ಬೆಂಗಳೂರುದಲ್ಲಿ ” ವಚನ ದರ್ಶನ ಮಿಥ್ಯ vs ಸತ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಕಾಂತ ಸ್ವಾಮಿಯವರಿಗೆ ಸನ್ಮಾನಿಸಲಾಯಿತು

Srikanta Swamy was felicitated at the “Vachana Darshan Mithya vs Satya” book launch event in Bangalore.

ಬೆಂಗಳೂರು: ದಿ, 27/02/2025 ರಂದು ಮುಂಜಾನೆ ಬಸವ ಸಮಿತಿ ಅನುಭವ ಮಂಟಪ ಸಭಾಂಗಣ , ಬೆಂಗಳೂರುದಲ್ಲಿ ” ವಚನ ದರ್ಶನ ಮಿಥ್ಯ vs ಸತ್ಯ” ಪುಸ್ತಕ ಬಿಡುಗಡೆ ಮಾಡಲಾಯಿತು. ಹಲವಾರು ಹಿರಿಯರ ಮತ್ತು ಹೊಸಬರ ಲೇಖನಗಳನ್ನು ಸಂಪಾದನೆ ಮಾಡಿ ಪ್ರಕಟಣೆ ಮಾಡಲಾಗಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬೀದರ ಜಿಲ್ಲೆಯ ಶರಣ ಶ್ರೀ ಶ್ರೀಕಾಂತ ಸ್ವಾಮಿ ಅವರ ಏಕೈಕ ಲೇಖನ ” ವಚನ ದರ್ಶನ ಕಲುಷಿತ ಮನಸ್ಸಿನ,ಸಮಾಜ ವಿರೋಧಿ, ಕಳಪೆ ಪುಸ್ತಕ” ಪ್ರಕಟಣೆ ಮಾಡಿದ್ದು, ಅಂದು ಸನ್ಮಾನ್ಯ ಡಾ ಎಂ ಬಿ ಪಾಟಿಲ ಮಾನ್ಯ ಸಚಿವರು ಮತ್ತು ಪೂಜ್ಯ ಶ್ರೀ ತೋಂಟದಾರ್ಯ ಜಗದ್ಗುರು ಡಾ ಸಿದ್ದರಾಮ ಮಹಾಸ್ವಾಮಿಗಳು ಸೇರಿ ಶ್ರೀಕಾಂತ ಸ್ವಾಮಿಯವರನ್ನು ಸನ್ಮಾನಿಸಲಾಯಿತು.

ಭಾರತೀಯ ಪರಂಪರೆ ಯಾವುದು ಅನ್ನೋದು ಪ್ರಶ್ನೆ ಮಾಡುತ್ತಾ, ಅದು ಸಮಾನತೆ ಸಾರುವ ಬಸವ ಪರಂಪರೆ ಆಗಬೇಕು ವಿನಹ ಸಮಾಜವನ್ನು ಒಡೆಯುವ ಅಸಮಾನತೆ ಸಾರುವ ಜಾತಿಯತೆ ಲಿಂಗ ಭೇದ ಮಾಡುವ ಆಶ್ಪುರುಷತೆ ಪಾಲಿಸುವ ಪರಂಪರೆ ಆಗಬಾರದು ಎಂದು ಲೇಖಕರು ಬರೆದಿದ್ದಾರೆ ಎಂದು ಪೂಜ್ಯ ತೋಂಟದಾರ್ಯ ಜಗದ್ಗುರು ಪುಸ್ತಕ ಓದಿ ಕಾರ್ಯಕ್ರಮದಲ್ಲಿ ಪುನರುಚ್ಚರಿಸಿದರು. ಲೇಖನ ಎಲ್ಲರೂ ಮೆಚ್ಚುವಂತದ್ದು ಎಂದು ಎಲ್ಲರೂ ಭಾಷಣದಲ್ಲಿ ಕೊಂಡಾಡಿದ್ದರು.

ವಿಜೃಂಭಣೆಯಿಂದ ಜರುಗಿದ ಮಾದಪ್ಪನ ದೊಡ್ಡ ರಥೋತ್ಸವ

Madappa’s big chariot festival was celebrated with great pomp.


