Breaking News

ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


A petition was submitted to the District Labor Officers regarding the problems of building and other construction workers

ಜಾಹೀರಾತು


ಕೊಪ್ಪಳ: ಎ ಐ ಯು ಟಿ ಯು ಸಿ ಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ನಿರಂತರ ಕಾರ್ಮಿಕರ ಸಮಸ್ಯೆಗಳ ಕುರಿತು ಹೋರಾಟ ಕಟ್ಟುತ್ತಿದೆ. ಕಾರ್ಮಿಕರು ಹಲವಾರು ಇಲಾಖೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದಾಗ  ವಿಳಂಬ ಮಾಡಲಾಗುತ್ತಿದೆ. ಆರೋಗ್ಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿರುವ ಕಾರ್ಮಿಕರ ಹಣವನ್ನು ಕಡಿಮೆ ನೀಡಲಾಗುತ್ತಿದೆ. ಕಾರ್ಮಿಕರ ಹಲವಾರು ಅರ್ಜಿಗಳನ್ನು ವಿಳಂಬ ಮಾಡಿ ರಿಜೆಕ್ಟ್ ಮಾಡಲಾಗುತ್ತಿದ್ದು  ರಿನಿವಲ್ ಅರ್ಜಿಗಳನ್ನು  ಕೂಡ  ರಿಜೆಕ್ಟ್ ಮಾಡಲಾಗುತ್ತಿದೆ.ಈ ಕುರಿತು ಹಲವಾರು ಬಾರಿ  ಇಲಾಖೆ ಗಮನಕ್ಕೆ ತಂದಿದ್ದರು  ಯಾವುದೇ ಕ್ರಮ ಕೈಗೊಂಡಿಲ್ಲ. ಬೇಕಾದವರಿಗೆ ಸೌಲಭ್ಯ  ಕೆಲವೇ ದಿನಗಳಲ್ಲಿ  ನೀಡಲಾಗುತ್ತಿದ್ದು  ಇದನ್ನು ಸಂಘದಿಂದ ಖಂಡಿಸುತ್ತಿದ್ದೇವೆ.ಇಲಾಖೆಯ ಎಲ್ಲಾ ಸಹಾಯಧನ ಅರ್ಹ ಎಲ್ಲಾ ಕಾರ್ಮಿಕರಿಗೆ ಸೀಬೇಕೆನ್ನುವುದು ಸಂಘದಿಂದ ಒತ್ತಾಯಿಸಲಾಗುತ್ತಿದೆ. ಶೈಕ್ಷಣಿಕ ಸಹಾಯಧನ, ಮದುವೆ ಸಹಾಯದನ, ಆರೋಗ್ಯ ಸಹಾಯಧನ, ಡೆಲೆವರಿ, ಇನ್ನಿತರ ಸೌಲಭ್ಯಗಳು  ಸರಿಯಾದ ರೀತಿಯಲ್ಲಿ ಎಲ್ಲಾ  ಅರ್ಹತೆ ಹೊಂದಿದ ಕಾರ್ಮಿಕರಿಗೆ  ಕಾಲದ ಮಿತಿಯಲ್ಲಿ ಒದಗಿಸಬೇಕು. ಆದರೆ ಕೆಲವು  ಅರ್ಹತೆ ಇಲ್ಲದ  ಕಾರ್ಮಿಕರಿಗೂ ಕೂಡ  ಸೌಲಭ್ಯ ಮತ್ತು  ಅರ್ಜಿಗಳನ್ನು  ಅಪ್ರುವಲ್ ಮಾಡಲಾಗುತ್ತಿದೆ. ಕಾರ್ಮಿಕರಿಗೆ ಸರ್ಕಾರದಿಂದ ಘೋಷಿಸಿದ ಎಲ್ಲಾ  ಸೌಲಭ್ಯಗಳನ್ನು  ಕೂಡಲೇ ಒದಗಿಸಬೇಕೆಂದು  ಮುಂದಿನ ದಿನಗಳಲ್ಲಿ  ಸಂಘಟಿತ ಹೋರಾಟವನ್ನು ಮಾಡಲಾಗುವುದು. ಕೂಡಲೇ  ಎಲ್ಲಾ ಅರ್ಹತೆಯುಳ್ಳ ಕಾರ್ಮಿಕರಿಗೆ  ಸರಿಯಾದ ಸಮಯಕ್ಕೆ  ಅರ್ಜಿಗಳನ್ನು ವಿಲೇವಾರಿ ಮಾಡಿ  ಸಹಾಯಧನವನ್ನು  ಕೂಡಲೇ ಬಿಡುಗಡೆ ಮಾಡಬೇಕೆಂದು  ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಕೊಪ್ಪಳ ಜಿಲ್ಲಾ ಸಮಿತಿಯಿಂದ  ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶರಣು ಗಡ್ಡಿ, ಕೊಪ್ಪಳ ತಾಲೂಕ ಮುಖಂಡರಾದ ನಾಗಪ್ಪ ಬಿಕ್ಕನಹಳ್ಳಿ,ಮುಖಾಂಡರಾದ ಮಂಗಳೇಶ ರಾತೋಡ್,ಹನುಮಂತ ಕಟೀಗಿ, ಈರಣ್ಣ ತಾಳಕನಕಪುರ, ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

20250727 131903 collage.jpg

ಘನತೆ, ಗೌರವ ಹಾಗೂ ಸ್ವಾಭಿಮಾನ ಕರ್ತವ್ಯ ನಿಷ್ಠೆಯಲ್ಲಿದೆ -ಸೋಮಶೇಖರ ಗೌಡ ಪಾಟೀಲ್. .

Dignity, respect and self-respect lie in loyalty to duty - Somashekhara Gowda Pati ಗಂಗಾವತಿ -27-ನಮ್ಮ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.