National Level Abacus and Mental Arithmetic Competition Result

ಗಂಗಾವತಿ: ಇತ್ತೀಚೆಗೆ ಕಲಬುರ್ಗಿಯಲ್ಲಿ ೬ನೇ ರಾಷ್ಟ್ರಮಟ್ಟದ ಅಬಾಕಸ್ & ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ೪೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೦ ವಿದ್ಯಾರ್ಥಿಗಳು ಸೂಪರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಕುಶಿತ್ ಆರಾಧ್ಯ ಯು., ಪ್ರಥಮ್, ಆಯುಷ್ ಎನ್., ಫಾತಿಮ ತು ಜೋರಾ, ಅಮತು ರೆಹಮಾನ್, ಸೋನುಶ್ರೀ ಎ.ಟಿ., ನಿರೀಕ್ಷಾ, ರೋಜಾ ಯು., ರಿತಿಕಾ ಐಲಿ ಮತ್ತು ಶಿವಾಂಶ್ ಕೌಟಿ ಇವರುಗಳು ಪಡೆದುಕೊಂಡಿರುತ್ತಾರೆ.
ಗಡಿನ್ ಹೆಚ್.ಡಿ., ಮೊಹಮ್ಮದ್ ಅಯಾನ್, ಕೃತಿಕಾ ಎಸ್.ಹೆಚ್., ಪ್ರಿಯಾಶ್ರೀ, ಸಾತ್ವಿಕಾ ಆರ್., ಸನಾತನಿ ಹಿರೇಮಠ, ಯಶೋಧರೆ ಧಾನಿ ಈ ಏಳು ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಉಳಿದ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಹಕರಿಸಿದ ಪಾಲಕರಿಗೂ ಜೀನಿಯಸ್ ಅಬಾಕಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಮತ್ತು ಆಡಳಿತಾಧಿಕಾರಿಯಾದ ಬಿ.ಎಸ್ ಪ್ರಕಾಶರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.