ಶಾಸಕ ಕೆ.ನೇಮಿರಾಜ್ ನಾಯ್ಕ ಅವರಿಂದ ಕೊಟ್ಟೂರು-ಕೂಡ್ಲಿಗಿ ರಸ್ತೆ ಕಾಮಗಾರಿ ಭೂಮಿ ಪೂಜೆ ಚಾಲನೆ

MLA K.Nemiraj Nayka started Kottur-Koodligi road work for Bhoomi Puja



ಕೊಟ್ಟೂರು: ಕೊಟ್ಟೂರುನಿಂದ ಕೂಡ್ಲಿಗಿಗೆ ಸಂಪರ್ಕ ನೀಡುವ ಹೆದ್ದಾರಿ ತಗ್ಗು ಗುಂಡಿಗಳಾಗಿ ರಸ್ತೆಗಳಾಗಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಇದನ್ನು ಮನಗಂಡು ಸಾರ್ವಜನಿಕರ ಮನವಿಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಹಗರಿಬೊಮ್ಮನಹಳ್ಳಿ ಶಾಸಕರಾದ ಕೆ.ನೇಮಿರಾಜ್ ನಾಯ್ಕ ರವರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಪರಿಣಾಮವಾಗಿ ಕೊಟ್ಟೂರು-ಕೂಡ್ಲಿಗಿ ಸಂಪರ್ಕಿಸುವ ರಸ್ತೆಯನ್ನು ಪಟ್ಟಣದ ಅಗ್ನಿಶಾಮಕ ಕಛೇರಿಯ ಮುಂಭಾಗದಲ್ಲಿ ಭೂಮಿಪೂಜೆಯನ್ನು  ಲೋಕೋಪಯೋಗಿ ಇಲಾಖೆಯಿಂದ ೨೦೨೩-೨೪ನೇ ಸಾಲಿನ ಸಿ.ಆರ್.ಎಫ್-ಕೆ.ಎನ್.ಸಿ. ಯೋಜನೆ ಅಡಿಯಲ್ಲಿ ಬುಧವಾರದಂದು ಭೂಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕರು ಕೊಟ್ಟೂರು-ಗಜಾಪುರ ಸಂಪರ್ಕಿಸುವ ರಸ್ತೆ ನವೀಕರಣವನ್ನು ಸುಮಾರು ೪.೮೫ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೆ ಕೊಟ್ಟೂರು ತಾಲೂಕಿನ ಸಂಪರ್ಕಿಸುವ ವಿವಿಧ ರಸ್ತೆಗಳನ್ನು ಈಗಾಗಲೇ ಇಟಗಿ ರಸ್ತೆಯು ೧೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಹಾಗೆಯೇ ಹರಾಳು ಕ್ರಾಸ್‌ನಿಂದ ಕೊಟ್ಟೂರಿನವರೆಗೂ ೫.೦೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಎಪಿಎಂಸಿ ರಸ್ತೆಯಿಂದ ಕೊಟ್ಟೂರು ಗಡಿಭಾಗವಾದ ಹಗರಿ ಗಜಾಪುರವರಿಗೂ ಮೂರು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದರು.
ದೂಪದಹಳ್ಳಿ, ಮೋತಿಕಲ್ ತಾಂಡ, ಸಂಗಮೇಶ್ವರ, ಕುಡುತಿನ ಮಗ್ಗಿ, ರಸ್ತೆಗಳು ಶೀಘ್ರದಲ್ಲೇ  ಪ್ರಾರಂಭವಾಗುತ್ತದೆ. ಹಾಗೆ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ೫೦ ಲಕ್ಷ ಅನುದಾನವನ್ನು ನೀಡಲಾಗುತ್ತದೆ. ನನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುವುದೇ ನನ್ನ ಧ್ಯೇಯ ಎಂದು ಹೇಳಿದರು.
ಕ್ಷೇತ್ರನಾಥ ಶ್ರೀಗುರುಬಸವೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿವಿಧ ಕಡೆಯಲ್ಲಿ ಶೌಚಾಲಯ ನಿರ್ಮಿಸಲು ಹಾಗೂ ಮಾರ್ಚ್‌ನಲ್ಲಿ ಅನುದಾನ ತಂದು ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗುವುದು. ಕೊಟ್ಟೂರಿನಲ್ಲಿ ಹೊಸದಾಗಿ ಕೋರ್ಟ್ ಕಟ್ಟಡ ಪ್ರಾರಂಭಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಲೋಕೋಪಯೋಗಿ ಸಚಿವರು ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿರುವುದು ಗಮನಾರ್ಹ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಹಾಗೂ ಉಜ್ಜಯಿನಿ ಪೀಠದ ಕಾರ್ಯದರ್ಶಿಗಳಾದ  ಎಂ.ಎಂ.ಜೆ.  ಹರ್ಷವರ್ಧನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊರಬ ಕೊಟ್ರೇಶ್, ಮುಖಂಡರ ತಿಮ್ಲಾಪುರದ ಕೊಟ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬೂದಿ ಶಿವಕುಮಾರ್, ಬಿ.ಎಸ್.ಆರ್. ಮೂಗಣ್ಣ, ಅಲಬೂರು ಹೇಮಣ್ಣ , ಇನ್ನು ಅನೇಕ ಪ್ರಮುಖ ಮುಖಂಡರು ಉಪಸಿತರಿದ್ದರು.

