Breaking News

ದೈರ್ಯವಿದ್ದರೇ ಈರಣ್ಣ ಅವರ ಮನೆಗೆ ಮುತ್ತಿಗೆ ಹಾಕಿ,,! ಬಿಜೆಪಿ ಮುಖಂಡ ವಿರೇಶ ಸಬರದ ಸವಾಲು

Besiege Eranna’s house if you have courage! BJP leader Viresh Sabar’s challenge

ಜಾಹೀರಾತು
ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಗುರುವಾರದಂದು ಕಾಂಗ್ರೆಸ್ ಪಕ್ಷದಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ವೀರಣ್ಣ ಹುಬ್ಬಳ್ಳಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯವಾಗಿದೆ ಗುತ್ತಿಯವರು ನಮ್ಮ ವೀರಣ್ಣ ಹುಬ್ಬಳ್ಳಿ ಕ್ಷಮೆಯಾಚಿಸಬೇಕು ಇಲ್ಲವೇ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ ಅವರಿಗೆ ತಾಕತ್ತಿದ್ದರೇ ಮುತ್ತಿಗೆ ಹಾಕಲಿ ನೋಡೋಣ ಎಂದರು.

ಅವರು ಪಟ್ಟಣದ ಎಪಿಎಂಸಿಯ ಗೋಡೌನ ಒಂದರ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜಕೀಯ ಎಂದ ಮೇಲೆ ಟೀಕೆ ಟಿಪ್ಪಣೆ ಇರುವುದು ಸಹಜ, ಆದರೆ ಮಾತನಾಡುವಾಗ ವೀರಣ್ಣ ಹುಬ್ಬಳ್ಳಿಯವರು ರಾಯರಡ್ಡಿಯವರಿಗೆ ಮಾನ್ಯರು ಎಂದು ಯಾವಾಗಲೂ ಸಂಬೋಧನೆ ಮಾಡಿ ಮಾತನಾಡುತ್ತಾರೆ ವಿನಃ ಎಂದು ಏಕವಚನದಲ್ಲಿ ಮಾತನಾಡುವುದಿಲ್ಲಾ ಎಂದರು.

ಆದರೆ ಗುತ್ತಿಯವರು ಹೇಳ್ತಾರೇ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರು ಮುಖಂಡರು ಗೌರವಯುತವಾಗಿ ಮಾತನಾಡುವುದನ್ನು ಕಲಿಸಿದ್ದಾರೆ ಎಂದು ಹೇಳುವ ನಿಮಗೆ ನಿಮ್ಮ ತಂದೆ ವಯಸ್ಸಿನ ವೀರಣ್ಣನವರಿಗೆ ಏಕ ವಚನದಲ್ಲಿ ಮಾತನಾಡಿದ್ದು ಸರಿಯೇ ಮೊದಲು ನೀವು ವೀರಣ್ಣನವರನ್ನು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅವರು ನಮ್ಮ ಸಮಾಜದ ಹಿರಿಯರು ಹಾಗೂ ಜಿಲ್ಲಾಧ್ಯಕ್ಷರು ಅವರಿಗೆ ನೀವು ಈ ರೀತಿಯಾಗಿ ಮಾತನಾಡಿದ್ದು ನಮ್ಮ ಸಮಾಜ ಖಂಡಿಸುತ್ತದೆ ಮತ್ತು ಅವರನ್ನು ಕ್ಷಮೆ ಕೇಳುವಂತೆ ಆಗ್ರಹಿಸುತ್ತದೆ ಒಂದು ವೇಳೆ ನೀವು ಕ್ಷಮೆ ಕೇಳದಿದ್ಧರೇ ನಾವು ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಂತರ ಬಿಜೆಪಿ ನಗರ ಘಟಕ ಕಾರ್ಯದರ್ಶಿ ಕರಬಸಯ್ಯ ಬಿನ್ನಾಳ ಮಾತನಾಡಿ ಸಂಗಪ್ಪ ಗುತ್ತಿಯವರೇ ಮೊದಲು ನೀವು ಮಾತನಾಡುವ ರೀತಿ, ನೀತಿಗಳನ್ನು ಕಲಿತುಕೊಳ್ಳಿ, ನಿಮ್ಮ ಶಾಸಕರ ಆಡಳಿತ ಪಕ್ಷದಲ್ಲಿದ್ದಾಗ ನಮ್ಮ ಶಾಸಕ ಹಾಲಪ್ಪ ಆಚಾರ ಅವರ ಮನೆ ಮುಂದೆ ಸಿಸಿ ರಸ್ತೆ ಮಾಡಿದ್ದು ಯಾರಪ್ಪನ ಮನೆಯ ಸ್ವತ್ತಿನಿಂದ ಅಲ್ಲಾ ಎನ್ನುವುದು ತಿಳಿದು ಮಾತನಾಡಿ, ಹಾಲಪ್ಪನವರು ಮೊದಲ ಬಾರಿ ಮೂರು ಖಾತೆಗಳನ್ನು ನಿಭಾಯಿಸಿ ನಿಷ್ಠಾವಂತ ಸಚಿವರಾಗಿದ್ದರು. ಕೊಟ್ಟಂತ ಖಾತೆಗೆ ನ್ಯಾಯ ಒದಗಿಸಿ ರಾಜ್ಯದಲ್ಲಿ ಮಾದರಿಯಾಗಿದ್ದರು, ಅಂತಹ ಹಿರಿಯರ ಬಗ್ಗೆ ಮಾತನಾಡುವ ಮುನ್ನ ಬಾಯಿಗೆ ಲಗಾಮು ಹಾಕಿಕೊಂಡು ಮಾತನಾಡಿ ಇಲ್ಲದಿದ್ದರೇ ಪರಿಣಾಮ ಎದುರಿಸಬೇಕಾಗುವುದು ಎಚ್ಚರಿಕೆ ಎಂದರು.

