Farmers need to advance for the progress of cooperative sector: Shekar Gowda Ullagaddi.
ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಯಲಬುರ್ಗಾ : ರೈತರಿಗೆ ಮಾಹಿತಿಯ ಕೊರತೆಯಿಂದ ಯಲಬುರ್ಗಾ ಮತ್ತು ಕುಕನೂರು ತಾಲೂಕು ಸಹಕಾರಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿಲ್ಲಾ ಈ ಒಂದು ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರಿಗೆ ಸಹಕಾರಿ ಕ್ಷೇತ್ರದ ಕುರಿತು ಸಮರ್ಪಕವಾಗಿ ಮಾಹಿತಿ ನೀಡುವ ಮೂಲಕ ಸಹಾಕಾರಿ ಕ್ಷೇತ್ರವನ್ನು ಬಲಿಷ್ಟಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು RKDCC ಬ್ಯಾಂಕ ನಾಮನೀರ್ದೇಶಿತ ಸದಸ್ಯ ಶೇಖರಗೌಡ ಉಳ್ಳಾಗಡ್ಡಿ ಹೇಳಿದರು.
ಅವರು ಯಲಬುರ್ಗಾ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಭಾಂಗಣದಲ್ಲಿ ಜಾಗೃತಿ ಸಮಾವೇಶ ಆಯೋಜನೆ ಹಿನ್ನಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಹಕಾರಿ ಕ್ಷೇತ್ರದ ಕುರಿತು ರೈತರಿಗೆ ಮಾಹಿತಿ ಕೊರತೆಯಿಂದಾಗಿ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸುವಲ್ಲಿ ಹಿಂದುಳಿದಿದ್ದು ಅಭಿವೃದ್ದಿ ಪಡಿಸುವ ಹೊಸ, ಹೊಸ ಸಹಕಾರ ಕ್ಷೇತ್ರದ ಕಾರ್ಯಕ್ರಮಗಳನ್ನು ಆಯಾ ಕ್ಷೇತ್ರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮಾಡುವ ಮೂಲಕ ಜಾಗೃತಿ ಮೂಡಿಸುವುದು ಅವಶ್ಯವಿದೆ ಎಂದರು.
ನಂತರ ಫಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಯೂನಿಯನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೆಎಂಎಫ್, ಕೆಒಎಫ್, ಟಿಎಪಿಎಂಎಸ್, ಫಿಕಾರ್ಡ್ ಬ್ಯಾಂಕ್ ಹಾಗೂ ಇನ್ನೀತರೇ ಸಹಕಾರಗಳ ಸಂಘಗಳ ಸಹಭಾಗಿತ್ವದಲ್ಲಿ ಸಹಕಾರ ಮೂಡಿಸುವ ಕಾರ್ಯಕ್ರಮ ಅತ್ಯಂತ ಅವಶ್ಯವಿದೆ ಎಂದರು.
ಜನೆವರಿ ಕೊನೆಯ ವಾರ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ತಾಲೂಕಿನಲ್ಲಿ ರೈತರ ಜಾಗೃತಿಗಾಗಿ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನೀಡುವ ಯೋಜನೆಗಳು, ಪ್ರಯೋಜನ, ಸಾಲ ಹಾಗೂ ಅದರ ಸವಲತ್ತುಗಳ ಬಗ್ಗೆ ಮಾಹಿತಿ ಕೊರತೆ ಇದೆ. ಸರಕಾರದ ಅನೇಕ ಸೌಲಭ್ಯಗಳು ತಾಲೂಕಿನ ಪ್ರತಿ ರೈತರಿಗೆ ತಲುಪಿಸಬೇಕು, ಮತ್ತು ಅವರನ್ನು ಸಹಕಾರ ಕ್ಷೇತ್ರದತ್ತ ಸೆಳೆಯಬೇಕಿದೆ, ಹೀಗಾಗಿ ತಾಲೂಕಿನಲ್ಲಿ ಸಿ.ಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದು ಅವರ ಮಾರ್ಗದರ್ಶನದಲ್ಲಿ ರೈತರ ಜಾಗೃತಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಹಕಾರ ರಂಗದಲ್ಲಿ ಬರುವ ತಾಲೂಕಿನ ಎಲ್ಲಾ 34 ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘಗಳ ನಿರ್ದೇಶಕರು, ಎಣ್ಣೆ ಬೆಳೆಗಾರರ ಸಂಘದ ಸದಸ್ಯರು ಸೇರಿಕೊಂಡು ಬೃಹತ್ ಜಾಗೃತಿ ಸಮಾವೇಶ ನಡೆಯಲಿದೆ. ಇದಕ್ಕೆ ತಾಲೂಕಿನ ಎಲ್ಲಾ ಸಹಕಾರ ರಂಗದ ನಿರ್ದೇಶಕರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದರು.
ಸಮಾವೇಶದಲ್ಲಿ ಸಹಕಾರ ಸಚಿವ ಕೆ. ಎನ್ ರಾಜಣ್ಣ ಭಾಗವಹಿಸಲಿದ್ದು, ಕಾನೂನು ಸಚಿವ ಎಚ್ ಕೆ ಪಾಟೀಲ್, ಶಾಸಕ ಬಸವರಾಜ ರಾಯರಡ್ಡಿ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಮಂತ್ರಿ ಮಂಡಲದ ಇನ್ನಿತರ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.