ರಾಯಚೂರು ಜಿಲ್ಲೆಯಲ್ಲಿ ಜ.24ರಿಂದ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಪ್ರವಾಸ

In Raichur district from January 24, Dr. Sharan Prakash R. Patil tour


ರಾಯಚೂರು ಜ.22,(ಕರ್ನಾಟಕ ವಾರ್ತೆ): ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ಜನವರಿ 24ರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅವರು ಜ.23ರ ರಾತ್ರಿ 8.40ಕ್ಕೆ ಬೆಂಗಳೂರಿನಿಂದ ರೈಲು ಮಾರ್ಗವಾಗಿ ಹೊರಟು ಜ.24ರ ಬೆಳಿಗ್ಗೆ 4.13ಕ್ಕೆ ರಾಯಚೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ರಾಯಚೂರಿನ ಒಪೆಕ್ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಬಳಿಕ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸಂಜೆ 4 ಗಂಟೆಗೆ ರಾಯಚೂರಿನಿಂದ ನಿರ್ಗಮಿಸಿ ಕಲಬುರಗಿ ಜಿಲ್ಲೆಗೆ ಪ್ರಯಾಣ ಬೆಳೆಸುವರು. ಜನವರಿ 25ರಂದು ಸಂಜೆ 7.30ಕ್ಕೆ ಕಲಬುರಗಿ ನಗರದಿಂದ ರಸ್ತೆ ಮಾರ್ಗವಾಗಿ ಹೊರಟು ರಾತ್ರಿ 10 ಗಂಟೆಗೆ ರಾಯಚೂರಗೆ ಆಗಮಿಸಿ ವಾಸ್ತವ್ಯ ಮಾಡುವರು. ಜನವರಿ 26ರಂದು ಬೆಳಗ್ಗೆ 9 ಗಂಟೆಗೆ ರಾಯಚೂರ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಯಚೂರ ಜಿಲ್ಲಾಡಳಿತ ಏರ್ಪಡಿಸಿರುವ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಬಳಿಕ ಮಧ್ಯಾಹ್ನ 1 ಗಂಟೆಗೆ ರಾಯಚೂರಿನಿಂದ ಕಲಬುರಗಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೃಷ್ಣಗೌಡ ತಾಯಣ್ಣವರು ತಿಳಿಸಿದ್ದಾರೆ.

ವಡ್ಡರಹಟ್ಟಿಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮಸಭೆ

Special Gram Sabha for Children’s Rights and Coordination Gram Sabha for Persons with Disabilities at Waddarahatti

ಶಾಲಾ ಮಕ್ಕಳು ಓದಿನ ಆಸಕ್ತಿ ಹೆಚ್ಚಿಸಿಕೊಳ್ಳಲಿ

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಹೇಳಿಕೆ

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾ.ಪಂ. ವತಿಯಿಂದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮಸಭೆ ಬುಧವಾರ ನಡೆಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಮಾರ್ಗಗಳ ಮುಖಾಂತರ ಶಿಕ್ಷಣ ನೀಡಬೇಕಿದೆ. ಮಕ್ಕಳ ಜೀವನವನ್ನು ಅಜ್ಞಾನದಿಂದ ಸುಜ್ಞಾನದ ಕಡೆ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರಕಾರಿ ಶಾಲೆಗಳ ಮಕ್ಕಳು ತಮಗೆ ಸಿಗುವ ಸರಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಪಂ ಗ್ರಂಥಾಲಯದ ಸೌಲಭ್ಯ ಪಡೆದುಕೊಳ್ಳಬೇಕು. ಗ್ರಂಥಾಲಯದಲ್ಲಿ ದಿನ ಪತ್ರಿಕೆಗಳನ್ನು ಓದುವುದು, ಸಣ್ಣ ಕಥೆಗಳನ್ನು ಓದುವುದು ಹಾಗೂ ಕಂಪ್ಯೂಟರ್ ಕಲಿಕಾಸಕ್ತಿ ಬೆಳೆಸಿಕೊಳ್ಳಬೇಕು. ನಿತ್ಯವೂ ಶಾಲೆಗೆ ಆಗಮಿಸಿ ಉತ್ತಮ ವಿದ್ಯಾರ್ಥಿಗಳಾಗಿ ಶಾಲೆ ಮತ್ತು ಪಾಲಕರಿಗೆ ಹೆಸರು ತರಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮಸಭೆಯಿಂದ ಮಕ್ಕಳು ಮತ್ತು ವಿಶೇಷ ಚೇತನರ ಸಮಸ್ಯೆ ತಿಳಿಯಲು ಸಹಕಾರಿಯಾಗುತ್ತದೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ವಿಕಲಚೇತನರು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಸರಕಾರಿ ಶಾಲೆ ಹಾಗೂ ಕಚೇರಿಗಳಲ್ಲಿ ವಿಕಲಚೇತನರಿಗೆ ‘ಅಡೆತಡೆ ರಹಿತ’ (ರ್ಯಾಂಪ್ , ರೈಲಿಂಗ್ ವ್ಯವಸ್ಥೆ) ವಾತಾವರಣ ನಿರ್ಮಾಣ ಮಾಡಲಾಗುವುದು. ಜೊತೆಗೆ ವಿಕಲಚೇತನರು ಪ್ರತ್ಯೇಕವಾಗಿ ನರೇಗಾ ಕೆಲಸಕ್ಕೆ ನಮೂನೆ 6 ಅರ್ಜಿ ಸಲ್ಲಿಸಿದರೆ ಪ್ರತ್ಯೇಕ ಎನ್ ಎಂಆರ್ ತೆಗೆದು ಕೆಲಸ ನೀಡಲಾಗುವುದು ಎಂದರು.

ಮಕ್ಕಳ ಮನವಿ: ಸರಕಾರಿ ಶಾಲೆಗಳ ಮಕ್ಕಳು “ಪರಿಸರ ನೈರ್ಮಲ್ಯ ಹಾಗೂ ಸ್ವಚ್ಚತೆ, ವಿದ್ಯುತ್ ದೀಪ್ ಹಾಗೂ ಶಾಲೆ ಗೇಟ್ ಹತ್ತಿರ ರಸ್ತೆಗೆ ಹಂಪ್ಸ್ ಅಳವಡಿಸುವಂತೆ’ ಗ್ರಾಪಂ ಆಡಳಿತ ಮಂಡಳಿಗೆ ಕೋರಿದರು.

ಗಮನಸೆಳೆದ ಮಕ್ಕಳು: ಗ್ರಾಪಂ ವ್ಯಾಪ್ತಿಯ ಶಾಲೆಗಳ ಮಕ್ಕಳು ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಕುರಿತು ಪ್ರಬಂಧ, ಕಿರು ನಾಟಕಗಳನ್ನು ಆಡಿ ಅರಿವು ಮೂಡಿಸಿ ಎಲ್ಲರ ನಿಬ್ಬೇರಗಿಸಿದರು.

