Breaking News

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in school

ಜಾಹೀರಾತು

ಕಾರ್ಮಿಕ, ಪೊಲೀಸ್, ಸಾರಿಗೆ, ಶಿಕ್ಷಣ ಇಲಾಖೆಯಿಂದ ಮುಂದುವರೆದ ಕಾರ್ಯಾಚರಣೆ

ರಾಯಚೂರು ಜನವರಿ 16 (ಕ.ವಾ.): 04 ಸರಕು ಸಾಗಣೆ ವಾಹನಗಳ‌ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯು ವಾಹನಗಳಲ್ಲಿದ್ದ‌ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಸಂಬಂಧಪಟ್ಟ ಶಾಲೆಗಳಲ್ಲಿ ಪುನಃದಾಖಲು ಮಾಡಿದ್ದಾರೆ.
ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ, ಸಾರಿಗೆ ಇಲಾಖೆಯ ನಿರೀಕ್ಷಕರಾದ ಪ್ರವೀಣ್, ಗಬ್ಬೂರ ಪಿಎಸ್ಐ ಗಂಗಪ್ಪ, ಎಎಸ್ಐ ಶಹಾಲಂ, ಶಿಕ್ಷಣ ಇಲಾಖೆಯ ಇ.ಸಿ.ಓ ರಾಜನಗೌಡ, ಬಿ.ಆರ್.ಪಿ ಶಶಿಧರ, ಸಿ.ಆರ್.ಪಿಗಳಾದ ವೆಂಕಟಾಂಜನೇಯ, ಬಸಯ್ಯ, ಅಂಬಣ್ಣ ಮದಾಳೆ, ಮಹಾದೇವ, ರಘು ಎನ್, ಬಿ.ಎಸ್. ಕೇಶಾಪೂರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಿಕ್ಕಯ್ಯ, ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ನಾಗರಾಜ, ಬಸವರಾಜ ಮೇತ್ರಿ, ಅಕೌಂಟೆಂಟ್ ಹುಸೇನ್ ನಾಯ್ಕ ಹಾಗೂ ಡಿ.ಇ.ಓ ಅಂಬರೀಶ ಅವರು ಜನವರಿ 16ರಂದು ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಕರಪತ್ರ‌ ವಿತರಿಸಿ ಜಾಗೃತಿ:
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಮತ್ತು ಇನ್ನೀತರೆ ಚಟುವಟಿಕೆಗಳಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸಬಾರದು ಹಾಗೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ವಾಹನ ಚಾಲಕರು, ಮಾಲೀಕರಿಗೆ ಹಾಗೂ ಪಾಲಕರಿಗೆ ಪೋಷಕರಿಗೆ ಸ್ಟಿಕ್ಕರ್ ಮತ್ತು ಕರಪತ್ರಗಳನ್ನು ವಿತರಿಸಿ
ಕಾರ್ಮಿಕ ನಿರೀಕ್ಷಕ ಮಲ್ಲಪ್ಪ ಅವರು ಜಾಗೃತಿ ಮೂಡಿಸಿದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.