ವರದಿ : ಬಂಗಾರಪ್ಪ .ಸಿ.
ಹನೂರು :ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಬಹಳ ಅಚ್ಚುಕಟ್ಟಾಗಿ ಪ್ರಾಧಿಕಾರದ ವತಿಯಿಂದ ಹಾಗೂ ಜಿಲ್ಲಾಡಳಿತದಿಂದ ಸಕಲ ಸೌಲಭ್ಯಗಳೊಂದಿಗೆ ನೆರೆವೆರಿತು ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು .

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿನ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಯವರ ನೇತೃತ್ವದಲ್ಲಿ ಮಹಾರಥೋತ್ಸವು ವಿಜೃಂಭಣೆಯಿಂದ ಜರುಗಿತು .

ಮಹಾರಥವನ್ನು ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು, ದೇಗುಲವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗಿನ ಜಾವತಿ ಗಂಟೆಯಿಂದ 6.30ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿನ ಲಾಯಿತು. ಸ್ವಾಮೀಜಿಗಳ ಸಮ್ಮುಖದಲ್ಲಿ ಬೆಳಗಿನ ಜಾವ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಿ ನಂತರ ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಉಪಸ್ಥಿತಿಯಲ್ಲಿ ಛತ್ರಿ, ಚಾಮರ, ವಾದ್ಯ ಮೇಳದೊಂದಿಗೆ ದೇಗುಲ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ ಉತ್ಸವ ಮೂರ್ತಿಯನ್ನು ಮಹಾರಥೋತ್ಸವವಕ್ಕೆ ತರಲಾಯಿತು . ಶ್ರೀ ಸ್ವಾಮಿಗೆ ಸಂಕಲ್ಪಮಾಡಿ, ಅಷ್ಟೋತ್ತರ. ಬಿಲ್ವಾರ್ಚನೆ, ದೋಪ ದೀಪ ನೈವೇದ್ಯ ಮಹಾಮಂಗಳಾರತಿ ನೆರವೇರಿಸಿದರು. ಈ ವೇಳೆ ಭಕ್ತರು ಉಘೇ ಉಘೇ ಮಹಂತ ಮಲ್ಲಯ್ಯಾ, ಉಘೇ ಮಾದಪ್ಪ ಉಘೇ, ಸಾಲೂರುಮಠದೊಡೆನಿಗೆ ಉಘೇ ಉಘೇ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಭಕ್ತಿ ಭಾವದ ಸಂಗಮದಲ್ಲಿ ಭಕ್ತರು ಮುಳುಗಿದರು.
ಮಹಾರಥೋತ್ಸವದ
ಶ್ರೀ ಸ್ವಾಮಿಯ ಉತ್ಸವ ಮೂರ್ತಿಯ ಜೋತೆ ಸಾಲೂರು ಶ್ರೀಗಳ ಗುರು ಬ್ರಹ್ಮೋತ್ಸವವು ಜರುಗಿತು. ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ ಇ ರಘು . ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.

ಸಿದ್ದು ನಿವಾಸಗಳನ್ನು ನಿರ್ಮಾಣವನ್ನು ಪರಿಸಿಲಿಸಿದಶಾಸಕರಾದ ಎಮ್ ಆರ್ ಮಂಜನಾಥ್

M R Manjanath, a lawmaker, reviewed the construction of Siddu residences


ವರದಿ : ಬಂಗಾರಪ್ಪ .ಸಿ .