ವಡ್ಡರಹಟ್ಟಿ ಗ್ರಾಪಂ ಸದಸ್ಯರಾದ ಬಳ್ಳಾರಿ ರಾಮಣ್ಣ ನಾಯಕ, ಶಾಂತಮ್ಮ, ಫೀರ್ ಮಹ್ಮದ್, ಕಾರ್ಯದರ್ಶಿಗಳಾದ ಈಶಪ್ಪ, ಗ್ರಾಪಂ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರಾದ ವಿ. ನಾಗರತ್ನ, ಸದಾನಂದ, ಶರಣಪ್ಪ, ಶರಣಬಸಪ್ಪ, ಕನಸು ನನಸು ಚಾರಿಟೇಬಲ್ ಟ್ರಸ್ಟ್ ಫಾರ್ ದಿವ್ಯಾಂಗರ (ರಿ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಡಾ.ಅಶೋಕ ಡಂಬರ್, ವಿಆರ್ ಡಬ್ಲ್ಯುಗಳಾದ ಶೈಲಾಜ, ಸೋಮಶೇಖರಗೌಡ, ಗ್ರಾಪಂ ಸಿಬ್ಬಂದಿಗಳಾದ ಆಂಜನೇಯ, ರುದ್ರಸ್ವಾಮಿ, ಮಹ್ಮದ್, ಸಿಬ್ಬಂದಿ ವರ್ಗ ಮತ್ತು ಶಾಲಾ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಬಾಣಂತಿಯರಿಗೆ ಖುದ್ದು ಭೇಟಿಮಾಡಿಯೋಗಕ್ಷೇಮವಿಚಾರಿಸಿದಸಚಿವರು

The Minister personally visited the Banantis and inquired about their well-being





ರಾಯಚೂರ ಗ್ರಾಮೀಣ ಪ್ರದೇಶದಲ್ಲಿ ಸಚಿವರ ಸಂಚಾರ


* ಮಾನ್ವಿ
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ

ರಾಯಚೂರ ಜನವರಿ 22 (ಕ.ವಾ.): ರಾಯಚೂರ ಜಿಲ್ಲೆಯ ಪ್ರವಾಸದಲ್ಲಿದ್ದ ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ್ ಅವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರೊಂದಿಗೆ ಜನವರಿ 22ರಂದು ರಾಯಚೂರ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಮಾನ್ವಿ ತಾಲೂಕಿಗೆ ಭೇಟಿ ನೀಡಿದರು.
ಪೂರ್ವ ನಿಗದಿಯಂತೆ ಬೆಳಗ್ಗೆಯೇ ಮಾನ್ವಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ‌ನೀಡಿದ ಸಚಿವರು, ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಇದೆ ವೇಳೆ ಸಚಿವರು, ಆಸ್ಪತ್ರೆಯ ವಾರ್ಡ್‌ಗಳಿಗೆ ಸಂಚರಿಸಿ ಬಾಣಂತಿಯರ ಆರೋಗ್ಯ ವಿಚಾರಿಸಿದರು.
ಪ್ರತಿ ದಿನ ನಿಮಗೆ ಸರಿಯಾದ ರೀತಿಯಲ್ಲಿ ಊಟ ನೀಡುತ್ತಾರೆಯೆ? ಚಿಕಿತ್ಸೆ ಮತ್ತು ಔಷಧಿಯನ್ನು ಸರಿಯಾಗಿ ಕೊಡುತ್ತಾರಾ? ಎಂದು ಕೇಳಿ ಬಾಣಂತಿಯರ ಯೋಗಕ್ಷೇಮ ವಿಚಾರಿಸಿದರು.
ಆಸ್ಪತ್ರೆಯಲ್ಲಿ ನಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ. ಎಲ್ಲ ವೈದ್ಯರು ನಮಗೆ ಉತ್ತಮ ಚಿಕಿತ್ಸೆ ಕೊಡುತ್ತಾರೆ. ರೋಗಿಗಳಿಗೆ ಸ್ಪಂದಿಸುತ್ತಾರೆ ಎಂದು ಇದೆ ವೇಳೆ ಬಾಣಂತಿಯರು ಸಚಿವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಆಸ್ಪತ್ರೆಯಲ್ಲಿನ ಅಲ್ಟ್ರಾ ಸೌಂಡ್ ಸೇರಿದಂತೆ ಇತರೆ ಉಪಕರಣಗಳನ್ನು ಪರಿಶೀಲಿಸಿದ ನಂತರ ಸಚಿವರು ಆಪರೇಷನ್ ಕೇರ್ ವಾರ್ಡ್ ನಲ್ಲಿರುವ ರೋಗಿಗಳಿಗೆ ಹಣ್ಣು ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ, ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಹಾಗೂ ವೈದ್ಯರ ಲಭ್ಯತೆ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯ ಬಗ್ಗೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಂದ
ಸಚಿವರು ಮಾಹಿತಿ ಪಡೆದುಕೊಂಡರು.
ರಾತ್ರಿ ವೇಳೆಯಲ್ಲೂ ಚಿಕಿತ್ಸೆ ನೀಡಿ: ಯಾವುದೇ ಗ್ರಾಮದಿಂದ ರಾತ್ರಿ ವೇಳೆಯಲ್ಲಿ ತುರ್ತು ಚಿಕಿತ್ಸೆ ಕೋರಿ ಬರುವ ಬಾಣಂತಿಯರಿಗೆ ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿ ತಕ್ಷಣವೇ ಸ್ಪಂದನೆ ನೀಡಬೇಕು. ಯಾವುದೇ ನೆಪ ಹೇಳದೇ ಬೇರೆಡೆ ಕಳುಹಿಸಬಾರದು.
ಪ್ರಥಮ ಹಂತದ ಚಿಕಿತ್ಸೆಗೆ ಕ್ರಮವಹಿಸಿ, ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದರೆ ಮಾತ್ರ ಬೇರೆಡೆ ಕಳುಹಿಸಲು ಕ್ರಮವಹಿಸಬೇಕು ಎಂದು ಸಚಿವರು ಇದೆ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಚಿವರಿಗೆ ಮನವಿ:
ನರ್ಸ್ ಸಿಬ್ಬಂದಿಯ ವೇತನ ಹೆಚ್ಚಳ ಮಾಡುವಂತೆ ಇದೆ ವೇಳೆ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ವೇತನ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ: ಮಾನ್ವಿ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆ ಇರುವುದು ಗಮನಕ್ಕೆ ಬಂದಿದೆ. ಶ್ರೀಘದಲ್ಲಿ ಭರ್ತಿಗೆ ಕ್ರಮ ವಹಿಸಲಾಗುವುದು. ಆಸ್ಪತ್ರೆಯಲ್ಲಿ ತುರ್ತ ಚಿಕಿತ್ಸೆಗೆ ಅನುಕೂಲವಾಗುವಂತೆ ಅವಶ್ಯಕತೆ ಇರುವ ಕಡೆಗಳಲ್ಲಿ ನಿಯಮಾನುಸಾರ ಹೊರಗುತ್ತಿಗೆ ಆಧಾರದ ಮೇಲೆ
ಸಿಬ್ಬಂದಿ ಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ ಸಿಇಓ
ರಾಹುಲ್ ತುಕಾರಾಮ ಪಾಂಡ್ವೆ,
ಮಾನ್ವಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರಬಾಬು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶರಣಬಸವರಾಜ್, ಉಪ ಆರೋಗ್ಯಾಧಿಕಾರಿ ಅರವಿಂದ್ ಮತ್ತು ಸಹಾಯಕ ಆರೋಗ್ಯ ಅಧಿಕಾರಿ ಶರಣಪ್ಪ ಇದ್ದರು.

