Breaking News

ವಿಕಲಚೇತನರ ಹಿತ ಕಾಪಾಡುತ್ತೇವೆ: ಗುರಪ್ಪ ನಾಯಕ

We will protect the welfare of the disabled: Gurappa Nayaka

ಜಾಹೀರಾತು
ಜಾಹೀರಾತು


ಕುಷ್ಟಗಿ : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಕಲಚೇತನರ ಭೇಡಿಕೆಗಳ ಅನುಸಾರ ಹಂತ ಹಂತವಾಗಿ ಈಡೇರಿಸುವ ಮೂಲಕ ವಿಕಲಚೇತನರ ಹಿತ ಕಾಪಾಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗುರಪ್ಪ ನಾಯಕ ಹೇಳಿದರು.
ಅವರು ತಾಲೂಕಿನ ಜುಮಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದರು.
ಇದೆ ವೇಳೆ ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ಆದಪ್ಪ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 2016 ಅಂಗವಿಕಲ ಅಧಿನಿಯಮವನ್ನು ಎಲ್ಲಾ ವಿಕಲಚೇತನರು ಅಧ್ಯಯನ ಮಾಡಬೇಕು, ಮಾಸಿಕ ಪೋಷಣಾ ಭತ್ಯೆ, ಅಂಗವಿಕಲ ರಿಯಾಯಿತಿ ದರದ ಬಸ್ ಪಾಸ್, ನರೇಗಾ ಯೋಜನೆ, ಆಧಾರ್ ಯೋಜನೆ, ಆರೈಕೆದಾರರಿಗೆ ಪಿಂಚಣಿ, ಅಂಧರಿಗೆ ಉಚಿತ ಲ್ಯಾಪ್ ಟಾಪ್ ಯೋಜನೆ, ವಿಧ್ಯಾರ್ಥಿ ವೇತನ, ಸೇರಿದಂತೆ ಹಲವು ಯೋಜನೆಗಳು ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು , ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ತಮ್ಮೆಲ್ಲರಿಗೂ ಸಿಗುವ ನಿಟ್ಟಿನಲ್ಲಿ ಇಲಾಖೆಯ ಕೊಂಡಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದೇನೆ 21 ತರಹದ ಎಲ್ಲಾ ವಿಕಲಚೇತನರು ಸರ್ಕಾರದ ಮತ್ತು ಸಂಸ್ಥೆಗಳ ಸಂಪರ್ಕದಲ್ಲಿ ಇರುವ ಮೂಲಕ ಮುಖ್ಯವಾಹಿನಿಗೆ ಬರಲು ಪ್ರಯತ್ನ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರು ವಿಕಲಚೇತನರು ಆದ ಶರಣಪ್ಪ ನಾಯಕ ಮಾತನಾಡಿ ವಿಕಲಚೇತನರಾದ ನಾವು ಸಂಘಟಿತರಾಗಬೇಕು ಇಂತಹ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಜನೆಗಳ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಮಮ್ಮ ಸೋಮನಾಥ ಭೋಗಾಪುರ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನ ಪ್ರಮುಖರಾದ ಬಸವರಾಜ ದೇವದುರ್ಗ, ದೊಡ್ಡಬಸವ ದೇವದುರ್ಗ, ದೊಡ್ಡಪ್ಪ ಇದ್ಲಾಪುರ, ಪಾಂಡಪ್ಪ ಟಕ್ಕಳಕಿ , ಪಂಚಾಯತ್ ಸಿಬ್ಬಂದಿ ಶರಣಬಸವ ದೇವದುರ್ಗ, ಕನಕರಾಯ ಗಡಾದ , ರಮೇಶ ದಂಡಿನ, ರಾಜಮ್ಮ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಿಕಲಚೇತನ ವ್ಯಕ್ತಿಗಳು ಭಾಗವಹಿಸಿದ್ದರು.

About Mallikarjun

Check Also

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿನ ರೋಡ ಹಂಪ್ಸ್ ತೆರುವು ಗೊಳಿಸಿ.

Clear road humps on national and state highways. ಗಂಗಾವತಿ: ರಾಜ್ಯದ ಎಲ್ಲಾ ರಸ್ತೆಗಳಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.