Urban Development Minister’s tour program in Raichur district
ರಾಯಚೂರು ಜನವರಿ 11 (ಕ.ವಾ.): ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್.ಸುರೇಶ ಅವರು ಜನವರಿ 12ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ವಾಯುಮಾರ್ಗವಾಗಿ ಹೊರಟು ಬೆಳಗ್ಗೆ 11.30ಕ್ಕೆ ರಾಯಚೂರ ತಾಲೂಕಿನ ಮಾಸದೊಡ್ಡಿ ಗ್ರಾಮಕ್ಕೆ ಆಗಮಿಸಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧ್ಯಾಹ್ನ 1 ಗಂಟೆಗೆ ಮಾಸದೊಡ್ಡಿಯಿಂದ ನಿರ್ಗಮಿಸಿ ದೇವದುರ್ಗ ತಾಲೂಕಿನ ತಿಂಥಣಿ ಬಿಡ್ಜ್ ಗೆ ತೆರಳಿ ಮಧ್ಯಾಹ್ನ 2 ಗಂಟೆಗೆ ತಿಂಥಣಿಯ ಕನಕ ಗುರುಪೀಠದ ಕಾಗಿನೆಲೆ ಮಹಸಂಸ್ಥಾನದಲ್ಲಿ ನಡೆಯುವ ಹಾಲುಮತ ಸಂಸ್ಕೃತಿ ವೈಭವ 2025ರ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಸಂಜೆ 4 ಗಂಟೆಗೆ ತಿಂಥಣಿ ಬಿಡ್ಜದಿಂದ ಹೊರಟು ಬೆಂಗಳೂರಿನತ್ತ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ.ದೇವರಾಜ ಬಿ ಅವರು ತಿಳಿಸಿದ್ದಾರೆ.