ಬಾಣಂತಿಯರ ಸಾವು ಪ್ರಕರಣಗಳನ್ನು ಶೂನ್ಯಕ್ಕಿಳಿಸಲು ಕ್ರಮ: ಸಚಿವರಾದ ದಿನೇಶ್ ಗುಂಡೂರಾವ್ ಅಭಯ

Action to reduce the death cases of barantis to zero: Minister Dinesh Gundurao Abhay

ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ


ಗ್ರಾಮೀಣಮಟ್ಟದ ಆಸ್ಪತ್ರೆಗಳನ್ನು ಬಲಪಡಿಸಲು ಒತ್ತು
ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ


* ರಾಯಚೂರು ಜಿಲ್ಲೆಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು


ರಾಯಚೂರು ಜ.22,(ಕರ್ನಾಟಕ ವಾರ್ತೆ): ಬಾಣಂತಿಯರ ಸಾವು ಪ್ರಕರಣಗಳನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಇನ್ಮುಂದೆ ನಿಯಮಿತವಾಗಿ
ಆರೋಗ್ಯ ತಪಾಸಣೆ, ಸಕಾಲಕ್ಕೆ ಚಿಕಿತ್ಸೆ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ತಾಯಂದಿರ ಮರಣ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ನವೋದಯ ವೈದ್ಯಕೀಯ ಕಾಲೇಜು, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಜನವರಿ 22ರಂದು ನಡೆದ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧೆಡೆ ಬಾಣಂತಿಯರ ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಗರ್ಭಿಣಿಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮವಾಗಿರುವಂತೆ ಎಲ್ಲಾ ಕಡೆಗೆ ಕಡ್ಡಾಯವಾಗಿ ಅವರಿಗೆ ಗುಣಮಟ್ಟದ ಚಿಕಿತ್ಸೆ ದೊರೆತು, ತಾಯಂದಿರರ ಅನಾರೋಗ್ಯ ಪ್ರಕರಣಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದು ಶೂನ್ಯಕ್ಕೆ ತರುವ
ರೀತಿಯಲ್ಲಿ ಜಾಗೃತಿ
ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ‌ ಭಾಗದ ರಾಯಚೂರ ಸೇರಿದಂತೆ ಎಲ್ಲಾ ಕಡೆಗೆ ಆದ್ಯತೆಯ ಮೇರೆಗೆ ಈ ಅಭಿಯಾನ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಸೌಕರ್ಯ ಸಿಗುವ ರೀತಿಯಲ್ಲಿ ರಾಜ್ಯದ ಎಲ್ಲಾ ತಾಲೂಕುಗಳ ಆಸ್ಪತ್ರೆಗಳು ಸಹ ದಿನದ 24 ಗಂಟೆ ಕಾರ್ಯ ನಿರ್ವಹಿಸಿ ಜನತೆಗೆ ಉತ್ತಮ ಸೇವೆ ನೀಡಬೇಕು. ಗ್ರಾಮೀಣ ಭಾಗದ
ಜನತೆಗೆ ಸಹ ಉತ್ತಮ ವೈದ್ಯಕೀಯ ಸೌಕರ್ಯ ಸಿಗುವ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಬಳಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಪ್ರಯತ್ನದ ಭಾಗವಾಗಿ ಮುಂಬರುವ ದಿನಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು.
ಆರೋಗ್ಯ ಇಲಾಖೆಯ ಕಾರ್ಯಗಳಿಗೆ ಕೈಜೋಡಿಸಿ ಕಾರ್ಯಪ್ರವೃತ್ತರಾದ
ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ ಕನಿಷ್ಠ 10 ಸಾವಿರ ರೂ.ವೇತನ ನಿಗದಿ ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ತರಲಾಗುತ್ತದೆ. ಇದರನ್ವಯ ರಾಯಚೂರು ಜಿಲ್ಲೆಗೆ ಎಂಟು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಾನ್ವಿ ತಾಲೂಕಿನಲ್ಲಿ ನಗರ ಆರೋಗ್ಯ ಕೇಂದ್ರ, ರಾಯಚೂರು ನಗರಕ್ಕೆ ಸಮುದಾಯ ಆರೋಗ್ಯ ಕೇಂದ್ರ ಅಲ್ಲದೇ ಜಿಲ್ಲೆಯ ಯಾವುದಾದರು ತಾಲೂಕಿನಲ್ಲಿ ಉಪವಿಭಾಗದ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ ಓಬಿಜಿವೈ ತಜ್ಞ ವೈದ್ಯರಿಂದ ಗರ್ಭಿಣಿಯರಿಗೆ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಕನಿಷ್ಠ ಒಂದು ಪುಸವಪೂರ್ವ ತಪಾಸಣೆ ನಡೆಯಬೇಕು. ಪ್ರಸವಪೂರ್ವ ಸಮಯದಲ್ಲಿ ಆರೈಕೆಯ ಗುಣಮಟ್ಟ ಸುಧಾರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಈ ವೇಳೆ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಮಾತನಾಡಿ, ರಾಯಚೂರ ಜಿಲ್ಲೆಗೆ ಸುಸಜ್ಜಿತ ಜಿಲ್ಲಾಸ್ಪತ್ರೆ ಅವಶ್ಯಕವಾಗಿದ್ದು, ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನು ಸುಧಾರಣೆಯಾಗಬೇಕಿದೆ. ಈ ಭಾಗದ ವೈದ್ಯರು ಮತ್ತು ಸಿಬ್ಬಂದಿಯು ಜನತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಬಡ ಕುಟುಂಬಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಮಹಾನಗರ ಪಾಲಿಕೆಯ ಉಪಾಧ್ಯಕ್ಷರಾದ ಸಜೀದ್ ಸಮೀರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ವಿಭಾಗದ ಅಧಿಕಾರಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ನವದೆಹಲಿಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ವಿಶೇಷ ಅತಿಥಿಯಾಗಿ ಪಶು ಸಖಿ : ತಾ.ಪಂ. ಇಓ.

