ಶ್ರೀ ಶಾರದಾ ದೇವಿಗೆ ಕಾರ್ತಿಕ ಮಾಸದ ದೀಪುತ್ಸವ

Mallikarjun
1 Min Read
ಜಾಹೀರಾತು

ಶ್ರೀ ಶಾರದಾ ದೇವಿಗೆ ಕಾರ್ತಿಕ ಮಾಸದ ದೀಪುತ್ಸವ.
ಮನದ ಅಂದಕಾರ ತೆಗೆದು ಹಾಕುವಲ್ಲಿ ಕಾರ್ತಿಕ ದೀಪೋತ್ಸವ ಪೂರಕ.. ನಾರಾಯಣರಾವ್ ವೈದ್ಯ
.


Deeputsava of the month of Kartik for Shri Sharada Devi

whatsapp image 2025 11 15 at 6.18.27 pm


ಗಂಗಾವತಿ. ಮನದ ಅಂಧಕಾರವನ್ನು ತೊಡೆದು ಹಾಕುವಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಮಹತ್ವದಾಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು. ಅವರು ಶುಕ್ರವಾರದಂದು ಶ್ರೀ ಶಾರದಾಂಬ ದೇಗುಲದಲ್ಲಿ ಕಾರ್ತಿಕ್ ದೀಪೋತ್ಸವ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾಹೀರಾತು

ಕತ್ತಲು ಎಂಬುವುದು ಅಜ್ಞಾನದ ಸಂಕೇತವಾಗಿತ್ತು ಅಂತಹ ಅಜ್ಞಾನವನ್ನು ದೀಪ ಹಚ್ಚುವುದರ ಮೂಲಕ ಬೆಳಕು ನೀಡುವ ಕಾರ್ಯ ಕಾರ್ತಿಕೋತ್ಸವದ ಉದ್ದೇಶವಾಗಿದೆ. ಕಳೆದ 8 ವರ್ಷಗಳಿಂದ ಶೃಂಗೇರಿಯ ಉಭಯ ಜಗದ್ಗುರುಗಳ ಅನುಗ್ರಹದಮೇರೆಗೆ ವಿವಿಧ ಸಮಾಜದ ಹಾಗೂ ವಿವಿಧ ಭಜನಾ ಮಂಡಳಿಗಳ ಮಹಿಳೆಯರಿಂದ ಶಂಕರ ಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತ ಬರಲಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಸಮಾರಂಭದ ನೇತೃತ್ವವನ್ನು ವಹಿಸಿದ ಬೀಮ್ ಭಟ್ ಬಸಾಪಟ್ಟಣ ಮಾತನಾಡಿ ಕಾರ್ತಿಕ ಮಾ ಸದ ದೀಪೋತ್ಸವಕ್ಕೆ ಸಂಪ್ರದಾಯ ಸೇರಿದಂತೆ ವೈಜ್ಞಾನಿಕ ಹಿನ್ನೆಲೆ ಹೊಂದಿದೆ. ಕಾರ್ತಿಕ ಮಾ ಸ ಕತ್ತಲೆಯಿಂದ ಕೂಡಿದ್ದು ಪ್ರಕೃತಿ ದ ತ್ತವಾದ ಚಳಿ ಹೊಂದಿದೆ. ಮನುಷ್ಯನಲ್ಲಿ ಇರುವ ಅಜ್ಞಾನ ಅಂಧಕಾರ.ಹೊಡೆ ದೂಡ ಸಿ ಸುಜ್ಞಾನದ ಬೆಳಕನ್ನು ಶ್ರೀ ಶಾರದಾಂಬೆ ದೇವಿಗೆ ಸಮರ್ಪಿಸುವ ಸಂಕಲ್ಪ ಹೊಂದಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ ದಂಪತಿಗಳು ಸೇರಿದಂತೆ. ಶಾರದಾ ಶಂಕರ ಭಕ್ತ ಮಂಡಳಿ ಇತರರು ಏಕಕಾಲಕ್ಕೆ ಜ್ಯೋತಿ ಬೆಳಗಿ ಸೋದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಜನೆ. ಮಹಾಸಂಕಲ್ಪ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು. ವಿವಿಧ ಸಮಾಜದ ಮುಖಂಡರು ಯುವಕರು ಮಹಿಳೆಯರು ಮಕ್ಕಳು ದೀಪೊ ತ್ಸವ ಬೆಳಗಿ ಸಂಭ್ರಮಿಸಿದರು…

Total Views: 0
Share This Article