Breaking News

ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವವಕ್ಕೆ ಸ್ವಾಮೀಜಿಗಳು, ಜಿಲ್ಲಾಧಿಕಾರಿಗಳು ಸೋಮವಾರ ಚಾಲನೆ ನಿಡಿದರು

Swamijis and District Collectors started drive for Sri Guru Kottureswara Swami Kartikotsavam of Kottur on Monday.

ಜಾಹೀರಾತು



ಕೊಟ್ಟೂರು : ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವದಲ್ಲಿ ಸ್ವಾಮೀಜಿಗಳು, ಜಿಲ್ಲಾಧಿಕಾರಿಗಳು ಕೊಬ್ಬರಿ ಸುಟ್ಟರು.
ವಿಜೃಂಭಣೆಯಿಂದ ಜರುಗಿದ ಕಾರ್ತಿಕೋತ್ಸವ
ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು.


ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕಾರ್ತಿಕೋತ್ಸವ ಪ್ರಯುಕ್ತ ಸೋಮವಾರ ಸಂಜೆ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಉತ್ತಂಗಿ ಮಠದ ಶ್ರೀ ಸೋಮಶಂಕರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ತೀಕೋತ್ಸವಕ್ಕೆ ಸಂಜೆ ೬ಗಂಟೆಗೆ ಚಾಲನೆ ನೀಡಲಾಯಿತು.
ದೇವಸ್ಥಾನ ಮುಂಭಾಗದಲ್ಲಿ ನೂರಾರು ಪ್ರಣತಿಗಳನ್ನು ಇರಿಸಲಾಗಿತ್ತು. ಕೊಬ್ಬರಿ ಸುಡುವುದಕ್ಕಾಗಿ ಚೌಕಕಾರದ ತೊಟ್ಟಿಯನ್ನು ನಿರ್ಮಿಸಲಾಗಿತ್ತು. ಸಂಜೆ ಕಳೆಯತ್ತಿದ್ದಂತೆ ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಭಕ್ತರ ದಂಡು ದೀಪಗಳಿಗೆ ಎಣ್ಣೆ ಹಚ್ಚಿ ಕವಿದ ಕತ್ತಲು ಸರಿದು ಬೆಳಕು ಚೆಲ್ಲಲಿ ಎಂಬಂತೆ ಪ್ರಾರ್ಥಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎ.ಎಸ್.ಪಿ. ಸಲೀಂಪಾಷ, ದೇವಸ್ಥಾನದ ಇಒ ಹನುಮಂತಪ್ಪ, ಧರ್ಮಕರ್ತ ಎಂ ಕೆ ಶೇಖರಯ್ಯ ಸ್ವಾಮೀಜಿಗಳೊಂದಿಗೆ ಪ್ರಣತಿಗಳಲ್ಲಿ ದೀಪ ಬೆಳಗಿಸಿದರು. ಕಾರ್ತಿಕೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ನೆರೆದಿದ್ದ ಭಕ್ತರು ಪ್ರಣತಿಗಳಿಗೆ ಎಣ್ಣೆ ಹಾಕಿ ದೀಪ ಹಚ್ಚಿ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಜೀವನದ ಕೆಟ್ಟ ದಿನಗಳು ಇನ್ನಿಲವಾಗಲಿ ಎಂಬ ಸಂಕೇತ ಎಂಬAತೆ ಬೆಂಕಿಗೆ ಕೊಬ್ಬರಿ ಹಾಕಿ ಸುಟ್ಟರು.
ಮುಖಂಡರಾದ ಕೆ.ಮಂಜುನಾಥಗೌಡ, ನಾಗರಾಜಗೌಡ, ಕೆ.ಗುರುಸಿದ್ದನಗೌಡ, ಪ್ರೇಮಾನಂದಗೌಡ, ಅಜ್ಜನಗೌಡ, ದೇವಸ್ಥಾನ ಸಿಬ್ಬಂದಿಗಳಾದ ದೀಪು, ಕಾರ್ತಿಕ, ಪ್ರಶಾಂತ, ರೇವಣ್ಣ, ನಾಗರಾಜ, ಕೊಟ್ರಮ್ಮ ಸೇರಿ ಇತರರು ಇದ್ದರು.
ಲಕ್ಷ ದೀಪೋತ್ಸವ : ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಶ್ರೀ ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿಯವರು ಲಕ್ಷ ದೀಪೋತ್ಸವ ಆಯೋಜಿಸಿದ್ದರು. ತೇರುಗಡ್ಡೆಯಿಂದ ತೇರು ಬೀದಿಯ ಎರಡೂ ಬದಿಗಳಲ್ಲಿ ದೀಪಗಳನ್ನು ಇರಿಸಿದ್ದರು.

About Mallikarjun

Check Also

ಹೆಚ್ಚಿನ ಬಡ್ಡಿಯಾಸೆ ತೋರಿಸಿ ಬಡವರನ್ನು ವಂಚಿಸುವವರ ಸಂರಕ್ಷಣೆಗೆ ಕಾನೂನು : ವಿಧೇಯಕ ಅಂಗೀಕಾರ

Law to protect those who defraud the poor by charging high rates of interest: Bill …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.