Pashu Sakhi as special guest to watch New Delhi Republic Day Parade : Tel. EO.

ಗಂಗಾವತಿ: ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್ ನ ಡೇ ಎನ್. ಆರ್. ಎಲ್. ಎಮ್ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪಶು ಸಖಿ ಶ್ರೀಮತಿ ಸುಶೀಲಾ ಗಂ. ಮಲ್ಲಿಕಾರ್ಜುನ, ನಿಸರ್ಗ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಡಿಯಲ್ಲಿ ಪಶು ಇಲಾಖೆಯ ಉತ್ತಮ ಪ್ಯಾರಾ ಪಶು ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದು. ಇವರು ಉತ್ತಮ ಸ್ವ ಸಹಾಯ ಸಂಘ, ಸಂಘದ ಸದಸ್ಯರು ಉತ್ತಮ ಮೂರಕ್ಕಿಂತ ಹೆಚ್ಚು ಬ್ಯಾಂಕ್ ಸೌಲಭ್ಯ ಪಡೆದಿದ್ದು, ಪಶು ಸಖಿ ಸದಸ್ಯರು 1 ಲಕ್ಷ ರೂಪಾಯಿ ಸಾಲವನ್ನು ಸ್ವಸಹಾಯ ಸಂಘದಿಂದ ತೆಗೆದುಕೊಂಡಿದ್ದಾರೆ. ಪಶು ಇಲಾಖೆಯ ಕಾಲು ಬಾಯಿ ಬ್ಯಾನಿ ರೋಗ, ಚರ್ಮ ಗಂಟು ರೋಗ, 4 ರಿಂದ 8 ತಿಂಗಳ ಕರುಗಳಿಗೆ ಕಂದು ರೋಗದ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸುವುದರಲ್ಲಿ ಹಾಗೂ ಜಾನುವಾರು ಗಣತಿ ಅಭಿಯಾನದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ರೈತರಿಗೆ ಪಶು ಇಲಾಖೆಯ ಯೋಜನೆಗಳ ಮಾಹಿತಿಯನ್ನು ತಲುಪಿಸುವಲ್ಲಿ ಯಶಸ್ವಿಯಾದ ಶ್ರೀ ರಾಮನಗರ ಪಂಚಾಯಿತಿಯ ಪಶು ಸಖಿ ಮತ್ತು ಅವರ ಪತಿಯನ್ನು ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ವಿಶೇಷ ಅತಿಥಿಯಾಗಿ ಭಾಗವಹಿಸಲು ಕೊಪ್ಪಳ ಜಿಲ್ಲಾ ಪಂಚಾಯತ್, ಸಂಜೀವಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದಿಂದ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ವಿಶೇಷ ಅತಿಥಿಯಾಗಿ ಆಯ್ಕೆಯಾದ ಇವರಿಗೆ ಶ್ರೀ ಪ್ರಕಾಶ್ ವಿ. ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಕೊಪ್ಪಳ ಮತ್ತು ಶ್ರಿಮತಿ ಲಕ್ಷ್ಮಿ ದೇವಿ , ಕಾರ್ಯನಿರ್ವಾಹಕ ಅಧಿಕಾರಿಗಳು, ಗಂಗಾವತಿ ಇವರು ಮಾತನಾಡಿ ದೆಹಲಿ ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ಒಳ್ಳೆಯ ಅವಕಾಶ, ಸುರಕ್ಷಿತ ಪ್ರಯಾಣಕ್ಕೆ ಶುಭ ಹಾರೈಸಿದರು. ಇದೇ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ರಾಜ್ಯೋತ್ಸವ ಪೆರೆಡ್ ವೀಕ್ಷಿಸಲು ಕರ್ನಾಟಕ ರಾಜ್ಯದಿಂದ 08 ಜನ ಕೃಷಿ-ಪಶು ಸಖಿಯರನ್ನು ಹಾಗೂ 4 ಜನ ಸ್ವ-ಸಹಾಯ ಸಂಘದ ಸದಸ್ಯರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ವಿಮಾನದ ವ್ಯವಸ್ಥೆ ಹಾಗೂ ದೆಹಲಿಯಲ್ಲಿ ಊಟ, ವಸತಿ, ಪ್ರಯಾಣದ ವೆಚ್ಚವನ್ನು ಸಂಸ್ಥೆಯಿಂದ ಭರಿಸಲಾಗುತ್ತದೆ.

