Makara Sankranti celebration by giving sugarcane to children and parents at Mahan Kids School
ಗಂಗಾವತಿ: ಇಂದು ಮಹಾನ್ ಕಿಡ್ಸ್ ಶಾಲೆಯಲ್ಲಿ ಸಂಕ್ರಾಂತ ಹಬ್ಬದ ನಿಮಿತ್ಯ ಎಲ್ಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಕಬ್ಬನ್ನು ನೀಡುವ ಮೂಲಕ ಸಂಕ್ರಾಂತ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಸಮಯದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ್ ಮಾತನಾಡಿ ಈಗಿನ ಮಕ್ಕಳಿಗೆ ಕಬ್ಬನ್ನು ತಿನ್ನುವುದು ಗೊತ್ತಿಲ್ಲ. ಪಾಲಕರು ಕೂಡ ಆ ಪ್ರಯತ್ನವನ್ನು ಮಾಡುವುದಿಲ್ಲ. ಮಕ್ಕಳಿಗೆ ಕಬ್ಬನ್ನು ತಿನ್ನುವ ರೂಢಿಯನ್ನು ಮಾಡಿದಲ್ಲಿ ಮಕ್ಕಳ ಆರೋಗ್ಯವು ಚೆನ್ನಾಗಿರುತ್ತೆ ಹಾಗೂ ಮಕ್ಕಳ ಹಲ್ಲುಗಳು ಕೂಡ ಚೆನ್ನಾಗಿರುತ್ತವೆ. ಹಾಗಾಗಿ ಪ್ರತಿ ವರ್ಷವೂ ಮಕ್ಕಳಿಗೆ ಹಾಗೂ ಪಾಲಕರಿಗೆ ಶಾಲೆಯಿಂದ ಕಬ್ಬನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕಿಯಾದ ಸವಿತಾ ಗುರುವಿನಮಠರವರು ಶಾಲೆಯ ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಸಮಸ್ತ ಗಂಗಾವತಿ ನಾಗರಿಕರಿಗೆ ಮಕರ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಪೂರ್ಣಿಮಾ, ಮಂಜುನಾಥ, ಚಂದ್ರಶೇಖರ, ಪ್ರಸಾದ್, ಕುಮುದಿನಿ, ಚಂಪಾರಣೆ, ಶಾಂತ ಹಿರೇಮಠ, ಮುತ್ತ, ತೇಜಸ್ವಿನಿ ಸೇರಿದಂತೆ ಇನ್ನಿತರ ಶಿಕ್ಷಕರಿದ್ದರು.