Pilgrimage to Yadagiri Mylapore Temple by Shree Seven Crore Malaya Devotees
ಯಲಬುರ್ಗಾ : ಪಟ್ಟಣದ ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನದಿಂದ ಯಾದಗಿರಿಯ ಮೈಲಾಪೂರ ದೇವಸ್ಥಾನ ಕ್ಕೆ ಕಾಲುನಡಗೆಯಿಂದ ,ಭಕ್ತರು ಪಾದಯಾತ್ರೆ ಅಂಗವಾಗಿ ವಿವಿಧ ಮಾರ್ಗವಾಗಿ ಪಾದಯಾತ್ರೆ ಮೂಲಕ ಪ್ರಯಾಣ ಬೆಳಿಸಿದರು. ಈ ವೇಳೆ ಯಲಬುರ್ಗಾ, ಮುಧೋಳ , ಮಾರನಾಳ, ಗೊರಳ್ಳಿ, ವೀರಾಪುರ, ಹನುಮಪೂರ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಭಕ್ತರು ಸೇರಿಕೊಂಡು ಪ್ರತಿವರ್ಷದಂತೆ ,
ಈ ವರ್ಷವು 20ನೇ ವರ್ಷದ ಪಾದಯಾತ್ರೆ ಪ್ರಾರಂಭಗೊಂಡು ಶ್ರೀ ಬಸವಲಿಂಗೇಶ್ವರ ಸ್ವಾಮಿ ಗದ್ದಿಗೆ , ಶ್ರೀ ಎಲ್ಲಮ್ಮ ದೇವಿ ದೇವಸ್ಥಾನ , ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಶ್ರೀ ದುರ್ಗಾದೇವಿ ದೇವಸ್ಥಾನ, ಅಂಬೇಡ್ಕರ ವೃತ್ತ, ಶ್ರೀ ಭಕ್ತ ಕನಕದಾಸ ವೃತ್ತ, ವಿವಿಧ ಮಾರ್ಗಾವಾಗಿ ಸಕಲ ಮಂಗಳ ವಾದ್ಯದೊಂದಿಗೆ ಭಕ್ತರು ಪಾದಯಾತ್ರೆ ಪ್ರಾರಂಬಿಸಿದರು. ಈ ಸಮಯದಲ್ಲಿ ಸಮಿತಿಯ ಭಕ್ತರಾದ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ಮಲ್ಲಿಕಾರ್ಜನಗೌಡ ಪೋ.ಪಾಟೀಲ, , ಫಕೀರಪ್ಪ ಗಾಣಗೇರ, ಶಿದ್ರಾಮಗೌಡ ಮಾಲಿ ಪಾಟೀಲ, ಅರ್ಚಕ ಚನ್ನಬಸಯ್ಯ ಅರಕೇರಿಮಠ, ನಾಗಪ್ಪ ಇಟಗಿ, ಶಿವಪುತ್ರಪ್ಪ ಕೊಪ್ಪಳ, ರಾಮಣ್ಣ ನೇರೆಗಲ್ಲ, ತಿಪ್ಪಣ್ಣ ಉಪ್ಪಾರ, ಮಹಾದೇವಪ್ಪ ಹಡಪದ, ಮಲ್ಲಿಕಾರ್ಜುನ ಸಾದರಖಾನ, ಶ್ರೀಶೈಲಪ್ಪ ಬನ್ನಿಕೊಪ್ಪ, ನಾಗರಾಜ ದಿವಟರ ಸೇರಿದಂತೆ ಸಕಲ ಭಕ್ತರು ಭಾಗವಹಿಸಿದ್ದರು.