ಶ್ರೀಸಿದ್ದಗಂಗಾಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ

Pious memory of Sri Siddaganga Shivakumar Swamiji

ತಿಪಟೂರು: ಪದ್ಮಭೂಷಣ ಕರ್ನಾಟಕ ರತ್ನ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಆರನೇ ವರ್ಷದ ಪುಣ್ಯ ಸ್ಮರಣೆಯನ್ನು ಅರಳಿ ಕಟ್ಟೆಯ ,ಹೂವು ಹಣ್ಣು ತರಕಾರಿ ಮಾರುಕಟ್ಟೆ, ದೊಡ್ಡಪೇಟೆ, ಅರಳಿ ಕಟ್ಟೆಯ ಸುತ್ತಮುತ್ತಲಿನ ವ್ಯಾಪಾರಸ್ಥರು, ಹಾಗೂ ಜೆಮ್ಸ್ ಫೌಂಡೇಶನ್ ತಿಪಟೂರು, ಮತ್ತು ತರಕಾರಿ ಗಂಗಾಧರ್ ಸ್ನೇಹ ವೃಂದದ ವತಿಯಿಂದ ,ಪುಣ್ಯ ಸ್ಮರಣೆಯನ್ನು ಸಂಪ್ರದಾಯದಂತೆ ಪೂಜಾ ಮಾಡುವ ಮುಖಾಂತರ ಪೂಜ್ಯರಿಗೆ ನಮನ ಸಲ್ಲಿಸಿ.
ತ್ರಿವಿಧ ದಾಸೋಹಿಗಳ ಹೆಸರಿನಲ್ಲಿ ಅನ್ನ ದಾಸೋಹ ಸೇವೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಡಾ. ಓಹಿಲಾ ತರಕಾರಿ ಗಂಗಾಧರ್, ಫೋಟೋ ಪ್ರಸನ್ನ ಕುಮಾರ್ ,ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಕ್ಯಾಪ್ಟನ್ ಲೋಕೇಶ್ , ನಗರಾಧ್ಯಕ್ಷರು ಬಾ ಜ ಪಾ ಗುಲಾಬಿ ಸುರೇಶ್, ರಂಗಾಪುರ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ಹೊಸಳ್ಳಿ, ಹಾವೇನಹಳ್ಳಿ ಆನಂದ್ ನಿರ್ದೇಶಕರು ಪ್ರಾಥಮಿಕ ಸಹಕಾರ ಸಂಘ ಗೋರಗೊಂಡನಹಳ್ಳಿ, ಉಷಾ ಲೋಕೇಶ್ ಉಪಾಧ್ಯಕ್ಷರು ರೈತ ಸಹಕಾರ ಸಂಘ ಹೊನ್ನವಳ್ಳಿ, ಪ್ರತಿಭಾ ಜೈರಾಮ್, ರಮ್ಯಾ ಬದ್ರಿ, ಶ್ರೀಮತಿ ಛಾಯಾಮಣಿ ಸಿರಿಗಂಧ ಗುರು, ಪರಿಸರ ಪ್ರೇಮಿ ಕೋಟೆ ಅಂಗಡಿ ಮನೆ ಶಿವಣ್ಣ, ಉಮೇಶ್, ಪಚ್ಚೆ ಮುತ್ತು, ವರುಣ, ರವಿ, ಇನ್ನಿತರರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ವರದಿ ಮಂಜು ಗುರುಗದಹಳ್ಳಿ

ಶೃಂಗೇರಿಯ ಕಿರಿಯ ಜಗದ್ಗುರುಗಳು ಪುರ ಪ್ರವೇಶ

Junior Jagadgurus of Sringeri entered the city


ಗಂಗಾವತಿ.. ಶೃಂಗೇರಿಯ ಜಗದ್ಗುರುಗಳಾದ. ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ. ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ. ಕಿರಿಯ ಸ್ವಾಮೀಜಿಗಳಾದ. ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಪ್ರಯುಕ್ತ. ಪುರ ಪ್ರವೇಶ ಮಾಡುವುದರ ಮೂಲಕ. ಸರ್ವ ಭಕ್ತಾದಿಗಳು. ಸಕಲ ವಾದ್ಯ ವೈಭವದೊಂದಿಗೆ. ವಿವಿಧ ಮಹಿಳಾ ಬಜನಾ ಮಂಡಳಿಯವರ.. ಸೊಗಸಾದ ಕೋಲಾಟ. ಭಜನೆ. ಋ ತಿಜ್ವರ . ವೇದ ಮಂತ್ರ ಘೋಷದೊಂದಿಗೆ. ಪೂರ್ಣ ಕುಂಭದೊಂದಿಗೆ. ಸ್ವಾಗತಿಸಿಕೊಳ್ಳುವುದರ ಮೂಲಕ. ವಾಲ್ಮೀಕಿ. ವೃತ್ತದಲ್ಲಿ. ವೇದಮೂರ್ತಿ ಮಹೇಶ್ ಭಟ್ ತಂಡದವರಿಂದ. ಮಹರ್ಷಿ ವಾಲ್ಮೀಕಿ ಅವರಿಗೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ. ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಸರ್ವಲಾoಕೃತ ತೆರೆದ ವಾಹನ ಮೂಲಕ. ಶೋಭಾ ಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ. ನಾಯಕ ಸಮಾಜದ ಮುಖಂಡರುಗಳಾದ ವೀರಭದ್ರಪ್ಪ ನಾಯಕ್. ಜೋಗದ ನಾರಾಯಣಪ್ಪ ನಾಯಕ್ ಸೇರಿದಂತೆ. ತಾಲೂಕ ಬ್ರಾಹ್ಮಣ ಸಮಾಜದ. ಭಾಂಧವರು. ವಿವಿಧ ಸಮಾಜದ. ಮುಖಂಡರು ಯಾವುದೇ. ಭೇದ ಭಾವ ಇಲ್ಲದೆ. ಸರ್ವ ಜನಾಂಗದವರು ಪಾಲ್ಗೊಂಡಿದ್ದು. ವಿಶೇಷವಾಗಿ ಕಂಡುಬಂದಿತು.. ರಾಜಬೀದಿಯ. ಉದ್ದಕ್ಕೂ ಸತೀಶ್ ಗುರೂಜಿ ಅವರ. ನೇತೃತ್ವದ. ಶ್ರೀ ರಾಮನಗರ. ಕಲ್ಗೂಡಿ ಹೇರೂರು . ನವ ಬೃಂದಾವನ ಭಜನಾ ಮಂಡಳಿ ಶಾರದಾ ಶಂಕರ ಭಜನಾ ಮಂಡಳಿ. ಸೇರಿದಂತೆ ವಿವಿಧ ಭಜನಾ ಮಂಡಳಿ . ಮಹಿಳೆಯರು. ದಾರಿ ಉದ್ದಕ್ಕೂ. ವಿಶೇಷ. ಗಮನ ಸೆಳೆದರು. ಕೊಪ್ಪಳ ರೈಚೂರ್ ವಿಜಯನಗರ ಜಿಲ್ಲೆ. ಗದಗ್ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿಶ್ರೀಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ. ರಾಘವೇಂದ್ರ ಮೇಗೂ ರ್ ಸುದರ್ಶನ್ ಜೋಶಿ. ಆರ್ಯವೈಶ್ಯ ಸಮಾಜದ ಬಾಂಧವರು ಪಾಲ್ಗೊಂಡಿದ್ದರು .

