Annual Sports Day Celebration at Aaron Meerajkar English Medium School

ಗಂಗಾವತಿ: ಜನವರಿ-೦೩ ಮತ್ತು ೦೪ ಎರಡು ದಿನಗಳ ಕಾಲ ನಗರದ ಹೊಸಳ್ಳಿ ರಸ್ತೆಯಲ್ಲಿರುವ “ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ”ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೀನ್ ಮಿರಜ್‌ಕರ್ ಅವರು ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆಯನ್ನ ಸ್ವೀಕರಿಸಿದರು.
“ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಭಿನ್ನ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತರಗತಿವಾರು ವಿವಿಧ ತಂಡಗಳನ್ನು ರಚಿಸಲಾಗಿದೆ ಹಾಗೂ ಶಾಲಾ ಶಿಕ್ಷಕರನ್ನು ನಿರ್ಣಾಯಕರಾಗಿ ನೇಮಿಸಲಾಗಿದೆ.” ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾನಸ ಪಾಟೀಲ್ ಮಾಹಿತಿ ನೀಡಿದರು.
“ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯವಾಗಿವೆ. ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆಯು ಅವಶ್ಯವಾಗಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಜೊತೆಗೆ ಪರೀಕ್ಷೆಯಲ್ಲಿ ಉತ್ತಮವಾದ ಪಲಿತಾಂಶವನ್ನು ನೀಡುತ್ತಿದ್ದಾರೆ.” ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೀನ್ ಮಿರಜ್‌ಕರ್ ಅವರು ತಿಳಿಸಿದರು.
“‘ಸಧೃಢ ಶರೀರದಲ್ಲಿ, ಸಧೃಢ ಮನಸ್ಸಿರುತ್ತದೆ.’ ಅಂತೆಯೆ ಕ್ರೀಡೆಯು ಮಗುವಿನ ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯುವ ಒಂದು ಸಾಧನವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಆರೋಗ್ಯ ಯಾವಾಗಲೂ ಸಹ ಚೆನ್ನಾಗಿ ಇರುತ್ತದೆ.” ಎಂದು ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾAತ್. ಜಿ ಅವರು ನುಡಿದರು.
ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಮಂಜುನಾಥ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ದೈಹಿಕ ಶಿಕ್ಷಕರಾದ ವೀರೇಶ್ ಇವರು ಪ್ರಮಾಣ ವಚನ ಭೋಧಿಸಿದರು. ನಂತರ ಕ್ರೀಡಾ ತಂಡಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್, ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್, ಶಾಲೆಯ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮವನ್ನು ಶನಿವಾರ ಮಕ್ಕಳಿಗೆ ಬಹುಮಾನಗಳನ್ನು ಘೋಸಿಸುವ ಮೂಲಕ ಸಮಾಪ್ತಿಗೊಳಿಸಲಾಯಿತು.