Breaking News

ಶಿ ಇಜ್ ಮೈ ಲವ್ ”- ಚಿತ್ರೀಕರಣ ಆರಂಭ

She Is My Love" - Filming begins

Screenshot 2025 10 14 17 49 35 93 E307a3f9df9f380ebaf106e1dc980bb61913227708412124411 1024x546


ಮೈಸೂರು : ಕ್ರಿಯೇಟಿವ್ ಕಾನ್ಸೆಪ್ಟ್÷್ಸ ಬೆಂಗಳೂರು ಬ್ಯಾನರಡಿ ಮೈಸೂರಿನ ಅಗ್ರಹಾರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ s “ ಶಿ ಇಜ್(ಈಸ್) ಮೈ ಲವ್ ” ಚಲನಚಿತ್ರದ ಚಿತ್ರೀಕರಣ ಮುಹೂರ್ತ ನೆರವೇರಿತು.
ಅತಿಥಿಗಳಾಗಿ ಆಗಮಿಸಿದ್ದ ಕೃಷ್ಣರಾಜ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ.ಎಸ್ ವತ್ಸ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿ ಚಿತ್ರ ಅದ್ದೂರಿಯ ಯಶಸ್ಸು ಕಾಣಲೆಂದು ಶುಭ ಹಾÀರೈಸಿದರು. ಚಲನಚಿತ್ರ ನಿರ್ಮಾಪಕ ಎಂ ಡಿ ಪಾರ್ಥಸಾರಥಿ ,ನಿರ್ಮಾಪಕ ,ನಿರ್ದೇಶಕ ಲೋಕೇಶ್ ವಿದ್ಯಾಧರ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಮಾತುಕತೆಗಳೆಲ್ಲ ಆಂಗೀಕ, ಸಂಜ್ಞೆಯ ಮೂಲಕವೇ ಸಾಗುವ ಮೂಕಿ ಚಿತ್ರ . ಈ ಚಿತ್ರದಲ್ಲಿ ನಾಯಕ ಕಿವುಡ ಹಾಗೂ ಮೂಗ. ಆತ ಒಂದು ಹುಡುಗಿನ ಪ್ರೀತಿಸುತ್ತಾನೆ . ಮಾತು ಬಾರದ ಹಾಗೂ ಕಿವಿ ಕೇಳದ ಹುಡುಗ ಹೇಗೆ ಪ್ರೀತಿ ಮಾಡ್ತಾನೆ, ಆ ಪ್ರೀತಿನ ಹೇಗೆ ವ್ಯಕ್ತಪಡಿಸುತ್ತಾನೆ. ಹಾಗೆ ಅಲ್ಲಿ ಬರುವಂತಹ ಸನ್ನಿವೇಶ ಸಂದರ್ಭಗಳನ್ನು ಎದುರಿಸಿ ಕೊನೆಗೆ ಅವಳನ್ನು ಹೇಗೆ ಮದುವೆಯಾಗುತ್ತಾನೆ ಅನ್ನೋದು ಚಿತ್ರದಲ್ಲಿದೆ. ಮೈಸೂರಿನ ಸುತ್ತ ಮುತ್ತ ಮೂವತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಯಲಿದೆ. ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ , ನಿರ್ಮಾಪಕರಾದ ಜನಾರ್ಧನ ರಾಜು ಹೇಳಿದರು.
ತಾರಾಗಣದಲ್ಲಿ ನವೀನ, ಅಶ್ರೀತಾ, ವಾಸ್ತವ, ಅನುರಾಧ, ಅಶೀನಾ, ರಾಜಕುಮಾರ್, ಮುತ್ತುರಾಜ್, ಮಮತಾ, ಲೋಕೇಶ ವಿದ್ಯಾಧರ, ಪ್ರದೀಪ, ತನ್ಯಾ, ವೆಂಕಟೇಶ, ಮನೀಷಾ, ಮನಿಕಂಠ, ಕೆ ಸಾಯಿ ಚೈತನ್ಯಕುಮಾರ್, ಕಿರಣ್ ಮೊದಲಾವರಿದ್ದಾರೆ. ತಾಂತ್ರಿಕವರ್ಗದಲ್ಲಿ ಸಂಗೀತ ಸಂದೀಪ, ಪ್ರಸಾಧನ ಗೋಪಿ, ವಸ್ತಾçಲಂಕಾರ ರಾಮ್‌ಬಾಬು, ಕಲಾನಿರ್ದೇಶನ ಸಾಯಿ ಕಲ್ಯಾಣಕುಮಾರ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹನಿರ್ದೇಶನ ಪ್ರಶಾಂತ ರಾಯ್, ಪ್ರೊಡಕ್ಷನ್ ಮ್ಯಾನೇಜರ್ ಯುವರಾಜ ಇದ್ದು ಜನಾರ್ಧನ ರಾಜು ಚಿತ್ರಕಥೆ,ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಪಕÀರೂ ಆಗಿದ್ದಾರೆ.
**

ಜಾಹೀರಾತು
Screenshot 2025 10 14 17 49 35 93 E307a3f9df9f380ebaf106e1dc980bb65789285997858147967 1024x546

About Mallikarjun

Check Also

ಮತ್ಸಾö್ಯಶ್ರಯ ಯೋಜನೆಯಡಿ ಅರ್ಜಿ ಆಹ್ವಾನ

Application invited under the Fisheries Sanctuary Scheme ಕೊಪ್ಪಳ ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯಿಂದ 2024-25ನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.