ಹನೂರು : ರಾಜ್ಯ ಸರ್ಕಾರದಿಂದ
ಬುಡಕಟ್ಟು ಸಮುದಾಯದವರಿಗೆ ಸಿದ್ದು ನಿವಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಎಂ.ಆರ್ ಮಂಜುನಾಥ್ ಪರಿಶೀಲನೆ ನಡೆಸಿದರು…

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆ ಹೋಲ ಅರಣ್ಯ ವಾಸಿಗಳಿಗೆ ಹಾಗೂ ಬುಡಕಟ್ಟು ಸಮುದಾಯದವರಿಗೆ ಸಿದ್ದು ನಿವಾಸ ಯೋಜನೆ ಅಡಿ ಮನೆಗಳ ನಿರ್ಮಾಣಕ್ಕೆ 5 ಲಕ್ಷ ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಬುಡಕಟ್ಟು ಸಮುದಾಯದವರಿ ಹೆಚ್ಚಾಗಿ ವಾಸಿಸುವ ಕಲೋನಿಯಲ್ಲಿ ಶ್ರೀಮತಿ ಕಾವೇರಿ ಬಿನ್ ಮಂಜುನಾಥ ಎಂಬ ಫಲಾನುಭವಿ ಹೆಸರಿನಲ್ಲಿ ಒಂದು ಮಾದರಿ ಮನೆ ನಿರ್ಮಾಣ ಮಾಡಲಾಗುತ್ತಿತ್ತು ಸದರಿ ಮನೆಯ ನಿರ್ಮಾಣ ಹಂತದಲ್ಲಿರುವುದರಿಂದ ಮಾದರಿ ಮನೆಯ ಪರಿಶೀಲನೆಯನ್ನು ನಡೆಸಿದ ಶಾಸಕರು,ಮನೆ ನಿರ್ಮಾಣದಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು

ಇದಲ್ಲದೆ 2022 ಹಾಗೂ 2023ರ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 2 ಲಕ್ಷ ಹಾಗೂ ನೆರೆಗ ಯೋಜನೆಯಾಡಿಯಲ್ಲಿ 30000 ಸಾವಿರ ವೆಚ್ಚದಲ್ಲಿ ಬುಡಕಟ್ಟು ಸಮುದಾಯದ ಮನೆ ನಿರ್ಮಿಸಲಾಗುತ್ತಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್,ಮುಖಂಡರುಗಳಾದ ಮಂಜೇಶ್ ಗೌಡ,ಡಿ.ಆರ್ ಮಾದೇಶ್,ಸುರೇಶ್, ಗೋಪಾಲ್ ನಾಯಕ,ವಿಜಯ್ ಕುಮಾರ್ ,ನಿಂಗರಾಜು,ವೆಂಕಟೇಶ್,ಅಭಿ,ಹಾಗೂ ಇನ್ನಿತರರು ಹಾಜರಿದ್ದರು.

ಶಿವರಾತ್ರಿ ಪ್ರಯುಕ್ತ ಆದಿಯೋಗಿಜಕನೂರಿನ ಶಿವಮೂರ್ತಿ ಕಂಡಿದ್ದು ಹೀಗೆ !

This is how Adiyogi Jakanur’s Shiva idol was seen on the occasion of Shivratri!

ವರದಿ:ಸಚೀನ ಆರ್ ಜಾಧವ

ಕಲ್ಯಾಣಸಿರಿ, ಸಾವಳಗಿ: ಜಮಖಂಡಿ ತಾಲೂಕಿನ ಸಮೀಪದ ಕೃಷ್ಣಾನದಿ ತಟದಲ್ಲಿರುವ ಜಕನೂರ ಎಂಬ ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಆದಿಯೋಗಿ ಶಿವನ ಬೃಹತ್ ಮೂತಿ೯ ಈ ಭಾಗದ ಶಿವಭಕ್ತರ ಆಕರ್ಷಣೆ ಭಕ್ತಿರಸ ಭಾವದ ಕೇಂದ್ರ ಬಿಂದುವಾಗಿದೆ.