ವಿವಿಧ ಅಭಿವೃದ್ಧಿ ಕಾಮಗಾರಿಗೆಶಂಕುಸ್ಥಾಪನೆ- ಉದ್ಘಾಟನೆ

Foundation-Laying- Inauguration of various development works

ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು : ಶಾಸಕ ರಾಯರೆಡ್ಡಿ ಹೇಳಿಕೆ

ಯಲಬುರ್ಗಾ ಪಟ್ಟಣದ ನೂತನ ಸರ್ಕಾರಿ ಉರ್ದು ಪ್ರೌಢ ಕಟ್ಟಡ ಹಾಗೂ ಪಶುಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ನಿರ್ಮಾಣಗೊಂಡಿರುವ ವಸತಿ ನಿಲಯ ಕಟ್ಟಡವನ್ನು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ಅವರು ಉದ್ಘಾಟಿಸಿದರು.

ಬಳಕ ಶಾಸಕರು ಮಾತನಾಡಿ, ನನ್ನ ಅವಧಿಯಲ್ಲಿ ಯಲಬುರ್ಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದು ಅಭಿವೃದ್ಧಿ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು, ಶಿಕ್ಷಣ ಕ್ಷೇತ್ರಕ್ಕೆ ಬಹಳ ಮಹತ್ವದ ನೀಡಿದ್ದು ಕ್ಷೇತ್ರದ ಪ್ರತಿಯೊಬ್ಬ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಉದ್ದೇಶದಿಂದ ಶಿಕ್ಷಣ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕರಾದ ಬಸವರಾಜ ರಾಯರೆಡ್ಡಿಯವರು ಹೇಳಿದರು.

ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು, ಪಕ್ಷದ ಮುಖಂಡರು ಇದ್ದರು.

ಒಳಮೀಸಲು ವಿರುದ್ಧ ಭೋವಿ ಗುರುಪೀಠದ ಸ್ವಾಮಿಜಿಗಳಿಂದ ಆಕ್ಷೇಪಣೆ

Objection by Swamiji of Bhovi Gurupeeth against inner reservation

ಬೆಂಗಳೂರು: ಒಳಮೀಸಲಾತಿ ಕೂಗು ಪರಿಶಿಷ್ಟ ಜಾತಿಗಳಲ್ಲಿಯೇ ಇರುವ ಕೆಲ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರವು ತನ್ನ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ ಸಸಂಸ 5 ಸಿ,ಎಸ್ ಸಿ 2022 : ದಿನಾಂಕ 13.12.202202  ಸಚಿವರಾದ ಶ್ರೀ.ಜೆ.ಸಿ.ಮಾಧುಸ್ವಾಮಿ ರವರ ಅಧ್ಯಕ್ಷತೆಯಲ್ಲಿ ವಿವಿಧ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳಮೀಸಲಾತಿಗೆ ಸಚಿವ ಸಂಪುಟದ ಉಪಸಮಿತಿ ರಚಿಸಿದ್ದು, 2011ರ ಜನಗಣತಿಯನ್ನು ಆಧರಿಸಿ ಸಂಪುಟ ಉಪಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಆದರೆ ಈ ವರದಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಂದ ಇತರೆ ಧರ್ಮಕ್ಕೆ ಮತಾಂತರಗೊಂಡ ದತ್ತಾಂಶಗಳನ್ನು ಕೃಡಿಕರಿಸದೇ ಇದ್ದು ಮತ್ತು ಅವೈಜ್ಞಾನಿಕವಾಗಿರುವ ಕಾರಣ ಇದನ್ನು ತಿರಸ್ಕರಿಸುವುದು.

ಸದರಿ ವರದಿಯು ಆವೈಜ್ಞಾನಿಕವಾಗಿದ್ದು, ಅಂತರಿಕ ಮೀಸಲಾತಿಗೆ ಸಂಬಂಧಿಸಿದಂತೆ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವರ್ಗಿಕರಿಸಿ ಸರ್ಕಾರದ ಆದೇಶ ಸಂಖ್ಯೆ: ಎಸ್.ಡಬ್ಲ್ಯು.ಡಿ 02 ಎಸ್ಎಡಿ 2014 (ಭಾಗ) ಬೆಂಗಳೂರು ದಿನಾಂಕ: 27.03.2023ರಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿ ಸಚಿವ ಸಂಪುಟ ವರದಿ ಸಲ್ಲಿಸಿರುತ್ತದೆ. ಸದರಿ ವರದಿಯು ಅವೈಜ್ಞಾನಿಕವಾಗಿದ್ದು, ಯಾವುದೇ ಸರ್ಕಾರಿಯ ಇಲಾಖೆಯ ಕಡೆಯಿಂದ ಜಾತಿ ಸಮುದಾಯದ ದತ್ತಾಂಶ ಪಡಿಯದೇ ಆತುರವಾಗಿ ವರದಿಯನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಅದನ್ನು ರದ್ದುಪಡಿಸುವಂತೆ ವಿನಂತಿ ಇರುತ್ತದೆ.

ಅದೇ ರೀತಿ ಜಾತಿ/ಸಮುದಾಯಗಳಲ್ಲಿ ಸರಿಯಾಗಿ ವೈಜ್ಞಾನಿಕವಾಗಿ ವರ್ಗಿಕರಣ ಮಾಡದೇ ಅವೈಜ್ಞಾನಿಕ ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯು 2011ರ ಜಾತಿಜನಗಣತಿಯ ಆಧಾರದ ಮೇಲೆ ಮಾಡಿರುವ ಕಾರಣ ಅದನ್ನು ತಿರಸ್ಕರಿಸುವಂತೆ ವಿನಂತಿ ಇರುತ್ತದೆ.

