Nidhi Apke Nikat program on 27th Jan
ರಾಯಚೂರು ಜ.21,(ಕರ್ನಾಟಕ ವಾರ್ತೆ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ವತಿಯಿಂದ ನಿಧಿ ಆಪ್ಕೆ ನಿಕತ್2.0 ಕಾರ್ಯಕ್ರಮವು ಜ.27ರಂದು ನಗರದ ಮುನ್ನಾರ್ ಕಾಪು ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪಿಂಚಣಿದಾರರು, ಇಪಿಎಫ್ ಚಂದಾದಾರರು ಮತ್ತು ಉದ್ಯೋಗದಾತರು ಈ ಅವಕಾಶವನ್ನು ಪಡೆಯಬಹುದಾಗಿದೆ.
ನಿಧಿ ಆಪ್ಕೆ ನಿಕತ್ ಎಂಬುದು ಇಪಿಎಫ್ ಮತ್ತು ಎಂಪಿ ಕಾಯ್ದೆ, 1952ರ ನಿಬಂಧನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮಧ್ಯಸ್ಥಗಾರರು, ಸದಸ್ಯರು ಮತ್ತು ಉದ್ಯೋಗದಾತರು ಮತ್ತು ಇಪಿಎಫ್‌ಒ ನಡುವೆ ನಿಕಟ ಸಂವಹನಕ್ಕಾಗಿ ಜಿಲ್ಲಾ ಜಾಗೃತಿ ಶಿಬಿರ ಮತ್ತು ಗ್ರಾಹಕ ಔಟೀಚ್ ಕಾರ್ಯಕ್ರಮವಾಗಿದೆ. ಇದು ಕುಂದುಕೊರತೆಗಳು / ಪ್ರಶ್ನೆಗಳ ಸ್ಥಳದಲ್ಲೇ ಪರಿಹಾರಗಳನ್ನು ಸಹ ಸುಗಮಗೊಳಿಸುತ್ತದೆ. ಇದು ಭವಿಷ್ಯನಿಧಿ, ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳು, ಪ್ರಶ್ನೆಗಳನ್ನು ಪರಿಹರಿಸುವ ನಿರಂತರ ಪ್ರಯತ್ನಗಳ ಒಂದು ಹೆಜ್ಜೆಯಾಗಿದೆ ಮತ್ತು ಪ್ರತಿ ತಿಂಗಳು ನಡೆಯುತ್ತದೆ.
ಈಗ, ಜಂಟಿ ನಿಧಿ ಆಪೈ ನಿಕತ್ 2.0 ಕಾರ್ಯಕ್ರಮವನ್ನು ಪ್ರತಿ ತಿಂಗಳು ಇಪಿಎಫ್‌ಒ ಮತ್ತು ಇಎಸ್‌ಐಸಿ ನಡೆಸಲು ನಿರ್ಧರಿಸಲಾಗಿದೆ. ಎರಡೂ ಸಂಸ್ಥೆಗಳು ಪ್ರತಿ ತಿಂಗಳು ಪರ್ಯಾಯವಾಗಿ ಜಂಟಿಯೇತರ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ಪಿಎಫ್-2ನೇ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.