Breaking News

ಶಿಸ್ತು, ತಾಳ್ಮೆ, ನಿರಂತರ ಅಧ್ಯಯನವಿದ್ಯಾರ್ಥಿಯ ಯಶಸ್ಸಿನ ಗುಟ್ಟು

Discipline, patience, and continuous study are the secrets of a student’s success.

ಜಾಹೀರಾತು
ಜಾಹೀರಾತು

ಗಂಗಾವತಿ,16:ತಾಲೂಕಿನಲ್ಲಿರುವಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಹಿರೇ ಬೆಣಕಲ್ -2 ರಲ್ಲಿ ಶಾಲಾ ವಾರ್ಷಿಕೋತ್ಸವದ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಹಿರೇಬೆಣಕಲ್ 2 ಮತ್ತು1 ಶಾಲೆಯ ಪ್ರಾಂಶುಪಾಲರು, ನಿಲಯಪಾಲಕರು, ಶಿಕ್ಷಕರು ಮತ್ತು ಎಲ್ಲಾ ಮಕ್ಕಳು ಬಹಳ ಸಂಭ್ರಮ ಸಡಗರದಿಂದ ಅತಿಥಿಗಳನ್ನು ಸ್ವಾಗತಿಸಿದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಉದ್ಘಾಟಕರಾದ ರಾಜಕುಮಾರ ಡಿ.ಎಸ್. ಇತಿಹಾಸ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ  ಕಾಲೇಜ್ ಭಾಗ್ಯನಗರ ಕೊಪ್ಪಳ ಇವರು  ಉದ್ಘಾಟನೆ ನಂತರ ಮಾತನಾಡಿ ಆಧುನಿಕತೆ ಜಗತ್ತಿನಲ್ಲಿ ವಿದ್ಯಾರ್ಥಿ ಗಳು ಅನೇಕ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿದರು. ಸಾಕ್ರೆಟೀಸ್ ಪ್ಲೇಟೋ ಮತ್ತು ಅರಿಸ್ಟಾಟಲ್ ಅವರ ಜೀವನ ಚರಿತ್ರೆಗಳೊಂದಿಗೆ ರೈತ, ಶಿಕ್ಷಕ ಮತ್ತು ಸೈನಿಕರ ಬದುಕಿನ ನಿಸ್ವಾರ್ಥತೆಯ ನ್ನು ಮಕ್ಕಳಲ್ಲಿ ತಿಳಿಸಿ ಹೇಳಿದರು. ಇದರಿಂದ ಮಕ್ಕಳು ಯಶಸ್ಸನ್ನು ಗಳಿಸಲು ಶಿಸ್ತು, ತಾಳ್ಮೆ ನಿರಂತರ ಅಧ್ಯಯನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿ ಹೇಳಿದರು.

   ಕಾರ್ಯಕ್ರಮದ ಘನ 

ಅಧ್ಯಕ್ಷತೆಯನ್ನು ವಹಿಸಿಕೊಂಡ ಹಿರೇಬೆಣಕಲ್ -2ರ ಪ್ರಾಂಶುಪಾಲರಾದ ರಾಮಲಿಂಗಪ್ಪ ಜಿ.ಎಂ.ರವರು ಶಾಲಾ ವಾರ್ಷಿಕ ವರದಿ ವಾಚನ ಮತ್ತು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಹಿರೇಬೆಣಕಲ್ 1ಶಾಲೆಯ ಪ್ರಾಂಶುಪಾಲರಾದ  ಶ್ರೀಮತಿ ರಾಜೇಶ್ವರಿ ಮಂಜುನಾಥ ದೊಡ್ಡಮನಿರವರು ಘನ ಉಪಸ್ಥಿತರಿದ್ದರು.  ದಾದಾ ಖಲಂದರ ಗಣಿತ ಶಿಕ್ಷಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಡಾ: ಎಸ್.ವಿ. ಗೋವಿಂದಮ್ಮ ಕನ್ನಡ ಭಾಷಾ ಶಿಕ್ಷಕರು ಮತ್ತು ಯಮನೂರಪ್ಪ ಆಂಗ್ಲ ಭಾಷಾ ಶಿಕ್ಷಕರು ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎಂ.ಡಿ.ಹನೀಫ್ ಹಿಂದಿ ಭಾಷ ಶಿಕ್ಷಕರು ಗಣ್ಯರಿಗೆ ಸ್ವಾಗತವನ್ನು ಕೋರಿದರು. 

      ಕಾರ್ಯಕ್ರಮದಲ್ಲಿ ಅಮರೇಶ್ ಕಡಗದ ರಾಜ್ಯ ಅಧ್ಯಕ್ಷರು ಎಸ್ ಎಫ್ ಐ ಸಂಘಟನೆ, ಶಿವಮೂರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಮುಸ್ತಾಫ ಪಠಾಣ್ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಕಾರ್ಮಿಕ ಸಂಘ, ಡಾ. ಜಬಿವುಲ್ಲಾ ಕರಾಟೆ ಶಿಕ್ಷಕರು, ಸುರೇಶ್ ಆರೋಗ್ಯ ಇಲಾಖೆ, ಶರಣಯ್ಯ ಸ್ವಾಮಿ ಪತ್ರಕರ್ತರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರೂಪಣೆಯನ್ನು ಶ್ರೀಮತಿ ಸಾವಿತ್ರಿ ಜೀಡಿ ಮತ್ತು ವಂದನಾರ್ಪಣೆಯನ್ನು ಕಿರಣ್ ಶಿಕ್ಷಕರು ಅತ್ಯುತ್ತಮವಾಗಿ ನೆರವೇರಿಸಿ ಕೊಟ್ಟರು. ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ‘ಡಿ’ ದರ್ಜೆಯ ಸಹಾಯಕರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಪೂರ್ಣವಾಗಿ ನೆರವೇರಿಸಿಕೊಟ್ಟರು.

About Mallikarjun

Check Also

ಭಾರತಿ ಟಿ. ಅವರಿಗೆ ಪಿಎಚ್.ಡಿ ಪ್ರಧಾನ

Bharti T. For him, Ph.D ಹಂಪಿ: ಫೆಬ್ರವರಿ.04: ಕನ್ನಡ ವಿಶ್ವವಿದ್ಯಾಲಯ ಹಂಪಿ, ಭಾಷಾ ನಿಕಾಯದ ಕನ್ನಡ ಸಾಹಿತ್ಯ ಅಧ್ಯಯನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.