತರ ಗಂಗಾವತಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜೃಂಭಣೆಯ ಮೆರವಣಿಗೆಯಲ್ಲಿ ಪಾಲ್ಗೊಂಡು, ಜನಸಾಗರದೊಂದಿಗೆ ಶಿಸ್ತಿನಿಂದ ಸಂವಿಧಾನ ಮೌಲ್ಯಗಳ ಪರ ಜಾಗೃತಿ ಮೂಡಿಸಿದರು. ಸಂಘಟನೆಯ ಮುಖಂಡರುಗಳಾದ ಹುಸೇನಪ್ಪ ಹಂಚಿನಾಳ ವಕೀಲರು ಹುಲುಗಪ್ಪ ಮಾಗಿ ಜಿ ಟಿ ನಾಗರಾಜ ಕೆ ಶರಣಬಸಪ್ಪ ಕೆ ಶಿವಕುಮಾರ ಪಂಪಾಪತಿ ಸಿದ್ದಾಪುರ ಬಸವರಾಜ ಪೂಜಾರಿ ಹಂಪೇಶ ಹರಗೋಲು ಇನೂ ಹೆಚ್ಚಿನ ಮುಖಂಡರು ಭಾಗವಹಿಸಿದ್ದರು