ಜಮಖಂಡಿ ತಾಲೂಕು ಜಕನೂರ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಬೃಹತ್ ಶಿವನಮೂತಿ೯ ಆಕರ್ಷಣೆ ಸ್ಪೂರ್ತಿ- 71 ಅಡಿ ಎತ್ತರ, 4 ಕೋಟಿ ₹ ವೆಚ್ಚದಲ್ಲಿ 1 ಎಕರೆ ವಿಶಾಲ ಪ್ರದೇಶದಲ್ಲಿ ಶಿವನ ಅವತಾರ ಮಿನುಗು- ದರ್ಶನಕ್ಕೆ ಭಕ್ತರ ದಂಡು-ಪೂಜೆ ಪುರಸ್ಕಾರ ಸಲ್ಲಿಕೆ- ಧಾಮಿ೯ಕ ತೃಷೆ ಜೋರು ! ಶಿವನ ರೂಪ ಲಾವಣ್ಯ ಕಣ್ತುಂಬಿಸಿಕೊಂಡ ಭಕ್ತಗಣ ! ಕೃಷ್ಣೆ ತೀರದ ದಡದಲ್ಲಿ ಮೈದೇಳಿರುವ ಈ ಶಿವನಮೂತಿ೯ಯ ರೂಪಾಲಂಕಾರದ ಲಾವಣ್ಯ ಕಣ್ತುಂಬಿಸಿಕೊಳ್ಳಲು ಶಿವರಾತ್ರಿ ಹಬ್ಬದಂದು ಅಸಂಖ್ಯಾತ ಶಿವಭಕ್ತರು ಇತ್ತ ಲಗ್ಗೆಯಿರಿಸಿ ಭಕ್ತಿ ನಮನ ಪೂಜಾ ಸಲ್ಲಿಸಿದರು.

ಜಕನೂರ ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಅಂಗಳದಲ್ಲಿ ತಲೆಯತ್ತಿರುವ ಬೃಹತ್ ಶಿವನಮೂತಿ೯ 71 ಅಡಿ ಎತ್ತರದಲ್ಲಿದೆ. ಸುಮಾರು ನಾಲ್ಕು ಕೋಟಿ ರೂ,ವೆಚ್ಚದಲ್ಲಿ ನಿಮಾ೯ಣಗೊಂಡಿರುವ ಶಿವ ಪರಮಾತ್ಮನ ಮೂತಿ೯ ಒಂದು ಎಕರೆ ವಿಶಾಲ ಜಾಗದಲ್ಲಿ ಶಿವಮನಗಳ ಕಣ್ಮನ ಸೆಳೆಯುತ್ತಿದೆ.ಬಹು ಅತ್ಯಾಕರ್ಷಕವಾಗಿ ರಾರಾಜಿಸಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.

ಶಿವರಾತ್ರಿ ಹಬ್ಬದಂದು ರಾತ್ರಿ ಕಲರಫೂಲ್ ಬಗೆಬಗೆಯ ಬಣ್ಣದ ಚಿತ್ತಾರದಲ್ಲಿ ಕಂಗೊಳಿಸಿ ಭಕ್ತರನ್ನು ತನ್ನತ್ತ ಸೆಳೆದಿದೆ. ಮನಃಪೂರ್ವಕವಾಗಿ ಆಕರ್ಷಿಸಿಸಿ ಭಕ್ತಿಭಾವದಲ್ಲಿ ತೇಲುವಂತೆ ಮಾಡಿದೆ. ಶಿವರಾತ್ರಿ ಸಂಭ್ರಮ, ಸಡಗರ ಭಾವಲೋಕದ ವೈಭವಕ್ಕೆ ಜಕನೂರ ಗ್ರಾಮದ ಈ ವೈವಿಧ್ಯಮಯ ಶಿವನಮೂತಿ೯ ಸಾಕ್ಷಿಯಾಗಿದೆ. ಅಂದು ಮುಂಜಾನೆಯಿಂದಲೇ ಅಪಾರ ಭಕ್ತರು ಆಗಮಿಸಿ ಶಿವನಿಗೆ ವಿಶೇಷ ಪೂಜೆ,ಪುರಸ್ಕಾರಗಳನ್ನು ನೆರವೇರಿಸಿದರು.

