Breaking News

ಗಾವರಾಳ,,!ತಂಗಡಗಿಯವರ ಕ್ವಾರಿಯಲ್ಲಿ ಕುರಿ ಮೈತೊಳೆಯಲು ಹೋಗಿ ಯುವಕ ನೀರು ಪಾಲು,,

Gavarala! The young man went to bathe the sheep in Tangadagi’s quarry and shared the water.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು



ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ತಾಲೂಕಿನ ಗಾವರಾಳ ಸಮೀಪದ ತಂಗಡಗಿ ಗ್ರಾನೆಟ್ ನಲ್ಲಿ ಮಡುಗಟ್ಟಿ (ಹೊಂಡ) ನಿಂತ ನೀರಿನಲ್ಲಿ 18 ವರ್ಷದ ಯುವಕನೊರ್ವ ಕುರಿ ಮೈ ತೊಳೆಯುವ ವೇಳೆ ಕಾಲು ಜಾರಿ ಮೃತ ಪಟ್ಟ ಘಟನೆ ವರದಿಯಾಗಿದೆ.

ಮೃತ ಯುವಕ ಗಾವರಾಳ ಗ್ರಾಮದ ಮಾರುತಿ(18) ತಂ.ಹನುಮಂತ ಗಾವರಾಳ ಎಂದು ಗುರುತಿಸಲಾಗಿದೆ.

ಮಂಗಳವಾರದಂದು ಬೆಳಗ್ಗೆ ಸುಮಾರು 10 ಗಂಟೆಗೆ ಗ್ರಾನೆಟ್ ನಲ್ಲಿರುವ ಹೊಂಡದ ನೀರಿನಲ್ಲಿ ಮೈತೊಳೆಯುವ ವೇಳೆ ಕಾಲು ಜಾರಿ ಮೃತನಾಗಿದ್ದಾನೆ.

ಮೃತ ಯುವಕ ನೀರಿನಲ್ಲಿ ಮುಳುಗಿದ್ದು ಕುಕನೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರ ಹಾಗೂ ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಮೃತ ಯುವಕನ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಕುಕನೂರು ಪೋಲಿಸ್ ಠಾಣೆ ಪಿಎಸ್ಐ ಟಿ.ಗುರುರಾಜ ಘಟನಾ ಸ್ಥಳದಲ್ಲಿ ಹಾಜರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *