Untouchability awareness program held in Chiribi village

ಕೊಟ್ಟೂರು ತಾಲ್ಲೂಕು ಚಿರಿಬಿ ಗ್ರಾಮದಲ್ಲಿ ಶುಕ್ರವಾರ ಅಸ್ಪೃಶ್ಯತಾ ನಿವಾರಣ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ ಅನ್ನದಾನೇಶ್ ಮಾತನಾಡಿ ಈ ಕಾರ್ಯಕ್ರಮಗಳು ಎಲ್ಲರಿಗೂ ತಲುಪಿ ಅಸ್ಪೃಶ್ಯತೆ ನಿವಾರಣೆ ಆಗಬೇಕು ಎಂದು ಹೇಳಿದರು. ಡಿ.ಎಸ್.ಎಸ್. ಮುಖಂಡರು ಮತ್ತು ವಕೀಲರಾದ ಹನುಮಂತಪ್ಪ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ಮಾತನಾಡಿ, ಮನುಷ್ಯ ಮನುಷ್ಯರಾಗಿ ಬಾಳಬೇಕು, ಕಾನೂನಿನ ಪ್ರಕಾರ ಎಲ್ಲರೂ ಒಂದೇ ಎಂದು ಹೇಳಿದರು. ಸಂವಿಧಾನದ ಅನುಚ್ಛೇದ ೧೭ ರ ಬಗ್ಗೆ ಹೇಳಿದರು ೧೯೮೯ ಪರಿಶಿಷ್ಟ ಜಾತಿ ಕಾಯ್ದೆ ಬಗ್ಗೆ ವಿವರವಾಗಿ ಮಾತನಾಡಿದರು.
ಡಿ.ಎಸ್.ಎಸ್. ಮುಖಂಡರಾದ ಬಿ.ಮರಿಸ್ವಾಮಿ ಮಾತನಾಡಿ ಇಂತಹ ಕಾರ್ಯಕ್ರಮ ಜನರಿಗೆ ತಲುಪಬೇಕು. ಎಲ್ಲ ಇಲಾಖೆಯವರು ಭಾಗವಹಿಸಲು ಜಾಗೃತಿ ಮೂಡಿಸಬೇಕು. ಜಾತಿ ವ್ಯವಸ್ಥೆ ವಿರೋಧ ಮಾಡಬೇಕು, ಎಲ್ಲರಿಗೂ ಬುದ್ಧ, ಬಸವ, ಅಂಬೇಡ್ಕರ್ ಆದರ್ಶ ಆಗಬೇಕು ಎಂದರು. ಜಾತಿ ವ್ಯವಸ್ಥೆ ವಿರೋಧಿಸಿದವರು ಚರಿತ್ರೆಯಲ್ಲಿ ಉಳಿಯುತ್ತಾರೆ ಎಂದರು. ಶ್ರಮಿಕ ವರ್ಗ ಇರುವುದರಿಂದ ನಾವೆಲ್ಲರೂ ಬದುಕುತ್ತಿದ್ದೇವೆ ಎಂದರು. ಕೊಪ್ಪಳ ಜಿಲ್ಲೆ ಮರುಕುಂಬಿ ಘಟನೆ ಮನುಷ್ಯ ಸಮಾಜ ತಲೆತಗ್ಗಿಸುವ ಘಟನೆ ಎಂದರು. ರಾಮ ಸೀತೆಯನ್ನು ಪರಿಚಯಿಸಿದ ವಾಲ್ಮೀಕಿ ಮಂದಿರ ಕಟ್ಟಬೇಕು ಎಂದು ತಿಳಿಸಿದರು. ಕನಕದಾಸರು ಅಸ್ಪೃಶ್ಯತೆ ದೇಶಕ್ಕೆ ದೊಡ್ಡ ಕಳಂಕ ಹಾಗೂ ಮೂಢನಂಬಿಕೆ ತೊಲಗಬೇಕು. ದೇವಸ್ಥಾನದ ಮುಂದೆ ನಿಲ್ಲುವ ಬದಲು ಗ್ರಂಥಾಲಯ ಮುಂದೆ ನಿಲ್ಲಬೇಕು, ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು ಎ.ಡಿ. ನರೇಗಾ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಎ.ಡಿ. ಶಾಹಿಕ ಅಹವದಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಪ್ರೌಢಶಾಲೆಯ ಮುಖ್ಯ ಗುರುಗಳಾದ ಜಿತೇಂದ್ರನಾಥ, ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.