ಭಕ್ತ ಸಮೂಹ ಶಿವನ ಅಂಗಳದಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆದುಕೊಂಡು ಶಿವನ ಕೃಪೆಗೆ ಪಾತ್ರರಾದರು. ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಭಕ್ತರ ದಂಡು ಆಗಮಿಸಿ ಶಿವನಮೂತಿ೯ ದರ್ಶನ ಪಡೆದು ಪುನೀತರಾದರು.ಭಕ್ತಿ ನಮನದಿಂದ ಧನ್ಯತಾಭಾವ ಮೆರೆದರು.ವಿವಿಧ ಬಗೆಯ ಪೂಜಾ ಕೈಂಕರ್ಯ ಕೈಗೊಂಡರು.ಶಿವನ ನೆಲ ಭಕ್ತಿ ಪರಾಕಾಷ್ಠೆಯಲ್ಲಿ ನಿಂತಿತು. ಶಿವರಾತ್ರಿ ಸಡಗರ ಮನಮನಗಳಲ್ಲಿ ಮನೆ ಮಾಡಿತ್ತು. ಶಿವನಮೂತಿ೯ ದರ್ಶನಕ್ಕೆ ಬಂದ ಭಕ್ತರಿಗಾಗಿ ಡಾ.ಮಾದುಲಿಂಗ ಮಹಾರಾಜರು ಪ್ರಸಾದ ವ್ಯವಸ್ಥೆ ಕಲ್ಪಿಸಿದರು. ರಾಗಿ ಅಂಬ್ಲಿ ,ಸಾಬೂದಾಣಿ,ಬಾಳೆಹಣ್ಣು, ದ್ರಾಕ್ಷಿ, ,ಶರಬತ್ ಪಾನೀಯ ವ್ಯವಸ್ಥೆ ಮಾಡಲಾಯಿತು. ಭಾಗಶಃ ಭಕ್ತರು ಉಪವಾಸ ವೃತದೊಂದಿಗೆ ಇಲ್ಲಿಗೆ ಆಗಮಿಸಿ ತಮ್ಮ ಮನಭಾವದ ಭಕ್ತಿ ಸಮಪಿ೯ಸಿದರು.

ಪ್ರತಿ ಭಾನುವಾರದಂದು ಇಲ್ಲಿಗೆ ಆಗಮಿಸುವ ಭಕ್ತರಿಗೆ ಪ್ರಸಾದ್ ವ್ಯವಸ್ಥೆ ಮಾಡಲಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ನಿತ್ಯ ಭಕ್ತರು ಶಿವನ ದರ್ಶನಕ್ಕೆ ಬರುತ್ತಾರೆ.ಅದರಲ್ಲೂ ರವಿವಾರದಂದು ಭಕ್ತರ ಸಂಖ್ಯೆ ಇಮ್ಮಡಿಯಾಗಿರುತ್ತದೆ. ಸಿದ್ಧಾಶ್ರಮದ ಡಾ. ಮಾದುಲಿಂಗ ಮಹಾರಾಜರ ಕೃಪಾಭಾವದಿ ನೇತೃತ್ವದಲ್ಲಿ ಇವೆಲ್ಲವೂ ಸಾಂಗವಾಗಿ ನೆರವೇರಿದವು.

ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಪ್ರಮುಖರಾದ ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಓಯಪ್ಪ ಬ್ಯಾಕೋಡ, ಮಹಾದೇವ ಮಿಜಿ೯, ಹಣಮಂತ ಅಮರಿ,ಮಹಾದೇವ ಶಿರೋಳ,ಗಂಗಪ್ಪ ಮಂಟೂರ ಮಹಾದೇವ ಗುಡದಾರ, ಶಿವಪ್ಪ ಹುಣಶಿಕಟ್ಟಿ, ಮಲ್ಲಿಕಾರ್ಜುನ ಒಡೆಯರ,, ಮರೆಗುದ್ದಿಯ ಗುರುಪಾದಪ್ಪ ಮಠಪತಿ, ಕುಂಚನೂರಿನ ಹನಮು ಸಾಹುಕಾರ ಮೊದಲಾದವರ ಉಸ್ತುವಾರಿ ಸಹಕಾರದಿಂದ ಡಾ,ಮಾದುಲಿಂಗ ಮಹಾರಾಜರು ಅಚ್ಚುಕಟ್ಟಾಗಿ ಭಕ್ತರಗೆ ವ್ಯವಸ್ಥೆ ರೂಪಿಸಿ ಜನಭಾವದಲ್ಲಿ ಮಿನುಗಿದರು.