ಸದರಿ ಆಯೋಗಕ್ಕೆ 2011ರ ಜನಗಣತಿಯ ಪ್ರಕಾರ ಅದರಲ್ಲಿದ್ದ ಜಾತಿಯ ಸಮುದಾಯದ ಒಳಮೀಸಲಾತಿ ಮಾಡಲು ಸರ್ಕಾರ ದತ್ತಾಂಶಗಳನ್ನು ಪಡೆದುಕೋದೆವು ಆಯೋ ಆದೇಶ ಮಾಡಿರುತ್ತದೆ, ಸದರಿ ಜನಗಣತಿ ಸುಮಾರು 14-15 ವರ್ಷಗಳ ಹಿಂದೆ ಮಾಡಿದ್ದು ಈಷ್ಟ ಸಾಕ ಬದಲಾವಣೆ ಆಗಿರುತ್ತದೆ. ಸದರಿ ಬದಲಾವಣೆಗೆ ಅನುಗುಣವಾಗಿ ಅವರು / ಮಾತು ಪರಾ ಮನರಿನ ಜನಗಣತಿ/ದತ್ತಾಂಶದ ಪ್ರಕಾರ ಮವಾರ ಕ ಮಾಡುವಂತೆ

ಈಗ ಸದ್ಯಕ್ಕೆ ಇದ್ದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ (ಜಾತಿಯ ಜನ ಗಣತಿಯ) ವರದಿ ಪ್ರಕಾರ ಮಾಡಿದರೆ ಸುಮಾರು 75% ರಿಂದ 80% ವರದಿಯು ವೈಜ್ಞಾನಿಕವಾಗಿರುತ್ತದೆ. ಆದರೆ ಸದರಿ ವರದಿ (ಕಾಂತರಾಜು ಆಯೋಗದ ವರದಿ)ಯನ್ನು ಸರ್ಕಾರ ಇಲ್ಲಿಯವರೆಗೂ ಒಪ್ಪಿಕೊಂಡಿರುವುದಿಲ್ಲ. ಸದರಿ (ಕಾಂತರಾಜು ಆಯೋಗದ ವರದಿಯಲ್ಲಿದ್ದ ಜಾತಿ ಸಮುದಾಯದ ದತ್ತಾಂಶವನ್ನು ಪಡೆದು ಒಳಮೀಸಲಾತಿ ಮಾಡಿದರೆ 75% ರಿಂದ 80% ವೈಜ್ಞಾನಿಕವಾಗಿ ಪರಿಗಣಿಸಿದಂತೆ ಆಗುತ್ತದೆ.

ಹಿಂದು ಸಮಾಜದಲ್ಲಿ ಪರಿಶಿಷ್ಟ ಜಾತಿಯಿಂದ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯಕ್ಕೆ ಮತಾಂತರ ಹೊಂದಿದ್ದರೆ. ಅಂತಹ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯಗಳನ್ನು ಒದಗಿಸಿಕೊಡಬಾರದು ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದರೆ ಮೀಸಲಾತಿ ಕೊಡಲು ಯಾವುದೇ ತಕರಾರು ಇರುವುದಿಲ್ಲ.

ಹೊಸ ಜಾತಿ ಅಥವಾ ಸಮುದಾಯದ ಜನಗಣತಿ ಆಧಾರದ ಮೇರೆಗೆ ಭೋವಿ (ವಡ್ಡರ) ಇವರಿಗೆ ಪ್ರತ್ಯೇಕ ಮೀಸಲಾತಿ ಕೊಡಬೇಕು ಬೇರೆ ಜಾತಿ ಅಥವಾ ಸಮುದಾಯವನ್ನು ಭೋವಿ (ವಡ್ಡರ)ಗೆ ಸೇರಿಸಿ ಮೀಸಲಾತಿ ಕೊಡಬಾರದು. ಭೋವಿ(ವಡ್ಡರ) ಸಮುದಾಯಕ್ಕೆ ಪ್ರತ್ಯೇಕವಾಗಿ ಸೌಲಭ್ಯವನ್ನು ಕಲ್ಪಿಸಬೇಕು.

ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳಾಗಿದ್ದು ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿರುವ ಕುರಿತು ಆದೇಶ ಮಾಡಿರುತ್ತಾರೆ ಅದರಲ್ಲಿ ಎಷ್ಟು ಹುದ್ದೆಗಳು ಪ.ಜಾತಿ ಮತ್ತು ಸಮುದಾಯದ ಅಭ್ಯರ್ಥಿಗಳನ್ನು ನೇಮಕ ಮಾಡಿರುತ್ತಾರೆ. ಎಷ್ಟು ಹುದ್ದೆಗಳು ನೇಮಕ ಮಾಡದೇ ಖಾಲಿ ಇರುತ್ತದೆ ಆ ಖಾಲಿಯಿದ್ದ ಹುದ್ದೆಗಳಿಗೆ ಯಾವ ಕಾರಣದಿಂದ ಆ ಹುದ್ದೆಗಳನ್ನು ಭರ್ತಿ ಮಾಡದೇ ಬಿಟ್ಟಿರುತ್ತಾರೆ ಅವುಗಳ ಬಗ್ಗೆ ಸವಿಸ್ತರವಾದ ವರದಿಯನ್ನು ಸಲ್ಲಿಸಬೇಕೆಂದು ವಿನಂತಿ ಇರುತ್ತದೆ.

2011ರ ಜನಗಣತಿಯಲ್ಲಿದ್ದ ಜಾತಿ ಸಮುದಾಯಗಳ 14-15 ಹಿಂದಿನ ದಾಗಿರುತ್ತದೆ. ಅಲ್ಲದೇ ಸದಾಶಿವ ಆಯೋಗವು ಸಹ  ಆಗಿದ ಸಮುದಾಯಗಳ ದತ್ತಾಂಶ ಮತ್ತು ಮಾಧುಸ್ವಾಮಿರವರ ವರದಿಯು ಸಹ ಅದೇ ದತ್ತಾಂಶವನ್ನು ಪರಿಗಣಿಸಿ ವರದಿ ನೀಡಿರುತ್ತದೆ.

ಆದ್ದರಿಂದ ಈ ಆಯೋಗವು ಪರಿಶಿಷ್ಟ ಜಾತಿ, ಒಳಮೀಸಲಾತಿ ಕುರಿತು ಸರ್ಕಾರ ವರದಿ ಸಲ್ಲಿಸುವ ಸಮಯದಲ್ಲಿ ಕೇಂದ್ರ ಸರ್ಕಾರವು ಹೊಸದಾಗಿ 2025ರ ಜನಗಣತಿ ಮಾಡುತ್ತಿದ್ದು ಆ ಜನಗಣತಿಯ ದತ್ತಾಂಶಗಳನ್ನು ಪರಿಗಣಿಸಿ ಎಲ್ಲಾ ಸಮುದಾಯಗಳಿಗೆ ನ್ಯಾಯಯುತವಾಗಿ ಮೀಸಲಾತಿ ಕಲ್ಪಸುವಂತೆ ಒತ್ತಾಯಿಸಿದರು.