Gangavati T.Pt. EO Ramreddy Patil assumed charge

ಗಂಗಾವತಿ : ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ರಾಮರೆಡ್ಡಿ ಪಾಟೀಲ್ ಅವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿಕೊಂಡರು.
ಗಂಗಾವತಿ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮೂಲ ತಾಲೂಕು ಪಂಚಾಯತ್ ಕಾರಟಗಿಯಲ್ಲಿ ಮುಂದುವರಿದಿದ್ದಾರೆ. ಸದರಿ ಹುದ್ದೆಗೆ ಗಂಗಾವತಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ರಾಮರೆಡ್ಡಿ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡರು.