Aral Akshay Kumar G., passed the CA exam. The family class is happy.

ಗಂಗಾವತಿ:ಆರಾಳ ಶರಣಪ್ಪ ಹಾಗೂ ಶ್ರೀಮತಿ ಜಯಶ್ರೀ
ದಂಪತಿಗಳ ಸುಪುತ್ರ ಆರಾಳಅಕ್ಷಯಕುಮಾರ
ಗುಡದೂರು ಅವರು ಇತ್ತೀಚೆಗೆ ಸಿ.ಎ ಪರೀಕ್ಷೆಯಲ್ಲಿ
ತೇರ್ಗಡೆಯಾಗಿ ಗಂಗಾವತಿ ತಾಲೂಕಿಗೆ ಕೀರ್ತಿ ತಂದಿರುತ್ತಾರೆ.
ಇವರ ಸಾಧನೆಗೆ ಕುಟುಂಬ ವರ್ಗ ಹಾಗೂ ರ‍್ಹಾಳ ಗ್ರಾಮದಗ್ರಾಮಸ್ಥರು, ಲಯನ್ಸ್ ರೋಟರಿ ಕ್ಲಬ್ ಸದಸ್ಯರು, ನಗರದಹಿರಿಯರು, ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಅಕ್ಷಯಕುಮಾರ ರವರು ತಮ್ಮ ಪ್ರಾಥಮಿಕ ಹಾಗೂ
ಪ್ರೌಢ ಶಿಕ್ಷಣವನ್ನು ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಮುಗಿಸಿ,ಪದವಿಯನ್ನು ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿ,
ಕಷ್ಟಪಟ್ಟು ಓದಿ, ದೇವರ ಅನುಗ್ರಹದಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.ಇವರಿಗೆ ಹಿತೈಷಿಗಳಾದ ಶ್ರೀಮತಿ ರೇಣುಕಾ ಶಿವರಾಮೇಗೌಡ್ರು,ಶಿರಿಗೇರಿ ಬದರಿನಾರಾಯಣ, ಶರಣರೆಡ್ಡಿ ಸಿದ್ದಾಪುರ, ಲಯನ್ಸ್ ಕ್ಲಬ್‌ನಹಿರಿಯರಾದ ಡಾ|| ಜಿ. ಚಂದ್ರಪ್ಪ, ಅಧ್ಯಕ್ಷರಾದ ಲಯನ್ಸುಬ್ರಹ್ಮಣ್ಯೇಶ್ವರರಾವ್, ಡಾ|| ಶಿವಕುಮಾರ ಮಾಲಿಪಾಟೀಲ್, ರೋಟರಿಕ್ಲಬ್‌ನ ಸುರೇಶ ಬಂಬ್, ಎನ್.ಆರ್. ಶ್ರೀನಿವಾಸ ಹಾಗೂಪದಾಧಿಕಾರಿಗಳು, ಸದಸ್ಯರು, ಲಿಟಲ್ ಹಾರ್ಟ್ಸ್ ಶಾಲೆಯ
ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಿಯಾಕುಮಾರಿ ಪೊಲೀನಾ,ಲಿಟಲ್ ಹಾರ್ಟ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥಆಲಂಪಲ್ಲಿಯವರು, ಪ್ರಭಾಕರ ಸಿ ಹಾಗೂ ಇತರರುಶುಭಾಶಯ ಕೋರಿದ್ದಾರೆ.