ಈ ವೇಳೆ ಮುಖಂಡ ನಾಗಪ್ಪ ಕಲ್ಮನಿ ಮಾತನಾಡಿ ನಮ್ಮ ಪಕ್ಷದ ಹಿರಿಯ ನಾಯಕ ಕೇಂದ್ರ ಮಂತ್ರಿ ಅಮಿತ್ ಶಾ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ್ದು ನಾವು ಹಾಗೂ ನಮ್ಮ ಪಕ್ಷದವರು ಖಂಡಿಸುತ್ತೇವೆ. ಆದರೆ ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ ನೀತಿಗಳ ಕುರಿತು ಒಮ್ಮೆ ಅಧ್ಯಯನ ಮಾಡಿ ಮಾತನಾಡಬೇಕು. ಅಂಬೇಡ್ಕರ್ ಅವರ ಹೆಸರು ಹೆಳಲು ಕಾಂಗ್ರೆಸ್ ನವರ ಯೋಗ್ಯರಲ್ಲಾ ಎಂದರು.

ನಮಗೆ ಕೃಷಿ ಪತ್ತಿನ ಚುನಾವಣೆಗೆ 338 ಜನ ಮಾತ್ರ ಅರ್ಹ ಸದಸ್ಯರು ಎಂಬುದು ಗೊತ್ತಿತ್ತು, ಆದರೆ ಇನ್ನೂಳಿದಂತೆ ಸದಸ್ಯರು ಅರ್ಹರು, ಅನರ್ಹರು ಎಂಬುದು ಗೊತ್ತಿರಲಿಲ್ಲಾ, ಚುನಾವಣೆಯ ದಿನ ಬೆಳಗ್ಗೆ 9 ಗಂಟೆಗೆ 448 ಮತದಾರರು ಅರ್ಹರು ಎಂದು ಗೊತ್ತಾಗಿದ್ದೆ ಆಗ, ಆದರೆ ನಾವು ಚುನಾವಣೆ ಫಲಿತಾಂಶವನ್ನು ಅಂದೇ ಸಾಯಂಕಾಲ ಬಹಿರಂಗಗೊಳಿಸಿ ಎಂದು ಆರ್ ಓ ಅವರನ್ನು ಕೇಳಿದ್ದು ಇದಕ್ಕೆ ರಾಜಕೀಯ ತಂದವರೇ ಕಾಂಗ್ರೆಸ್ ನವರು ಇಲ್ಲದಿದ್ದರೇ ಅಂದೇ ಫಲಿತಾಂಶ ಹೊರ ಬಿಳತಿತ್ತು, ಒಟ್ಟಾರೇ ಇದನ್ನೆಲ್ಲಾ ಹದಗೇಡಿಸಿದ್ದು ಕಾಂಗ್ರೆಸ್ ನವರೇ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಹಾಳಕೇರಿ, ಮಧು ಕಲ್ಮನಿ, ರಮೇಶ ಶಾಸ್ತ್ರೀ, ಶರಣಪ್ಪ ಕಾಳಿ, ರಾಜು ದ್ಯಾಂಪೂರ, ವಿನಾಯಕ ಸರಗಣಾಚಾರ, ಪ್ರಕಾಶ ಬೋರಣ್ಣವರ್, ಜಗದೀಶ ಸೂಡಿ, ಚಂದ್ರು ಬಗನಾಳ, ಬಸವರಾಜ ಬಡಗೇರ, ಮಂಜು ಚನ್ನಪ್ಪನಹಳ್ಳಿ, ಮಂಜು ಕಾಳಿ, ಲಕ್ಷ್ಮಣ ಕಾಳಿ ಇನ್ನಿತರರು ಇದ್ದರು.

About Mallikarjun

Check Also

ಜಿಲ್ಲಾ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಗೆ ಒತ್ತು:ಸಚಿವಎನ್.ಎಸ್. ಭೋಸರಾಜು

Emphasis on development of district science centers: Minister N.S. Bhosaraju ವರದಿ : ಪಂಚಯ್ಯ ಹಿರೇಮಠಕೊಪ್ಪಳ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.